ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranji Trophy: ದೆಹಲಿ ರಣಜಿ ಟ್ರೋಫಿ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದ ಪ್ರಿಯಾಂಶ್‌ ಆರ್ಯ!

ಅಕ್ಟೋಬರ್ 15 ರಂದು ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ದೆಹಲಿ ತಂಡವು 24 ಆಟಗಾರರ ತಂಡವನ್ನು ಪ್ರಕಟಿಸಿದೆ. ಈ ತಂಡವನ್ನು ಆಯುಷ್ ಬದೋನಿ ಮುನ್ನಡೆಸಲಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚಿದ್ದ ಪ್ರಿಯಾಂಶ್‌ ಆರ್ಯ ಇದೀಗ ಮೊಟ್ಟ ದೆಹಲಿಯ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ದೆಹಲಿ ರಣಜಿ ಟ್ರೋಫಿ ತಂಡಕ್ಕೆ ಆಯ್ಕೆಯಾದ ಪ್ರಿಯಾಂಶ್‌ ಆರ್ಯ!

ದೆಹಲಿ ರಣಜಿ ತಂಡಕ್ಕೆ ಆಯ್ಕೆಯಾದ ಪ್ರಿಯಾಂಶ್‌ ಆರ್ಯ. -

Profile Ramesh Kote Oct 10, 2025 4:24 PM

ಬೆಂಗಳೂರು: ಅಕ್ಟೋಬರ್ 15 ರಂದು ಶುರುವಾಗಲಿರುವ ಬಹುನಿರೀಕ್ಷಿತ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯಕ್ಕೆ ದೆಹಲಿ (Delhi Ranji Squad) 24 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಇನ್ನು ಈ ತಂಡವನ್ನು ಆಯುಷ್ ಬದೋನಿ ಮುನ್ನಡೆಸಲಿದ್ದಾರೆ. ಯಶ್ ಧುಲ್ ಉಪನಾಯಕರಾಗಿ ಬದೋನಿಗೆ ನೆರವಾಗಲಿದ್ದಾರೆ. ತಂಡದ 24 ಆಟಗಾರರ ಪಟ್ಟಿಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚಿದ್ದ ಪ್ರಿಯಾಂಶ್ ಆರ್ಯ (Priyansh Arya) ಇದೇ ಮೊದಲ ಬಾರಿ ಪ್ರಥಮ ದರ್ಜೆ ತಂಡಕ್ಕೆ ಆಯ್ಕೆಯಾಗಿದ್ದಾರೆ. 2025ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 179.24ರ ಸ್ಟ್ರೈಕ್ ರೇಟ್‌ನಲ್ಲಿ 475 ರನ್ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 42 ಎಸೆತಗಳಲ್ಲಿ 103 ರನ್‌ಗಳ ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿರುದ್ಧ 43 ಎಸೆತಗಳಲ್ಲಿ 102 ರನ್ ಗಳಿಸಿದ್ದರು.

Ranji Trophy: ರಾಜ್ಯ ತಂಡಕ್ಕೆ ಮಯಾಂಕ್ ಸಾರಥ್ಯ, ಕರುಣ್‌ ಕಮ್‌ಬ್ಯಾಕ್

ನಿತೀಶ್ ರಾಣಾ ಆಯ್ಕೆಗೆ ಸ್ಪಷ್ಟನೆ ನೀಡಿದ ಅಶೋಕ್ ಶರ್ಮಾ

ತಂಡದ ಆಯ್ಕೆಯ ಬಳಿಕ ಪಿಟಿಐ ಜೊತೆಗೆ ಮಾಹಿತಿ ಹಂಚಿಕೊಂಡ ಡಿಡಿಸಿಎ ಕಾರ್ಯದರ್ಶಿ ಅಶೋಕ್ ಶರ್ಮಾ, "ಪ್ರತಿ ಪಂದ್ಯದಲ್ಲೂ ದೊಡ್ಡ ತಂಡ ಆಯ್ಕೆಗೆ ಲಭ್ಯವಿರುತ್ತದೆ ಎಂದು ಭಾವಿಸಿ ಆಯ್ಕೆದಾರರು 24 ಆಟಗಾರರನ್ನು ಹೆಸರಿಸಿದ್ದಾರೆ. ಆದರೆ, ದೆಹಲಿಯಲ್ಲಿ ನಾವು ತವರು ಪಂದ್ಯಗಳನ್ನು ಆಡುವಾಗ, ಅದನ್ನು 15ಕ್ಕೆ ಇಳಿಸುತ್ತೇವೆ," ಎಂದು ಹೇಳಿದ್ದಾರೆ.

ನಿತೀಶ್ ರಾಣಾ ಹಿರಿಯ ಅನುಭವಿ ಆಟಗಾರ ಅವರು ತಂಡಕ್ಕೆ ಮರಳಬಹುದು ಎಂದ ಅಶೋಕ್ ಶರ್ಮಾ, " ರಾಣಾ ಅವರು ಅನುಭವಿ ಆಟಗಾರ ಮತ್ತು ಆಯ್ಕೆದಾರರು ಅವರನ್ನು ಪರೀಕ್ಷಿಸಲು ಬಯಸಿದ್ದರು. ಏನೇ ಇರಲಿ, ಅವರು ವೈಟ್-ಬಾಲ್ ಲೆಗ್‌ನಲ್ಲಿ ಆಡುತ್ತಾರೆ. ಮುಂದಿನ ಪಂದ್ಯದಲ್ಲಿ ರಿಷಭ್ ಪಂತ್ ಆಡುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನಿತೀಶ್ ರಾಣಾ ರೆಡ್-ಬಾಲ್ ಪಂದ್ಯಗಳಿಗೆ ಸಂಪೂರ್ಣವಾಗಿ ಫಿಟ್ ಆಗಿಲ್ಲ, ಆದರೆ ಅವರನ್ನು ಆಯ್ಕೆ ಮಾಡಲಾಗಿದೆ," ಎಂದು ಅವರು ತಿಳಿಸಿದ್ದಾರೆ.

