IND vs ZIM: ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ಗೌತಮ್ ಗಂಭೀರ್‌ಗೆ ರಿಕಿ ಪಾಂಟಿಂಗ್ ಮಹತ್ವದ ಸಲಹೆ!
ಜಿಂಬಾಬ್ವೆ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಸೂಪರ್-8ರ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಹೆಚ್ಚು ಪ್ರಯೋಗಗಳನ್ನು ಮಾಡದೆ ಮೂಲಭೂತ ಅಂಶಗಳಿಗೆ ಅಂಟಿಕೊಂಡು ಆಡಿ ಎಂದು ಹೇಳಿದ್ದಾರೆ.
ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ರಿಕಿ ಪಾಂಟಿಂಗ್. -
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ 2026 ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದ ಸೋಲಿನ ನಂತರ ಭಾರತ ತಂಡಕ್ಕೆ ಇದೀಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿದೆ. ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ, ಭಾರತ ತಂಡ, ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಮತ್ತು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಸೋಲಬೇಕು. ಜಿಂಬಾಬ್ವೆ ವಿರುದ್ಧದ ಮುಂದಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ (Gautam Gambhir) ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಈ ಒತ್ತಡದ ಸಮಯದಲ್ಲಿ ಗೌತಮ್ ಗಂಭೀರ್ ಆಯ್ಕೆಯಲ್ಲಿ ಹೆಚ್ಚು ಪ್ರಯೋಗ ಮಾಡುವ ಬದಲು ತನ್ನ ಅತ್ಯುತ್ತಮ ಆಟಗಾರರನ್ನು ಅವಲಂಬಿಸಬೇಕು ಎಂದು ರಿಕಿ ಪಾಂಟಿಂಗ್ ನಂಬುತ್ತಾರೆ. "ದಿ ಐಸಿಸಿ ರಿವ್ಯೂ" ನಲ್ಲಿ ಮಾತನಾಡಿದ ಪಾಂಟಿಂಗ್, ಭಾರತ ತಂಡದ ಶಿಬಿರದ ಪ್ರಾಯೋಗಿಕ ತಂತ್ರವನ್ನು ಪ್ರಶ್ನಿಸಿದರು. ಕೊನೆಯ ಪಂದ್ಯದಲ್ಲಿ ಉಪನಾಯಕ ಅಕ್ಷರ್ ಪಟೇಲ್ ಅವರನ್ನು ವಾಷಿಂಗ್ಟನ್ ಸುಂದರ್ ಅವರೊಂದಿಗೆ ಬದಲಾಯಿಸುವ ನಿರ್ಧಾರದ ಬಗ್ಗೆ, ಒಂದು ಬದಲಾವಣೆಯು ಟೂರ್ನಿಯಲ್ಲಿನ ಭವಿಷ್ಯವನ್ನು ಬದಲಾಯಿಸುವುದಿಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಸಲ್ಮಾನ್ ಆಘಾ ಕುಟುಂಬವನ್ನು ನಿಂದಿಸಿದ ಫ್ಯಾನ್ಸ್!
"ನಾನು ಭಾರತದ ಸ್ಥಾನದಲ್ಲಿದ್ದರೆ, ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ ಪ್ರತಿಯೊಂದು ಪಂದ್ಯವನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುತ್ತಿರಲಿಲ್ಲ. ಪರಿಸ್ಥಿತಿಗಳ ಆಧಾರದ ಮೇಲೆ ನಾನು ನನ್ನ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡುತ್ತೇನೆ ಮತ್ತು ಅವರನ್ನು ನಂಬುತ್ತೇನೆ. ಎದುರಾಳಿ ತಂಡದ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆಧರಿಸಿ, ಅಕ್ಷರ್ ಪಟೇಲ್ ಅವರನ್ನು ಆಡಿಸದಿರಲು ಕಾರಣವೆಂದು ಉಲ್ಲೇಖಿಸುವುದು ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು," ಎಂದು ಪಾಂಟಿಂಗ್ ತಿಳಿಸಿದ್ದಾರೆ.
ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್‌ಗೆ ಸ್ಥಾನ ನೀಡಿ
ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದ ನಿಮಿತ್ತ ಕುಲ್‌ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪರವಾಗಿ ಪಾಂಟಿಂಗ್ ಬ್ಯಾಟ್ ಬೀಸಿದರು.
IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!
"ನಾನು ಮೂಲಭೂತ ವಿಷಯಗಳಿಗೆ ಹಿಂತಿರುಗುತ್ತೇನೆ. ಚೆನ್ನೈನ ಪರಿಸ್ಥಿತಿಗಳನ್ನು ನೋಡಿ 'ನಮ್ಮ ಅತ್ಯುತ್ತಮ XI ಯಾವುದು?' ಎಂದು ಕೇಳಿ. ಅಕ್ಷರ್ ಪಟೇಲ್ ತಂಡದಲ್ಲಿದ್ದರೆ, ಅದು ನಿಜಕ್ಕೂ ಅದ್ಭುತ. ಕುಲ್‌ದೀಪ್ ಯಾದವ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದನ್ನು ನಾನು ಬಲವಾಗಿ ಪರಿಗಣಿಸುತ್ತೇನೆ. ಕುಲ್ದೀಪ್‌ಗೆ ಬ್ಯಾಟ್ಸ್‌ಮನ್ ಬಲಗೈ ಅಥವಾ ಎಡಗೈ ಎಂಬುದು ಮುಖ್ಯವಲ್ಲ; ಅವರು ಯಾರನ್ನೂ ಬೇಕಾದರೂ ಮೀರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಲ್ಲಿ ವ್ರಾಂಗ್ ಓನ್ ಹಾಗೂ ಔಟ್‌ಸೈಡ್ ಎಡ್ಜ್ ಹೊರಗೆ ಚೆಂಡನ್ನು ತಿರುಗಿಸಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ," ಎಂದು ಅವರು ಹೇಳಿದ್ದಾರೆ.