ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ZIM: ʻವಿರಾಟ್‌ ಕೊಹ್ಲಿ ತರ ಆಡಿʼ- ತಿಲಕ್‌ ವರ್ಮಾಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್‌ ಕೈಫ್‌!

ಟಿ20ಐ ತಂಡದಲ್ಲಿ ತನ್ನ ಮೂಲ ಆಟದ ಯೋಜನೆಗೆ ಬದ್ಧವಾಗಿರಲು ತಿಲಕ್ ವರ್ಮಾ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಸಲಹೆ ನೀಡಿದ್ದಾರೆ. ಹೊರಗಿನ ಟೀಕೆ ಮತ್ತು ಒತ್ತಡಗಳಿಗೆ ಗಮನ ನೀಡದೆ, ‘ಆಂಕರ್’ ಪಾತ್ರವನ್ನು ನಿರಂತರವಾಗಿ ನಿರ್ವಹಿಸುವಂತೆ ಅವರು ಯುವ ಬ್ಯಾಟ್ಸ್‌ಮನ್‌ಗೆ ಕರೆ ನೀಡಿದ್ದಾರೆ.

ತಿಲಕ್‌ ವರ್ಮಾಗೆ ಸಲಹೆ ನೀಡಿದ ಮೊಹಮ್ಮದ್‌ ಕೈಫ್‌.

ನವದೆಹಲಿ: ಟಿ20ಐ ಪಂದ್ಯಗಳಲ್ಲಿ ತಿಲಕ್ ವರ್ಮಾ (Tilak Verma) ‘ವಿರಾಟ್ ಕೊಹ್ಲಿ ಪಾತ್ರ’ವನ್ನು ನಿರ್ವಹಿಸಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್(Mohammad kaif) ಸಲಹೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2026ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ತಿಲಕ್ ವರ್ಮಾ ಫಾರ್ಮ್‌ ಕಂಡುಕೊಳ್ಳಲು ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೈಫ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ಟೂರ್ನಿಯಲ್ಲಿ ತಿಲಕ್ ವರ್ಮಾ ಹೆಚ್ಚು ಆಂಕರ್ ಪಾತ್ರವನ್ನು ವಹಿಸಿಕೊಂಡಿದ್ದು, ಐದು ಪಂದ್ಯಗಳಲ್ಲಿ 118 ಸ್ಟ್ರೈಕ್ ರೇಟ್‌ನೊಂದಿಗೆ 107 ರನ್ ಗಳಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಹಂತದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದ ಬಳಿಕ ಅವರು ವಿಫಲರಾಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಮಾರ್ಕೊ ಯೆನ್ಸೆನ್ ಎಸೆತದಲ್ಲಿ ದೊಡ್ಡ ಶಾಟ್ ಆಡಲು ಪ್ರಯತ್ನಿಸಿ, ಕ್ವಿಂಟನ್ ಡಿ ಕಾಕ್ ಕೈಗೆ ಕ್ಯಾಚ್ ಕೊಟ್ಟು ಔಟಾದರು. ಇದರ ಬೆನ್ನಲ್ಲೆ ಅವರ ಆಟದ ಶೈಲಿಯನ್ನು ಸುನೀಲ್ ಗವಾಸ್ಕರ್ ಟೀಕಿಸಿದ್ದರು. ಅದೇ ಅಭಿಪ್ರಾಯವನ್ನು ಮೊಹಮ್ಮದ್ ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಧ್ವನಿಸಿದರು. ತಂಡದ ನಿರ್ವಹಣಾ ಸಮಿತಿ ತಿಲಕ್ ವರ್ಮಾಗೆ ತಮ್ಮ ಮೂಲ ಪಾತ್ರವಾದ ಆಂಕರ್ ಜವಾಬ್ದಾರಿಯನ್ನು ಮುಂದುವರಿಸಲು ಸ್ಪಷ್ಟ ಸೂಚನೆ ನೀಡಬೇಕು ಎಂದು ಕೈಫ್ ಹೇಳಿದರು.

ಗೌತಮ್‌ ಗಂಭೀರ್‌ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್‌ ಶೆಹಜಾದ್‌!

