ಚಂಡೀಗಢ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ (Priyansh Arya) ರನ್ ಹೊಳೆ ಹರಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದಾರೆ. 39 ಎಸೆತಗಳನ್ನು ಸೆಂಚರಿ ಬಾರಿಸಿದ ಇವರು, ವೇಗವಾಗಿ ಐಪಿಎಲ್ ಶತಕ ಬಾರಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ಪ್ರಿಯಾಂಶ್ ಆರ್ಯ ಬರೆದಿದ್ದಾರೆ. ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ಏಳನೇ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದಾರೆ.
ಇಲ್ಲಿನ ಮುಲ್ಲಾನುರ್ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ ಸ್ಪೋಟಕ ಬ್ಯಾಟ್ ಮಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಬಲವಾಗಿ ದಂಡಿಸಿದ ಪ್ರಿಯಾಂಶ್, ತವರು ಅಂಗಣದಲ್ಲಿ ಸಿಕ್ಸರ್ ಹಾಗೂ ಪೋರ್‌ಗಳ ಸುರಿಮಳೆಗೈದರು. ಇವರು ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ ಅನ್‌ಕ್ಯಾಪ್ಡ್ ಆಟಗಾರ ಹಾಗೂ ವೇಗವಾಗಿ ಐಪಿಎಲ್ ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ, ಐಪಿಎಲ್ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
IPL 2025: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್‌ಗೆ ಶಾಕ್ ನೀಡಿದ ಬಿಸಿಸಿಐ!
ದಿಲ್ಲಿ ಮೂಲದ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ, ಗುಜರಾತ್ ಟೈಟನ್ಸ್ ವಿರುದ್ಧವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆದರೆ, ಮೆಗಾ ಹರಾಜಿನಲ್ಲಿ 3.8 ಕೋಟಿ ರೂ ಗಳಿಗೆ ಲಕ್ಷ ರೂ ಮೂಲ ಬೆಲೆಯೊಂದಿಗೆ ಪಂಜಾಗ್ ಕಿಂಗ್ಸ್‌ಗೆ ಬಂದಿದ್ದ ಪ್ರಿಯಾಂಶ್ ಆರ್ಯ ವಿಭಿನ್ನ ಬ್ಯಾಟ್ಸ್‌ಮನ್ ಆಗಿ ಕಂಡಿದ್ದಾರೆ. ಮೆಗಾ ಹರಾಜಿನಲ್ಲಿ ಅವರನ್ನು ಖರೀದಿಸಲು ಬೆಂಗಳೂರು ಫ್ರಾಂಚೈಸಿ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಪಂಜಾಬ್ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿದ ಅನ್‌ಕ್ಯಾಪ್ಡ್ ಆಟಗಾರರು
124 – ಯಶಸ್ವಿ ಜೈಸ್ವಾಲ್ (2023)
120* – ಪಾಲ್ ವಾಲ್ತಾಟಿ (2011)
115 – ಶಾನ್ ಮಾರ್ಷ್ (2008)
114* – ಮನೀಶ್ ಪಾಂಡೆ (2009)
112* – ರಜತ್ ಪಾಟಿದಾರ್ (2022)
103 – ಪ್ರಭಸಿಮ್ರನ್ ಸಿಂಗ್ (2023)
101* – ದೇವದತ್ ಪಡಿಕ್ಕಲ್ (2021)
103 – ಪ್ರಿಯಾಂಶ್ ಆರ್ಯ (2025)
ಐಪಿಎಲ್‌ನಲ್ಲಿ ಅತಿ ವೇಗದ ಶತಕಗಳು
30 – ಕ್ರಿಸ್ ಗೇಲ್ (ಆರ್‌ಸಿಬಿ) vs ಪಿಡಬ್ಲ್ಯೂಐ, ಬೆಂಗಳೂರು, 2013
37 – ಯೂಸುಫ್ ಪಠಾಣ್ (ಆರ್‌ಆರ್) vs ಎಂಐ, ಮುಂಬೈ ಬಿಎಸ್, 2010
38 – ಡೇವಿಡ್ ಮಿಲ್ಲರ್ (ಕೆಎಕ್ಸ್‌ಐಪಿ) vs ಆರ್‌ಸಿಬಿ, ಮೊಹಾಲಿ, 2013
39 – ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್) vs ಆರ್‌ಸಿಬಿ, ಬೆಂಗಳೂರು, 2024
39 – ಪ್ರಿಯಾಂಶ್ ಆರ್ಯ (ಪಿಬಿಕೆಎಸ್) vs ಸಿಎಸ್‌ಕೆ, ಮುಲ್ಲಾನುರ್ ಪುರ, 2025*