IPL 2025: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್‌ಗೆ ಶಾಕ್ ನೀಡಿದ ಬಿಸಿಸಿಐ!
Rajat Patidar fined for Slow over rate: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್‌ಗೆ ಬಿಸಿಸಿಐ ಆಘಾತ ನೀಡಿದೆ. ನಿಧಾನಗತಿಯ ಬೌಲಿಂಗ್ ಕಾರಣ ರಜತ್ ಪಾಟಿದಾರ್‌ಗೆ 12 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಜತ್ ಪಾಟಿದಾರ್‌ಗೆ ದಂಡ ವಿಧಿಸಿದ ಬಿಸಿಸಿಐ

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 20ನೇ ಪಂದ್ಯದಲ್ಲಿ (RCB vs MI) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಠಿಣ ಹೋರಾಟ ನಡೆಸಿ 12 ರನ್‌ಗಳಿಂದ ರೋಚಕ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar), ಸ್ಪೋಟಕ ಅರ್ಧಶತಕ ಸಿಡಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಆರ್‌ಸಿಬಿ ನಾಯಕ ಪಾಟಿದಾರ್‌ಗೆ 12 ಲಕ್ಷ ರೂ. ಗಳನ್ನು ದಂಡ ವಿಧಿಸಲಾಗಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ನಿಧಾನಗತಿಯಲ್ಲಿ ಬೌಲ್ ಮಾಡಿದ್ದರು. ಆ ಮೂಲಕ ಐಪಿಎಲ್ ಕೋಡ್ ಆಫ್ ಕಂಡಕ್ಟ್ ಅವರನ್ನು ಉಲ್ಲಂಘನೆ ಮಾಡಿದ್ದಾರೆ. ಈ ಕಾರಣದಿಂದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ಗೆ 12 ಲಕ್ಷ ರೂ. ಗಳ ದಂಡವನ್ನು ವಿಧಿಸಲಾಗಿದೆ. ಪ್ರಸಕ್ತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿಯ ಸ್ಲೋ ಓವರ್ ರೇಟ್‌ನ ಮೊದಲ ಪ್ರಮಾದ ಇದಾಗಿದೆ.
IPL 2025: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್‌ಗೆ ಶಾಕ್ ನೀಡಿದ ಬಿಸಿಸಿಐ!
"ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ, ಅಂದರೆ ಕನಿಷ್ಠ ಓವರ್-ರೇಟ್ ಪ್ರಮಾದಗಳಿಗೆ ಸಂಬಂಧಿಸಿದಂತೆ, ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿಯ ಈ ಋತುವಿನ ಮೊದಲ ಅಪರಾಧ ಇದಾಗಿರುವುದರಿಂದ, ನಾಯಕನಿಗೆ 12 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆ ತಿಳಿಸಿದೆ.
ಆರ್‌ಸಿಬಿ ಗೆಲುವಿಗೆ ನೆರವಾದ ರಜತ್, ಕೃಣಾಲ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ತನ್ನ ಮೂರನೇ ಗೆಲುವು ಪಡೆದಿದೆ. ಏಪ್ರಿಲ್ 7 ರಂದು ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಬೆಂಗಳೂರು ತಂಡ 12 ರನ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ 10 ವರ್ಷಗಳ ಬಳಿಕ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಸಂಭ್ರಮಿಸಿದೆ.
𝐂𝐨𝐦𝐞𝐭𝐡 𝐭𝐡𝐞 𝐡𝐨𝐮𝐫, 𝐜𝐨𝐦𝐞𝐭𝐡 𝐂𝐚𝐩𝐭𝐚𝐢𝐧 𝐑𝐚𝐣𝐚𝐭 𝐏𝐚𝐭𝐢𝐝𝐚𝐫 🫡
— IndianPremierLeague (@IPL) April 7, 2025
A Player of the Match winning knock from #RCB skipper helped them seal a thrilling 1️⃣2️⃣-run win over #MI ❤️
Scorecard ▶️ https://t.co/Arsodkwgqg#TATAIPL | #MIvRCB pic.twitter.com/GaDr2aPHsa
ಆರ್‌ಸಿಬಿ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ರಿಯಾನ್ ರಿಕೆಲ್ಟನ್ ತಲಾ 17 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು. ಸೂರ್ಯಕುಮಾರ್ ಯಾದವ್ (28) ಹಾಗೂ ವಿಲ್ ಜ್ಯಾಕ್ಸ್ (12) ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ (42 ರನ್) ಹಾಗೂ ತಿಲಕ್ ವರ್ಮಾ (56) ಅವರು ಸ್ಪೋಟಕ ಬ್ಯಾಟ್ ಮಾಡಿ ಮುಂಬೈಗೆ ಗೆಲುವು ತಂದುಕೊಡುವ ಭರವಸೆಯನ್ನು ನೀಡಿದ್ದರು. ಆದರೆ, 18 ಮತ್ತು 9ನೇ ಓವರ್‌ನಲ್ಲಿ ಇವರಿಬ್ಬರನ್ನೂ ಔಟ್ ಮಾಡುವ ಆರ್‌ಸಿಬಿ ಪಂದ್ಯವನ್ನು ತಿರುಗಿಸಿತ್ತು. ಅಂತಿಮವಾಗಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ 12 ರನ್‌ಗಳಿಂದ ಗೆಲುವು ಸಾಧಿಸಿತ್ತು. ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.
RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ, ವಿರಾಟ್ ಕೊಹ್ಲಿ (67) ಹಾಗೂ ರಜತ್ ಪಾಟಿದಾರ್ (64) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 221 ರನ್‌ಗಳನ್ನು ಕಲೆ ಹಾಕಿತ್ತು. ಡೆತ್ ಓವರ್‌ಗಳಲ್ಲಿ ಜಿತೇಶ್ ಶರ್ಮಾ 19 ಎಸೆತಗಳಲ್ಲಿ ಅಜೇಯ 40 ರನ್‌ಗಳಿಸಿದ್ದರು. ಇದಕ್ಕೂ ಮುನ್ನ ಮೂರನೇ ಕ್ರಮಾಂಕದಲ್ಲಿ ಆಡಿದ್ದ ದೇವದತ್ ಪಡಿಕ್ಕಲ್ 37 ರನ್‌ಗಳಿಸಿದ್ದರು.