“ತಿಲಕ್ ವರ್ಮಾಗೆ ತಮ್ಮದೇ ಆದ ಆಟದ ಶೈಲಿ ಇದೆ. ಅವರು ಕಡಿಮೆ ಸ್ಟ್ರೈಕ್ ರೇಟ್‌ನಲ್ಲೂ ಆಡಲು ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ದೊಡ್ಡ ಶಾಟ್ ಹೊಡೆಯಲು ಪ್ರಯತ್ನಿಸುವಾಗ ಔಟಾದರು. ಸ್ಟ್ರೈಕ್ ರೇಟ್ ಬಗ್ಗೆ ಒತ್ತಡ ಅವರ ಮೇಲೆ ನಿರ್ಮಾಣವಾಗಿತ್ತು. ಆಟಗಾರನಾಗಿ ಹೊರಗೆ ಏನು ಮಾತನಾಡಲಾಗುತ್ತಿದೆ ಎಂಬುದನ್ನು ನೀವು ಗಮನಿಸುತ್ತೀರಿ. ಆದರೆ ಆಟಗಾರನು ತನ್ನ ಪಾತ್ರಕ್ಕೆ ಬದ್ಧವಾಗಿರಲು ಹೇಳುವುದು ನಿರ್ವಹಣೆಯ ಕೆಲಸ. ಅವರು ವಿರಾಟ್ ಕೊಹ್ಲಿ ಪಾತ್ರವನ್ನು ನಿರ್ವಹಿಸಬೇಕು. ಕ್ರೀಸ್‌ನಿಂದ ಮುಂದೆ ಬಂದು ದೊಡ್ಡ ಶಾಟ್‌ಗೆ ಹೋಗುವ ಮೂಲಕ ತಮ್ಮ ಆಟದ ಯೋಜನೆಯಿಂದ ದೂರ ಸರಿದರು. ಇತರರು ಏನು ಹೇಳುತ್ತಾರೆ ಎಂಬುದನ್ನು ಕೇಳುತ್ತಾ ಇದ್ದರೆ ನೀವು ನಿಮ್ಮ ಆಟವನ್ನು ಆಡಲು ಸಾಧ್ಯವಿಲ್ಲ,” ಎಂದು ಕೈಫ್ ತಿಳಿಸಿದ್ದಾರೆ.

IND vs ZIM: ಟೀಮ್‌ ಬಸ್‌ನಲ್ಲಿ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಕ್ಲಾಸ್‌ ತೆಗೆದುಕೊಂಡ ಗೌತಮ್‌ ಗಂಭೀರ್‌!

ಆಂಕರ್‌ ಪಾತ್ರವನ್ನು ನಿರ್ವಹಿಸಿ

ಭಾರತ ತಂಡದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಆಯ್ಕೆಗಳು ಸಾಕಷ್ಟು ಇರುವುದನ್ನು ಕೈಫ್ ಉಲ್ಲೇಖಿಸಿದರು. ಇಂತಹ ಪರಿಸ್ಥಿತಿಯಲ್ಲಿ ತಿಲಕ್ ವರ್ಮಾ ಇನಿಂಗ್ಸ್‌ನ್ನು ಸ್ಥಿರಗೊಳಿಸಿ ಕೊನೆಯವರೆಗೂ ಕೊಂಡೊಯ್ಯುವ ಆಂಕರ್ ಪಾತ್ರವನ್ನು ನಿಭಾಯಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ವಿರಾಟ್‌ ಕೊಹ್ಲಿ ರೀತಿ ಚೇಸ್ ಮಾಸ್ಟರ್ ಆಗಬೇಕಾದರೆ ಮೊದಲು 20ನೇ ಓವರ್‌ವರೆಗೆ ಬ್ಯಾಟಿಂಗ್ ನಡೆಸಬೇಕು. ತಿಲಕ್ ವರ್ಮಾ ಹೊಡೆಯಲು ಪ್ರಯತ್ನಿಸಿ ಬೇಗ ಔಟಾದರು. ನಿಮ್ಮ ಪಾತ್ರ ಏನು? ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಎಲ್ಲರೂ ಆಕ್ರಮಣಕಾರಿ ಕ್ರಿಕೆಟ್ ಆಡುತ್ತಾರೆ. ಕನಿಷ್ಠ ಒಬ್ಬ ಆಟಗಾರನಾದರೂ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಬೇಕು,” ಎಂದು ಕೈಫ್ ಸಲಹೆ ನೀಡಿದರು.