ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನ್ವಂತ್‌ ಕುಮಾರ್‌ ಶತಕ: ಎರಡನೇ ದಿನ ಕರ್ನಾಟಕ- ಸೌರಾಷ್ಟ್ರ ತಂಡಗಳಿಂದ ಸಮಬಲದ ಹೋರಾಟ!

KAR vs SAU: ಮನ್ವಂತ್‌ ಕುಮಾರ್‌ ಅವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ತಂಡ 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್‌ ಬಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಉಭಯ ತಂಡಗಳು ಸಮಬಲ ಸಾಧಿಸಿವೆ.

ಸೌರಾಷ್ಟ್ರ ಎದುರು ಶತಕ ಬಾರಿಸಿದ ಮನ್ವಂತ್‌ ಕುಮಾರ್‌ ಬ್ಯಾಟಿಂಗ್‌ ವೈಖರಿ.

ಬೆಂಗಳೂರು: ಮನ್ವಂತ್‌ ಕುಮಾರ್‌ (Manvanth Kumar) ಅವರ ಹೋರಾಟದ ಶತಕದ ಬಲದಿಂದ ಕರ್ನಾಟಕ ತಂಡ, 2026-27ರ ಸಾಲಿನ ರಣಜಿ ಟ್ರೋಫಿ (Ranji Trophy 2026-27) ಎಲೈಟ್‌ ಬಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಒಂದು ಹಂತದಲ್ಲಿ ಕರ್ನಾಟಕ ತಂಡ 200 ರನ್‌ಗಳ ಗಡಿ ದಾಟುವುದಕ್ಕೂ ಮುನ್ನ 8 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತಾದರೂ ಮನ್ವಂತ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡ 300ಕ್ಕೂ ಅಧಿಕ ರನ್‌ಗಳನ್ನು ಗಳಿಸಿತು. ಆದರೂ ಎರಡನೇ ದಿನ ಸೌರಾಷ್ಟ್ರ ತಂಡ ಪ್ರಥಮ ಇನಿಂಗ್ಸ್‌ ಆರಂಭಿಸಿದೆ. ಅಂತಿಮವಾಗಿ ಉಭಯ ತಂಡಗಳು ದಿನದಾಂತ್ಯಕ್ಕೆ ಸಮಬಲನ್ನು ಕಾಯ್ದುಕೊಂಡಿವೆ.

ನಗರದ ಹೊರವಲಯದ ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಸೋಮವಾರ 8 ವಿಕೆಟ್‌ ನಷ್ಟಕ್ಕೆ 281 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ ತಂಡ, ಎರಡನೇ ದಿನ 61 ರನ್‌ಗಳನ್ನು ಹೆಚ್ಚುವರಿಯಾಗಿ ಕಲೆ ಹಾಕಿತು. ಅಂತಿಮವಾಗಿ ಆತಿಥೇಯ ಕರ್ನಾಟಕ ತಂಡ 111.3 ಓವರ್‌ಗಳಿಗೆ 342 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕರ್ನಾಟಕ ತಂಡದ ಪರ ಮನ್ವಂತ್‌ ಕುಮಾರ್‌ ಏಕಾಂಗಿ ಹೋರಾಟ ನಡೆಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು.

ರಣಜಿ ಟ್ರೋಫಿ; ಕರ್ನಾಟಕ ತಂಡಕ್ಕೆ ಮನ್ವಂತ್ ಕುಮಾರ್ ಆಸರೆ

ಪಂದ್ಯದ ಎರಡನೇ ದಿನದಾಟದ ಬೆಳಿಗ್ಗೆ ಅಜೇಯ 81 ರನ್‌ಗಳಿಂದ ಕ್ರೀಸ್‌ಗೆ ಬಂದ 22ರ ಪ್ರಾಯದ ಮನ್ವಂತ್‌ ಕುಮಾರ್‌, ಮೊದಲನೇ ಸೆಷನ್‌ಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಅಭಿಲಾಷ್‌ ಶೆಟ್ಟಿ 146 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಒಟ್ಟಾರೆ ಇವರು ಆಡಿದ 214 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 135 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆಗುವ ಕರ್ನಾಟಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಸೌರಾಷ್ಟ್ರ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಪಾರ್ಥ್‌ ಭಟ್‌ 89 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರೆ, ನಾಯಕ ಜಯದೇವ್‌ ಉನಾದ್ಕಟ್‌ 3 ವಿಕೆಟ್‌ಗಳನ್ನು ಕಿತ್ತರು.

IND vs NZ: ಜಸ್‌ಪ್ರೀತ್‌ ಬುಮ್ರಾರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ರವಿ ಶಾಸ್ತ್ರಿ ಮಹತ್ವದ ಹೇಳಿಕೆ!

ಸೌರಾಷ್ಟ್ರ ತಂಡ 164-4

ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 53 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಗಳಿಸಿದ್ದು, ಇನ್ನೂ 178 ರನ್‌ಗಳ ಹಿನ್ನಡೆಯಲ್ಲಿದೆ. ಆರಂಭಿಕರಾದ ಹಾರ್ವಿಕ್‌ ದೇವಾಯಿ ಹಾಗೂ ಹೆತ್ವಿಕ್‌ ಕೊಟಕ್‌ ಅವರು ಮುರಿಯದ ಮೊದಲನೇ ವಿಕೆಟ್‌ಗೆ 110 ರನ್‌ಗಳ ಜೊತೆಯಾಟವನ್ನು ಆಡಿ ಸೌರಾಷ್ಟ್ರ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು.

127 ಎಸೆತಗಳಲ್ಲಿ 46 ರನ್‌ಗಳಿಸಿ ತಾಳ್ಮೆಯ ಬ್ಯಾಟ್‌ ಮಾಡುತ್ತಿದ್ದ ಹೆತ್ವಿಕ್‌ ಕೊಟಕ್‌ ಅವರನ್ನು ವೈಶಾಖ್‌ ವಿಜಯ್‌ಕುಮಾರ್‌ ಔಟ್‌ ಮಾಡಿದರೆ, ಅಭಿಲಾಷ್‌ ಶೆಟ್ಟಿ 33 ಮತ್ತು 35ನೇ ಓವರ್‌ಗಳಲ್ಲಿ ಕ್ರಮವಾಗಿ ಚಿರಾಗ್‌ ಜಾನಿ ಮತ್ತು ಜೇ ಗೋಯಲ್‌ ಅವರನ್ನು ಔಟ್‌ ಮಾಡಿ ಎದುರಾಳಿ ತಂಡಕ್ಕೆ ಹಿನ್ನಡೆಗೆ ತಳ್ಳಿದರು. ಒಂದು ತುದಿಯಲ್ಲಿ ನಿಂತು ಬ್ಯಾಟ್‌ ಮಾಡಿದ ಹೆತ್ವಿಕ್‌ ಕೊಟಕ್‌ 78 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಗಳಿಸಿದ ಬಳಿಕ ವಿದ್ವತ್‌ ಕಾವೇರಪ್ಪಗೆ ವಿಕೆಟ್‌ ಒಪ್ಪಿಸಿದರು.