ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಪಂದ್ಯದ ವೇಳೆ ಮೊಬೈಲ್‌ ಬಳಸಿದ್ದೇಕೆಂದು ಕಾರಣ ತಿಳಿಸಿದ ಆರ್‌ಆರ್‌ ಮ್ಯಾನೇಜರ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ ಪಂದ್ಯದ ವೇಳೆ ಡಗೌಟ್‌ನಲ್ಲಿ ಆರ್‌ಆರ್‌ ಮ್ಯಾನೇಜರ್‌ ರೋಮಿ ಭಿಂದರ್‌ ಮೊಬೈಲ್‌ ಫೋನ್‌ ಬಳಸಿದ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಮೂಲಗಳ ಪ್ರಕಾರ ಅವರು ವೈದ್ಯಕೀಯ ಕಾರಣಗಳಿಂದ ಫೋನ್‌ ನೋಡಿದ್ದಾರೆಂದು ಹೇಳಲಾಗುತ್ತಿದೆ.

ರೋಮಿ ಭಿಂದರ್‌ ಫೋನ್‌ ಬಳಸಿದ ಬಗ್ಗೆ ಆರ್‌ಆರ್‌ ಸ್ಪಷ್ಟನೆ.

ನವದಹಲಿ: ರಾಜಸ್ಥಾನ್‌ ರಾಯಲ್ಸ್‌ ತಂಡ ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಆದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದ (RCB vs RR) ಸಮಯದಲ್ಲಿ ಆರ್‌ಆರ್‌ ತಂಡದ ಮ್ಯಾನೇಜರ್‌ ರೋಮಿ ಭಿಂದರ್‌ (Romi Bhinder) ಅವರು ಡಗೌಟ್‌ನಲ್ಲಿ ಫೋನ್‌ ಬಳಿಸಿದ ವಿಡಿಯೊ ವೈರಲ್‌ ಆದ ಬಳಿಕ ವಿವಾದ ಉಂಟಾಗಿತ್ತು. ಅವರು ಫೋನ್‌ ಬಳಸಿ ಐಪಿಎಲ್‌ ನಿಯಮವನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಅವರು ಏಕೆ ಫೋನ್‌ ಬಳಸುತ್ತಿದ್ದರು ಎಂಬ ಬಗ್ಗೆ ಸ್ಪಷ್ಟನೆ ಲಭಿಸಿದೆ.

ಏಪ್ರಿಲ್‌ 10 ರಂದು ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಆರ್‌ಆರ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದ ಚೇಸಿಂಗ್‌ ವೇಳೆ ಆರ್‌ಆರ್‌ ತಂಡದ ಮ್ಯಾನೇಜರ್‌ ರೋಮಿ ಭಿಂದರ್‌ ಅವರು ಡಗೌಟ್‌ನಲ್ಲಿ ಕುಳಿತು ಫೋನ್‌ ಬಳಸುತ್ತಿದ್ದರು. ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಒಬ್ಬರು ಈ ವಿಡಿಯೊವನ್ನು ಸೆರೆ ಹಿಡಿದು ಅಪ್‌ಲೋಡ್‌ ಮಾಡಿದ್ದರು. ಈ ವಿಡಿಯೊ ವೈರಲ್‌ ಆದ ಬಳಿಕ ಆರ್‌ಆರ್‌ ಮ್ಯಾನೇಜರ್‌ಗೆ ಬಿಸಿಸಿಐ ನೋಟಿಸ್‌ ನೀಡಿತ್ತು. ಏಕೆಂದರೆ ಪಂದ್ಯದ ಸಮಯದಲ್ಲಿ ಮೊಬೈಲ್‌ ಫೋನ್‌ ಬಳಸುವುದನ್ನು ನಿಷೇಧಿಸಲಾಗಿದೆ.

IPL 2026: 4000 ಐಪಿಎಲ್‌ ರನ್‌ ಗಳಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಶುಭಮನ್‌ ಗಿಲ್‌!

ರಾಜಸ್ಥಾನ್‌ ರಾಯಲ್ಸ್‌ ತಂಡ ಇದೀಗ ತಮ್ಮ ಮ್ಯಾನೇಜರ್‌ ರೋಮಿ ಭಿಂದರ್‌ ಅವರು ಮೊಬೈಲ್‌ ಬಳಕೆ ಕುರಿತು ಸ್ಪಷ್ಟನೆ ನೀಡಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ರೋಮಿ ಭಿಂದರ್‌ಗೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಸೇವಾ ಘಟಕದಿಂದ ನೋಟಿಸ್‌ ನೀಡಲಾಗಿತ್ತು. ಆರ್‌ಆರ್ ವ್ಯವಸ್ಥಾಪಕರು ತಮ್ಮ ಹಿಂದಿನ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದ ಮೊಬೈಲ್ ಫೋನ್ ಬಳಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ಎರಡೂ ಶ್ವಾಸಕೋಶಗಳು ಕುಸಿದು, ಅವರು ಒಂದು ವಾರ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು ಎಂದು ತಿಳಿದುಬಂದಿದೆ.

