ಟಿ20 ವಿಶ್ವಕಪ್ ಟೂರ್ನಿಯಲ್ಲಿ 300 ರನ್ ಗಳಿಸಬಲ್ಲ ತಂಡವನ್ನು ಆರಿಸಿದ ರವಿ ಶಾಸ್ತ್ರಿ!
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 300 ರನ್‌ಗಳ ಗಡಿಯನ್ನು ದಾಟುತ್ತವೆ ಎಂದು ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಕರೆದ ಅವರು, ಒತ್ತಡವನ್ನು ನಿಭಾಯಿಸುವಂತೆ ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತ-ಆಸೀಸ್ ತಂಡಗಳ ಬಗ್ಗೆ ರವಿ ಶಾಸ್ತ್ರಿ ಶಾಕಿಂಗ್ ಹೇಳಿಕೆ. -
ನವದೆಹಲಿ: ಮುಂಬರುವ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಬಗ್ಗೆ ಕ್ರಿಕೆಟ್ ಪಂಡಿತರು ಸಾಕಷ್ಟು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಇದರ ನಡುವೆ ಭಾರತ ತಂಡದ ಮಾಜಿ ಹೆಡ್ ಕೋಚ್ ಮತ್ತು ನಿರೂಪಕ ರವಿ ಶಾಸ್ತ್ರಿ (Ravi Shastri) ನುಡಿದ ಭವಿಷ್ಯ ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಟಿ20 ಕ್ರಿಕೆಟ್‌ನ ಅತಿದೊಡ್ಡ ದಾಖಲೆ ಮುರಿಯಬಹುದು ಎಂದಿದ್ದಾರೆ. ತಂಡಗಳು 300 ರನ್‌ಗಳ ಗಡಿಯನ್ನು ಮೀರಬಹುದು ಎಂದು ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಇದಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ಪ್ರಬಲ ಸ್ಪರ್ಧಿಗಳು ಎಂದು ಅವರು ಬಣ್ಣಿಸಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 300 ರನ್ ಗಳಿಸಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿ ಶಾಸ್ತ್ರಿ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಯಾವುದೇ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಒಬ್ಬ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶತಕ ಗಳಿಸಿದರೆ, ತಂಡವು 300ರ ಸಮೀಪ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಸ್ಕೋರ್ 260 ರನ್‌ಗಳು ಎಂಬುದು ಎಲ್ಲರಿಗೂ ಗೊತ್ತಿದೆ. ಶ್ರೀಲಂಕಾ 2007ರಲ್ಲಿ ಕೀನ್ಯಾ ವಿರುದ್ಧ ಈ ಮೊತ್ತವನ್ನು ಗಳಿಸಿತ್ತು.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭೀತಿ ಹುಟ್ಟಿಸಿರುವ ತಂಡವನ್ನು ಹೆಸರಿಸಿದ ಫಿಲ್ ಸಾಲ್ಟ್!
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಶಸ್ತಿಗೆ ಬಲಿಷ್ಠ ಸ್ಪರ್ಧಿ ಎಂದು ರವಿಶಾಸ್ತ್ರಿ ಗುರುತಿಸಿದ್ದಾರೆ, ಆದರೆ ಅವರು ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾರೆ. ತವರಿನಲ್ಲಿ ಆಡುವ ಮತ್ತು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಒತ್ತಡ ಎಲ್ಲಿಂದಲಾದರೂ ಬರಬಹುದು ಎಂದು ಶಾಸ್ತ್ರಿ ಹೇಳುತ್ತಾರೆ. ಅವರ ಪ್ರಕಾರ, ಟಿ20 ಪಂದ್ಯದಲ್ಲಿ 10-15 ಕೆಟ್ಟ ನಿಮಿಷಗಳು ಇಡೀ ಟೂರ್ನಿಯನ್ನು ಹಾಳುಮಾಡಬಹುದು. ಆಗಾಗ್ಗೆ, ಆಟಗಾರರು ಒತ್ತಡದಿಂದಾಗಿ ಈ ನಿರ್ಣಾಯಕ ಕ್ಷಣಗಳಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಈ ಮಾನಸಿಕ ಒತ್ತಡವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಭಾರತಕ್ಕೆ ಆಸಕ್ತಿದಾಯಕವಾಗಿರುತ್ತದೆ.
"ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ 300ಕ್ಕೂ ಅಧಿಕ ಮೊತ್ತವನ್ನು ಕಲೆ ಹಾಕುವ ಸಾಮರ್ಥ್ಯವಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತನ್ನ ನೆಚ್ಚಿನ ಎರಡು ತಂಡಗಳು ಎಂದು ಹೇಳಲು ನಾನು ಬಯಸುತ್ತೇನೆ. ಆ ರೀತಿಯ ಬಲಿಷ್ಠ ಆಟಗಾರರನ್ನು ಈ ಎರಡೂ ತಂಡಗಳು ಹೊಂದಿವೆ. ಅಗ್ರ ಕ್ರಮಾಂಕದಲ್ಲಿ ಒಬ್ಬರು ಶತಕವನ್ನು ಸಿಡಿಸಿದರೆ, ಆಗ ತಂಡ 300 ರನ್‌ಗಳನ್ನು ಕಲೆ ಹಾಕಬಹುದು," ಎಂದು ರವಿ ಶಾಸ್ತ್ರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾರ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್ ಸ್ಟರ್ಲಿಂಗ್!
ಭಾರತ ತಂಡದ ಬ್ಯಾಟಿಂಗ್ ಡೆಪ್ತ್ ಅತ್ಯುತ್ತಮವಾಗಿದೆ. ಭಾರತ ತಂಡ, ಟೂರ್ನಿಯನ್ನು ಉತ್ತಮವಾಗಿ ಪ್ರಾರಂಭಿಸಿದರೆ, ಅದು ತನ್ನ ದಾರಿಯಲ್ಲಿ ಬರುವ ಯಾವುದೇ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಆರಂಭಿಕ ಹಿನ್ನಡೆಗಳ ಹೊರತಾಗಿಯೂ ದೊಡ್ಡ ಸ್ಕೋರ್ ತಲುಪಲು ಭಾರತೀಯ ತಂಡವು ಸಾಕಷ್ಟು ಬ್ಯಾಟಿಂಗ್ ಡೆಪ್ತ್ ಅನ್ನು ಹೊಂದಿದೆ. ಭಾರತ ತಂಡ ಫೆಬ್ರವರಿ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಯುಎಸ್‌ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.