ಗೌತಮ್ ಗಂಭೀರ್ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್ ಶೆಹಜಾದ್!
T20 World Cup: ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ಅವರು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ತಂಡದ ವಾತಾವರಣದಲ್ಲಿ ರಾಜಕೀಯವನ್ನು ತಂದಿದ್ದಾರೆ ಎಂದು ಗಂಭೀರ ಆರೋಪಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಅನುಭವಿಸಿದ ಸೋಲಿನ ನಂತರ ಗೌತಮ್ ಗಂಭೀರ್ ಮೇಲೆ ಒತ್ತಡ ಹೆಚ್ಚಾಗಿದೆ.
ಗೌತಮ್ ಗಂಭೀರ್ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ. -
ನವದೆಹಲಿ: ಮಾಜಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ (Ahmed Shehzad) ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ಭಾರತ ತಂಡದ ವಾತಾವರಣದಲ್ಲಿ ರಾಜಕೀಯವನ್ನು ಅವರು ತಂದಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದ ನಂತರ ಗಂಭೀರ್ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸೋಲಿನಿಂದ ಭಾರತ ತಂಡದ ಸೆಮಿಫೈನಲ್ ಹಾದಿ ಸ್ವಲ್ಪ ಕಠಿಣವಾಗಿದೆ.
ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಗಂಭೀರ್ ತೆಗೆದುಕೊಂಡಿದ್ದ ಕೆಲವು ಆಯ್ಕೆಗೆ ಸಂಬಂಧಿಸಿದ ನಿರ್ಧಾರಗಳು ಕೂಡ ಟೀಕೆಗೆ ಗುರಿಯಾಗಿವೆ. ವಿಶೇಷವಾಗಿ ಮಹತ್ವದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ ಕ್ರಮಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ ಅಶ್ವಿನ್ ಸೇರಿದಂತೆ ಹಲವರು ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಹ್ಮದ್ ಶೆಹಜಾದ್, 2019ರಿಂದ 2024ರವರೆಗೆ ಪೂರ್ವ ದೆಹಲಿಯಿಂದ ಸಂಸದರಾಗಿದ್ದ ಅವಧಿಯಲ್ಲಿ ಗಂಭೀರ್ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.
ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಆರಿಸಿದ ಗವಾಸ್ಕರ್; ವೇಗಿಗೆ ಕೊಕ್!
ಭಾರತ ತಂಡದಲ್ಲಿನ ವರ್ಚಸ್ಸಿಗೆ ಧಕ್ಕೆ
“ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಸಂಪೂರ್ಣ ಏಕಾಗ್ರತೆ ಅಗತ್ಯ. ಗಂಭೀರ್ ರಾಜಕೀಯಕ್ಕೆ ಪ್ರವೇಶಿಸಿದರು, ಹಾಗಾಗಿ ಅವರ ಮನೋಭಾವದಲ್ಲಿ ಬದಲಾವಣೆಯಾಗಿದೆ ಎಂಬುದು ಸ್ಪಷ್ಟ. ರಾಜಕೀಯದಲ್ಲಿ ಅವರು ಹೆಚ್ಚಿನ ಯಶಸ್ಸು ಕಾಣಲಿಲ್ಲ, ಆದರೆ ಆ ರಾಜಕೀಯ ಮನೋಭಾವವನ್ನೇ ತಂಡದ ವಾತಾವರಣಕ್ಕೆ ತಂದಂತಿದೆ. ಗೌತಮ್ ಗಂಭೀರ್ ಅವರ ಈ ಎಲ್ಲಾ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಹಾನಿಯಾಗಿದೆ,” ಎಂದು ಶೆಹಜಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ
ಭಾರತ ತಂಡದ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳದಿರುವುದಕ್ಕಾಗಿ ಗೌತಮ್ ಗಂಭೀರ್ ಅವರನ್ನು ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಅಹ್ಮದ್ ಶೆಹಬಾದ್ ಟೀಕಿಸಿದರು.ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲೇ ಅವಕಾಶ ಪಡೆದ ಕುಲ್ದೀಪ್ ಯಾದವ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
IND vs ZIM: ಟೀಮ್ ಬಸ್‌ನಲ್ಲಿ ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾಗೆ ಕ್ಲಾಸ್ ತೆಗೆದುಕೊಂಡ ಗೌತಮ್ ಗಂಭೀರ್!
“ತಂಡದ ಸಂಪನ್ಮೂಲಗಳನ್ನು ಸರಿಯಾಗಿ ಬಳಸಲಾಗುತ್ತಿಲ್ಲ – ಗೌತಮ್ ಗಂಭೀರ್ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ನಿಮ್ಮ ಬಳಿ ಕುಲ್ದೀಪ್ ಯಾದವ್ ಎಂಬ ಪಂದ್ಯ ವಿಜೇತ ಆಟಗಾರ ಇದ್ದರೂ, ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿಲ್ಲ,” ಎಂದು ಪಾಕ್ ಮಾಜಿ ಆಟಗಾರ ಆರೋಪ ಮಾಡಿದ್ದಾರೆ.
ಕುಲ್ದೀಪ್ ಯಾದವ್‌ಗೆ ಶೆಹಜಾದ್ ಬೆಂಬಲ
“ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಒಂದು ಘಟನೆ ನಡೆದಿದೆ, ಅಲ್ಲಿ ಸೂರ್ಯಕುಮಾರ್ ಯಾದವ್ ಅವರು ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಂತೆ ಕಂಡುಬಂದಿತು. ಈಗ ಕೆಲವರು ಶಿಸ್ತಿನ ಸಮಸ್ಯೆ ಅಥವಾ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಉಂಟಾದ ಗೊಂದಲದ ಕಾರಣದಿಂದ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳುತ್ತಿದ್ದಾರೆ. ಇಲ್ಲವಾದರೆ ಅವರನ್ನು ಕೈಬಿಡಲಾಗುತ್ತಿರಲಿಲ್ಲ. ಕುಲ್ದೀಪ್ ಯಾದವ್ ತಂಡಕ್ಕೆ ವಿಭಿನ್ನತೆ ತರುತ್ತಾರೆ ಮತ್ತು ಅವರು ಪಂದ್ಯ ವಿಜೇತ ಆಟಗಾರ,” ಎಂದು ಅವರು ಹೇಳಿದ್ದಾರೆ.