IND vs WI: 7ನೇ ಟೆಸ್ಟ್‌ ಶತಕ ಬಾರಿಸಿ ದಿಗ್ಗಜರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಯಶಸ್ವಿ ಜೈಸ್ವಾಲ್!

ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಸಂಹಿತೆಯಡಿಯಲ್ಲಿ ಕೇವಲ 15 ಆಟಗಾರರಿಗೆ ಮಾತ್ರ ಡ್ರೆಸ್ಸಿಂಗ್ ಕೋಣೆಯಲ್ಲಿ ಅವಕಾಶವಿದ್ದರೂ, 24 ಸದಸ್ಯರ ತಂಡದಲ್ಲಿ ಉಳಿದ ಒಂಬತ್ತು ಆಟಗಾರರು ನಾಲ್ಕು ದಿನಗಳ ಕಾಲ ತಂಡದ ಹೋಟೆಲ್‌ನಲ್ಲಿ ಉಳಿಯಲಿದ್ದಾರೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಈ ಬಗ್ಗೆ ಮಾತನಾಡಿದ ಅವರು, "ಪಂದ್ಯಕ್ಕೆ ಆಯ್ಕೆಯಾದ 15 ಜನರನ್ನು ಹೊರತುಪಡಿಸಿ, ಉಳಿದ ಒಂಬತ್ತು ಮಂದಿ ತಂಡದ ಹೋಟೆಲ್‌ನಲ್ಲಿ ನಾಲ್ಕು ದಿನಗಳನ್ನು ಕಳೆಯುತ್ತಾರೆ," ಎಂದು ಹೇಳಿದ್ದಾರೆ.

ಕೋಚಿಂಗ್ ಸಿಬ್ಬಂದಿ ಅಥವಾ ಆಯ್ಕೆ ಸಮಿತಿಯ ಯಾವುದೇ ಸದಸ್ಯರಿಗೆ ಈ ರೀತಿಯ ನಿರ್ಧಾರ ಕೈಗೊಳ್ಳುವ ಒಪ್ಪಂದಗಳನ್ನು ನೀಡಲಾಗಿಲ್ಲ ಎಂದು ತಿಳಿದುಬಂದಿದೆ. ತಂಡದ ಪ್ರಕಟಣೆಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲ, ಭಿನ್ನಭಿಪ್ರಾಯಗಳ ನಡುವೆ ಬಿಸಿಸಿಐನ ಮಾಜಿ ಪದಾಧಿಕಾರಿಯೊಬ್ಬರು ಸರ್ವಿಸಸ್‌ನ ಯಶ್ಪಾಲ್ ಸಿಂಗ್ ಅವರನ್ನು ಈ ಪಾತ್ರಕ್ಕೆ ಬೆಂಬಲಿಸಿದರೆ, ಪ್ರಸ್ತುತ ಡಿಡಿಸಿಎ ಪದಾಧಿಕಾರಿಗಳು ಕೆ ಪಿ ಭಾಸ್ಕರ್ ಅವರ ಪರ ಇದ್ದಾರೆ.

ಹೈದರಾಬಾದ್ ವಿರುದ್ಧ ರಣಜಿ ಟ್ರೋಫಿ ಪಂದ್ಯಕ್ಕೆ ದೆಹಲಿ ತಂಡ: ಆಯುಷ್ ಬದೋನಿ (ನಾಯಕ), ಯಶ್ ಧುಲ್ (ಉಪನಾಯಕ), ಅರ್ಪಿತ್ ರಾಣಾ, ಸನತ್ ಸಂಗ್ವಾನ್, ಅನುಜ್ ರಾವತ್ (ವಿಕೀ), ಸುಮಿತ್ ಮಾಥುರ್, ಶಿವಂ ಶರ್ಮಾ, ರೌನಕ್ ವಘೇಲಾ, ನವದೀಪ್ ಸೈನಿ, ಸಿಮರ್‌ಜೀತ್ ಸಿಂಗ್, ಮನಿ ಗ್ರೆವಾಲ್, ಸಿದ್ಧಾಂತ್ ಶರ್ಮಾ, ಧ್ರುವ ಕೌಶಿಕ್, ಪ್ರಣವ್ ರಾಜವಂಶಿ (ವಿ.ಕೀ), ನಿತೀಶ್‌ ರಾಣಾ, ಹಿಮಾಂತ್‌ ಸಿಂಗ್‌, ಆಯುಷ್‌ ದೋಸೆಜಾ, ರಾಹುಲ್ ದಾಗರ್, ಹೃತಿಕ್ ಶೋಕೀನ್, ಪ್ರಿಯಾಂಶ್ ಆರ್ಯ, ತೇಜಸ್ವಿ (ವಿ.ಕೀ), ವೈಭವ್ ಕಂಡ್ಪಾಲ್, ರೋಹನ್ ರಾಣಾ, ಆರ್ಯನ್ ರಾಣಾ.