Rajat Patidar: ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ಆರ್‌ಸಿಬಿ ನಾಯಕ!
Rajat Patidar Scored Hundred against South Zone: ಬೆಂಗಳೂರಿನಲ್ಲಿ ನಡೆಯುತ್ತಿರುವ 2025ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಎರಡನೇ ದಿನ ಕೇಂದ್ರ ವಲಯ ನಾಯಕ ರಜತ್ ಪಾಟಿದಾರ್ ಶತಕವನ್ನು ಬಾರಿಸಿದ್ದಾರೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ ರಜತ್ ಪಾಟಿದಾರ್. -

ಬೆಂಗಳೂರು: ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ 2025ರ ದುಲೀಪ್ ಟ್ರೋಫಿ ಟೂರ್ನಿಯ (Duleep Trophy 2025) ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಕೇಂದ್ರ ವಲಯ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಎರಡನೇ ದಿನ ಕೇಂದ್ರ ವಲಯದ (Central Zone) ನಾಯಕ ರಜತ್ ಪಾಟಿದಾರ್ (Rajat Patidar) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಶತಕವನ್ನು ಬಾರಿಸಿದ್ದು ಕೇಂದ್ರ ವಲಯ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವು ನೀಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ವಲಯ ತಂಡವನ್ನು ರಜತ್ ಪಾಟಿದಾರ್ ನಾಯಕತ್ವದ ಕೇಂದ್ರ ವಲಯ ಕೇವಲ 149 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಕೇಂದ್ರ ವಲಯದ ಪರ ಎರಡನೇ ದಿನ ನಾಯಕ ರಜತ್ ಪಾಟಿದಾರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 115 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾಟಿದಾರ್ ಶತಕವನ್ನು ಪೂರ್ಣಗೊಳಿಸಿದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಗುರ್ಜಪ್‌ನೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದ್ದರು.
Asia Cup 2025: ಪಾಕ್ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ
ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 32ನೇ ವಯಸ್ಸಿನ ಬ್ಯಾಟ್ಸ್‌ಮನ್ ನಾಲ್ಕು ಇನಿಂಗ್ಸ್‌ಗಳನ್ನು ಆಡಿದ್ದಾರೆ ಹಾಗೂ ಕ್ರಮವಾಗಿ ಅವರು 101, 77, 125 ಹಾಗೂ 66 ರನ್‌ಗಳನ್ನುಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವರು 14 ಇನಿಂಗ್ಸ್‌ಗಳಿಂದ 60ರ ಸರಾಸರಿ ಮೂರು ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 867 ರನ್‌ಗಳನ್ನು ಕಲೆ ಹಾಕಿದ್ದಾರೆ.
That moment when Rajat Patidar brought up his 💯, off just 112 balls 🙌
— BCCI Domestic (@BCCIdomestic) September 12, 2025
The Central Zone captain led from the front and hit a splendid 101(115) 🧢🔥
Scorecard ▶️ https://t.co/unz0hJ66yE#DuleepTrophy | #Final | @IDFCFIRSTBank pic.twitter.com/fwnB0RySSq
ಆ ಮೂಲಕ ಆರ್‌ಸಿಬಿ ನಾಯಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಅಂದ ಹಾಗೆ ರಜತ್ ಪಾಟಿದಾರ್ ಅವರು 2024ರ ಫೆಬ್ರವರಿಯಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದೀಗ ರಜತ್ ಪಾಟಿದಾರ್ ಅವರು ಕೇಂದ್ರ ವಲಯ ತಂಡಕ್ಕೆ ದುಲೀಪ್ ಟ್ರೋಫಿ ಗೆದ್ದು ಕೊಡುವ ಪ್ರಯತ್ನದಲ್ಲಿದ್ದಾರೆ.
ಬೃಹತ್ ಮುನ್ನಡೆಯತ್ತ ಕೇಂದ್ರ ವಲಯ
ರಜತ್ ಪಾಟಿದಾರ್ ಹಾಗೂ ಯಶ್ ರಾಥೋಡ್ (137*) ಅವರ ಶತಕಗಳ ಬಲದಿಂದ ಕೇಂದ್ರ ವಲಯ ಎರಡನೇ ದಿನದಾಟದ ಅಂತ್ಯಕ್ಕೆ 104 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 384 ರನ್‌ಗಳನ್ನು ಕಲೆ ಹಾಕಿದ್ದು, 235 ರನ್‌ಗಳ ಬೃಹತ್ ಮುನ್ನಡೆಯನ್ನು ಪಡೆದಿದೆ. ಆ ಮೂಲಕ ದೊಡ್ಡ ಮುನ್ನಡೆಯನ್ನು ಪಡೆಯುವತ್ತ ಸಾಗುತ್ತಿದೆ. ಯಶ್ ರಾಥೋಡ್ ಅವರ ಜೊತೆ ಮತ್ತೊಂದು ತುದಿಯಲ್ಲಿ ಶರಂಶ್ ಜೈನ್ ಅಜೇಯ 47 ರನ್‌ಗಳನ್ನು ಕಲೆ ಹಾಕಿದ್ದಾರೆ.