“ಅವರ ಎರಡೂ ಶ್ವಾಸಕೋಶಗಳು ಕುಸಿದುಬಿದ್ದಿದ್ದು, ಆ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣ ಅವರು ನಾಗ್ಪುರದ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳು ಕಾಲ ಕಳೆದರು,” ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ಮೂಲಕಗಳು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

IPL 2026: ಆರ್‌ಸಿಬಿ ಪಂದ್ಯದ ವೇಳೆ ಡಗೌಟ್‌ನಲ್ಲಿ ಫೋನ್‌ ಬಳಸಿದ ರಾಜಸ್ಥಾನ್‌ ರಾಯಲ್ಸ್‌ ಮ್ಯಾನೇಜರ್‌!

ಮತ್ತೊಂದು ಮೂಲದ ಪ್ರಕಾರ, ರೋಮಿ ಭಿಂದರ್ ವೈದ್ಯಕೀಯ ಸಮಸ್ಯೆಗಳ ಕಾರಣದಿಂದ 10 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಮತ್ತು ಅವರಿಗೆ ಆಸ್ಥಮಾ ಕೂಡ ಇದೆ. ಆದ್ದರಿಂದ, ಅವರು ವೈದ್ಯಕೀಯ ಕಾರಣಗಳಿಂದಲೇ ಫೋನ್ ಹೊಂದಿದ್ದರು.

“ರೋಮಿ ವೈದ್ಯಕೀಯ ಸಮಸ್ಯೆಗಳ ಕಾರಣದಿಂದ 10 ಕಿಲೋಗ್ರಾಂಕ್ಕಿಂತ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಅವರಿಗೆ ಅಸ್ಥಮಾ ಇರುವುದರಿಂದ ಜಾಸ್ತಿ ದೂರ ನಡೆಯಬಾರದು ಅಥವಾ ಪದೇ-ಪದೆ ಮೆಟ್ಟಿಲೇರಬಾರದು ಎಂದು ಸಲಹೆ ನೀಡಲಾಗಿದೆ. ಅವರು ತಂಡದೊಂದಿಗೆ ಇದ್ದು ಫ್ರಾಂಚೈಸಿಗಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದ್ದರಿಂದ ಅವರಿಗೆ ನಿಯಮಗಳು ಮತ್ತು ನಿಯಮಾವಳಿಗಳ ಬಗ್ಗೆ ತಿಳಿದಿದೆ, ಆದರೆ ಆ ಫೋನ್ ಅವರ ಬಳಿ ಇರುವುದಕ್ಕೆ ಕಾರಣ ವೈದ್ಯಕೀಯ ಪರಿಸ್ಥಿತಿ,” ಎಂದು ಮತ್ತೊಂದು ಮೂಲ ತಿಳಿಸಿದೆ.



“ಇದಕ್ಕೂ ಹೊರತಾಗಿ, ನಿಯಮಾವಳಿಗಳ ಪ್ರಕಾರ ಡಗೌಟ್‌ನಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಇರುವುದು ಅನುಮತಿಸಲಾಗಿದೆ. ಸಮಸ್ಯೆ ಇದ್ದದ್ದು ಅದರ ಬಳಕೆಯಲ್ಲಷ್ಟೇ, ಆದರೆ ಅವರು ಯಾವುದೇ ಕರೆಗಳನ್ನು ಮಾಡುತ್ತಿರಲಿಲ್ಲ ಅಥವಾ ಸ್ವೀಕರಿಸುತ್ತಿರಲಿಲ್ಲ. ಅವರು ಕೇವಲ ತಮ್ಮ ಫೋನ್‌ನಲ್ಲಿ ಸ್ಕ್ರೋಲ್ ಮಾಡುತ್ತಿದ್ದರು. ಅವರಿಗೆ ಸಮಯ ಇದೆ ಮತ್ತು ಅವರು ತಮ್ಮ ದೃಷ್ಟಿಕೋನವನ್ನು ಎಸಿಎಸ್‌ಯು ಅಧಿಕಾರಿಗಳಿಗೆ ವಿವರಿಸಲು ಪ್ರಯತ್ನಿಸಲಿದ್ದಾರೆ,” ಎಂದು ಹೇಳಿದೆ.