Vijaya Hazare Trophy: ಬಂಗಾಳ ವಿರುದ್ಧ ದ್ವಿಶತಕ ಬಾರಿಸಿದ ಅಮನ್ ರಾವ್ ಯಾರು?
Who is Aman Rao?: ಬಂಗಾಳ ವಿರುದ್ಧದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಅಮನ್ ರಾವ್ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ತಮ್ಮ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು. ಅಂದ ಹಾಗೆ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಅಮನ್ ರಾವ್ ಅವರನ್ನು 30 ಲಕ್ಷ ರು ಮೂಲ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು.
ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಅಮನ್ ರಾವ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಹಲವು ದೇಶಿ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಅದರಂತೆ ಜನವರಿ 6 ರಂದು ಬಂಗಾಳ ಮತ್ತು ಹೈದರಾಬಾದ್ ಪಂದ್ಯದಲ್ಲಿಯೂ ಒಬ್ಬ ದೇಶಿ ಪ್ರತಿಭೆ ಬೆಳಕಿಗೆ ಬಂದಿದ್ದಾರೆ. ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಅಮನ್ ರಾವ್ (Aman Rao), ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ ತನ್ನನ್ನು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಖರೀದಿಸಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಭರವಸೆ ಮೂಡಿಸಿದ್ದಾರೆ.
ರಾಜಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆಸಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಅಮನ್ ರಾವ್, ಅದ್ಭುತ ಆಟವನ್ನು ಪ್ರದರ್ಶಿಸಿದರು. 21ನೇ ವಯಸ್ಸಿನ ಬ್ಯಾಟ್ಸ್‌ಮನ್ ಅಮನ್ ರಾವ್ ಈ ಪಂದ್ಯದಲ್ಲಿ ಕೊನೆಯ ಒಂದು ಎಸೆತ ಬಾಕಿ ಇರುವಾಗ 194 ರನ್ ಗಳಿಸಿದ್ದರು ಹಾಗೂ ದ್ವಿಶತಕ ಪೂರೈಸಲು 6 ರನ್ ಅಗತ್ಯವಿತ್ತು. ಈ ವೇಳೆ ಕೊನೆಯ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದ್ದರು ಹಾಗೂ ತಮ್ಮ ಚೊಚ್ಚಲ ದ್ವಿಶತಕವನ್ನು ಬಾರಿಸಿದರು. ಇವರ ದ್ವಿಶತಕದ ಬಲದಿಂದ ಹೈದರಾಬಾದ್ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 352 ರನ್‌ಗಳನ್ನು ಕಲೆ ಹಾಕಿತ್ತು.
ಆಷಸ್ ಟೆಸ್ಟ್ ಸರಣಿಯಲ್ಲಿ 500 ರನ್ ಕಲೆ ಹಾಕಿ ಯಶಸ್ವಿ ಜೈಸ್ವಾಲ್ ದಾಖಲೆ ಮುರಿದ ಟ್ರಾವಿಸ್ ಹೆಡ್!
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅಮನ್ ರಾವ್ ಅವರು 154 ಎಸೆತಗಳಲ್ಲಿ 13 s ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 200 ರನ್‌ಗಳನ್ನು ಗಳಿಸಿದರು. ಈ ಇನಿಂಗ್ಸ್ ಇವರ ಪಾಲಿಗೆ ಗುಣಮಟ್ಟದಿಂದ ಕೂಡಿದೆ. ಏಕೆಂದರೆ ಬಂಗಾಳ ತಂಡದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಆಕಾಶ್ ದೀಪ್ ಹಾಗೂ ಶಹಬಾಝ್ ಅಹ್ಮದ್ ಇದ್ದರು. ಈ ನಾಲ್ವರು ಬೌಲರ್‌ಗಳು ಭಾರತದ ಪರ ಆಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಹೊಂದಿದ್ದಾರೆ. ಹಾಗಾಗಿ ಇವರ ಎದುರು ದ್ವಿಶತಕ ಸಿಡಿಸಿರುವ ಅಮನ್ ರಾವ್ ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದಿದ್ದಾರೆ.
21-year-old Aman Rao announces himself in style! 💯💯
— Cricket Gyan (@cricketgyann) January 6, 2026
Unbeaten 200 vs Bengal, dismantling an attack of Mohammad Shami, Mukesh Kumar, Akash Deep & Shahbaz Ahmed — fearless, flawless, phenomenal. 🔥
Picked by Rajasthan Royals for just ₹30 lakh… a steal that’s already paying… pic.twitter.com/qiJMJ1i3kW
ಅಮನ್ ರಾವ್ ಯಾರು?
ಅಮನ್ ರಾವ್ ಅಮೆರಿಕಾದಲ್ಲಿ ಜನಿಸಿದ್ದರು, ಆದರೆ ಬೆಳೆದಿದ್ದು ಹೈದರಾಬಾದ್‌ನಲ್ಲಿ. ಅವರು ಭಯಮುಕ್ತ ಹಾಗೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಬಲ್ಲ ಕೌಶಲವನ್ನು ಹೊಂದಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ 160ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವಯೋಮಿತಿ ಕ್ರಿಕೆಟ್‌ನಲ್ಲಿ ಬಲವಾದ ಪ್ರದರ್ಶನವನ್ನು ತೋರಿದ ಬಳಿಕ ಅವರು ಹೈದರಾಬಾದ್ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು.
ಕ್ರಿಕೆಟ್‌ನಲ್ಲಿಯೇ ಅಪರೂಪದ ಘಟನೆ, ಒಂದೇ ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ರಿಟೈರ್ ಔಟ್!
ಅಂಡರ್-23ರ ರಾಜ್ಯ ಟೂರ್ನಿಯಲ್ಲಿ ಆಡಿದ್ದ ಆರು ಪಂದ್ಯಗಳಿಂದ 63.50ರ ಹಾಗೂ 102.97ರ ಸ್ಟ್ರೈಕ್ ರೇಟ್‌ನಲ್ಲಿ 381 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಭಾರಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಅರ್ಧಶತಕವನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಶಾರ್ದುಲ್ ಠಾಕೂರ್ ಓವರ್‌ನಲ್ಲಿ 24 ರನ್ ಸಿಡಿಸಿದ್ದರು. 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ 30 ಲಕ್ಷ ರು. ಗಳಿಗೆ ಖರೀದಿಸಿತ್ತು.