ಶತಕ ಬಾರಿಸಿದ ಬಳಿಕ ಮುಂಬೈ ತಂಡದ ಮಾಜಿ ಸಹ ಆಟಗಾರರ ಜೊತೆ ಪೃಥ್ವಿ ಶಾ ಕಿರಿಕ್! ವಿಡಿಯೊ
ದೇಶಿ ಕ್ರಿಕೆಟ್ ಋತುವಿನ ಆರಂಭಕ್ಕೂ ಮುನ್ನ ಮುಂಬೈ ಮತ್ತು ಮಹಾರಾಷ್ಟ್ರ ನಡುವಿನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನಯ ತೋರಿ ಶತಕವನ್ನು ಬಾರಿಸಿದ್ದಾರೆ. ಮುಂಬೈ ತಂಡವನ್ನು ತೊರೆದು ಮಹಾರಾಷ್ಟ್ರ ಪರ ಆಡುತ್ತಿರುವ ಅವರು, ಅಭ್ಯಾಸ ಪಂದ್ಯದಲ್ಲಿ ತಮ್ಮ ಮಾಜಿ ಸಹ ಆಟಗಾರರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

ಮುಂಬೈ ಆಟಗಾರರ ಜೊತೆ ಪೃಥ್ವಿ ಶಾ ಕಿರಿಕ್. -

ನವದೆಹಲಿ: ದೇಶಿ ಕ್ರಿಕೆಟ್ ಋತುವಿನ ಆರಂಭಕ್ಕೂ ಮುನ್ನ ಮುಂಬೈ (Mumbai) ಮತ್ತು ಮಹಾರಾಷ್ಟ್ರ (Maharashtra) ನಡುವಿನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ (Prithvi Shaw) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಶತಕವನ್ನು ಸಿಡಿಸಿದ್ದಾರೆ. ಮುಂಬೈ ತಂಡವನ್ನು ತೊರೆದ ನಂತರ ಪೃಥ್ವಿ ಶಾ, ಇದೀಗ ಮಹಾರಾಷ್ಟ್ರ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ ಶಾ ತಮ್ಮ ಹಿಂದಿನ ತಂಡದ (ಮುಂಬೈ) ಮಾಜಿ ಸಹ ಆಟಗಾರರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಮುಶೀರ್ ಖಾನ್ ಸೇರಿದಂತೆ ಮುಂಬೈ ಆಟಗಾರರ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಸರ್ಫರಾಝ್ ಖಾನ್ ಅವರ ಸಹೋದರ ಮುಶೀರ್ ಖಾನ್ ಔಟ್ ಮಾಡಿದರು. ಪೃಥ್ವಿ ಶಾ, ಮುಶೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ, ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದ್ದರು. ಮುಶೀರ್ ಖಾನ್ ಮತ್ತು ಪೃಥ್ವಿ ಶಾ ನಡುವೆ ವಾಗ್ವಾದ ನಡೆಯಿತು. ಮುಂಬೈ ಆಟಗಾರರು ಶಾ ಅವರನ್ನು ಸುತ್ತುವರೆದು ಗುಂಪು ಗುಂಪಾಗಿ ಜಮಾಯಿಸಿದರು. ಅಂಪೈರ್ ಮಧ್ಯಪ್ರವೇಶಿಸಿ ಮುಶೀರ್ ಮತ್ತು ಪೃಥ್ವಿ ಶಾ ಅವರನ್ನು ಬೇರ್ಪಡಿಸಿದರು. ನಂತರ, ಪೃಥ್ವಿ ಶಾ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಅವರು ಸಿದ್ಧೇಶ್ ಲಾಡ್ ಅವರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆಯೂ ಅಂಪೈರ್‌ಗಳು ಮಧ್ಯೆ ಪ್ರವೇಶಿಸಿ ಆಟಗಾರರನ್ನು ತಣ್ಣಗಾಗಿಸಿದ್ದರು.
Prithvi Shaw: ಮುಂಬೈ ವಿರುದ್ಧ ಮತ್ತೊಂದು ಶತಕ ಬಾರಿಸಿದ ಪೃಥ್ವಿ ಶಾ
ಪೃಥ್ವಿ ಶಾ ತಮ್ಮ ಹಿಂದಿನ ತಂಡದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು ಹಾಗೂ ಶತಕವನ್ನು ಬಾರಿಸಿದರು. ಅವರು 220 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 181 ರನ್‌ಗಳನ್ನು ಬಾರಿಸಿದರು. ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕೆಂಬ ಗುರಿಯನ್ನು ಹೊಂದಿರುವ ಅವರು, ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಲು ಎದುರು ನೋಡುತ್ತಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಶತಕವನ್ನು ಬಾರಿಸಿದ್ದರು.
Heated exchange between Prithvi Shaw and Mumbai players after his wicket! pic.twitter.com/l9vi1YgeYs
— INSANE (@1120_insane) October 7, 2025
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಳಿಕ ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುಗಡೆ ಮಾಡಿತ್ತು. ಇದರ ಪರಿಣಾಮವಾಗಿ ಪೃಥ್ವಿ ಶಾ ಅವರು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಿರಲಿಲ್ಲ. ಇದರ ಪರಿಣಾಮ ಅವರು ಅನ್‌ಸೋಲ್ಡ್ ಆಗಿದ್ದರು. 2025-26ರ ದೇಶಿ ಕ್ರಿಕೆಟ್ ಋತುವಿನಲ್ಲಿ ಅವರು ಮುಂಬೈ ತೊರೆದು ಮಹಾರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ.
IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಪೃಥ್ವಿ ಶಾ ಅವರು ಭಾರತ ತಂಡವನ್ನು ಐದು ಟೆಸ್ಟ್ ಪಂದ್ಯಗಳು ಹಾಗೂ ಆರು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಶಿಸ್ತು ಹಾಗೂ ಫಿಟ್‌ನೆಸ್ ಸಮಸ್ಯೆಯ ಕಾರಣ ಕಳೆದ ಸೀಸನ್‌ನಲ್ಲಿ ಪೃಥ್ವಿ ಶಾ ಅವರನ್ನು ಮುಂಬೈ ತಂಡದಿಂದ ತೆಗೆಯಲಾಗಿತ್ತು. ಕಳೆದ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಮಧ್ಯ ಪ್ರದೇಶ ವಿರುದ್ಧ ಕೊನೆಯ ಬಾರಿ ಮುಂಬೈ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸಿದ್ದರು. ಈ ಪಂದ್ಯದ ಮಧ್ಯ ಪ್ರದೇಶ ವಿರುದ್ಧ ಮುಂಬೈ ಗೆದ್ದು ಚಾಂಪಿಯನ್ ಆಗಿತ್ತು.