ನವದೆಹಲಿ: ಸತತ ಸೋಲುಗಳ ಪರಿಣಾಮವಾಗಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಲಖನೌ ಸೂಪರ್ ಜಯಂಟ್ಸ್ (LSG) ತಂಡ, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 9 ರನ್‌ಗಳಿಂದ ಗೆದ್ದು ಬೀಗಿತ್ತು. ಮಳೆಯ ಅಡೆತಡೆಯ ನಡುವೆಯೂ 19 ಓವರ್‌ಗಳಿಗೆ ಪಂದ್ಯವನ್ನು ನಡೆಸಲಾಗಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಕಠಿಣ ಹೋರಾಟ ಮೂಡಿ ಬಂದಿತ್ತು. 213 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿಗೆ ಕೊನೆಯ ಓವರ್‌ನಲ್ಲಿ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಯಾರಿಗೆ ಬೌಲ್ ನೀಡಬೇಕೆಂಬ ಗೊಂದಲಕ್ಕೆ ರಿಷಭ್ ಪಂತ್ ಒಳಗಾಗಿದ್ದರು.
ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ಮಿಚೆಲ್ ಮಾರ್ಷ್ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 209 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಡಿಎಲ್‌ಎಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿ, ಬಹುಬೇಗ ಜೇಕಬ್ ಬೆಥೆಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
RCB vs LSG: ಮಿಚೆಲ್ ಮಾರ್ಷ್ ಶತಕದ ಬಲದಿಂದ ಗೆದ್ದ ಲಖನೌ, ಆರ್‌ಸಿಬಿಗೆ ಸತತ ಎರಡನೇ ಸೋಲು!
ಆದರೆ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್ ಹಾಗೂ ಕೃಣಾಲ್ ಪಾಂಡ್ಯ ಅವರ ನಿರ್ಣಾಯಕ ಬ್ಯಾಟಿಂಗ್ ಬಲದಿಂದ ಆರ್‌ಸಿಬೆ ಗೆಲುವಿನ ಸನಿಹ ಬಂದಿತ್ತು. ಅಂದ ಹಾಗೆ ಕೊನೆಯ ಓವರ್‌ನಲ್ಲಿ 20 ರನ್‌ಗಳ ಅಗತ್ಯವಿದ್ದಾಗ, ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಗೊಂದಲಕ್ಕೆ ಒಳಗಾಗಿದ್ದರು. 19ನೇ ಓವರ್ ಅನ್ನು ಶಹಬಾಝ್ ಅಹ್ಮದ್‌ಗೆ ನೀಡಬೇಕಾ ಅಥವಾ ದಿಗ್ವೇಶ್ ಸಿಂಗ್ ರಾಠಿಗೆ ನೀಡಬೇಕೆಂಬ ಗೊಂದಲಕ್ಕೆ ಅವರು ಸಿಲುಕಿದ್ದರು. ಆದರೆ, ಕೊನೆಯ ಓವರ್ ಬೌಲ್ ಮಾಡಿದ ದಿಗ್ವೇಶ ಸಿಂಗ್ ರೊಮ್ಯಾರಿಯೊ ಶೆಫರ್ಡ್ ಅವರನ್ನು ಕಟ್ಟಿ ಹಾಕಿದ್ದರು. ಅಂತಿಮವಾಗಿ ಅವರು 10 ರನ್‌ಗಳನ್ನು ನೀಡಿದ್ದರು. ಆ ಮೂಲಕ ಎಲ್‌ಎಸ್‌ಜಿಗೆ ಗೆಲುವು ಖಾತ್ರಿಪಡಿಸಿದ್ದರು.
ಕೊನೆಯ ಓವರ್‌ಗೂ ಮುನ್ನ ರಿಷಭ್ ಪಂತ್, ಶಹಬಾಝ್ ಅಹ್ಮದ್ ಹಾಗೂ ದಿಗ್ವೇಶ್ ಸಿಂಗ್ ಅವರ ಪೈಕಿ ಯಾರಿಗೆ 19ನೇ ಓವರ್ ನೀಡಬೇಕೆಂದು ಗೊಂದಲಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಈ ಇಬ್ಬರೂ ಸ್ಪಿನ್ನರ್‌ಗಳ ಜೊತೆ ದೀರ್ಘಾವಧಿ ಸಂಭಾಷಣೆ ನಡೆಸಿದ್ದರು ಹಾಗೂ ಅಂತಿಮವಾಗಿ ಚೆಂಡನ್ನು ದಿಗ್ವೇಶ ಸಿಂಗ್‌ಗೆ ಕೊಟ್ಟರು. ಅದರಂತೆ ಅವರು ಯಶಸ್ವಿಯಾದರು. ಕೃಣಾಲ್ ಪಾಂಡ್ಯ ಹಾಗೂ ರೊಮ್ಯಾರಿ ಶೆಫರ್ಡ್ ಅವರನ್ನು ದಿಗ್ವೇಶ ಕಟ್ಟಿ ಹಾಕಿದ್ದರು.
ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ; ಬೌಲಿಂಗ್ ಸಲಹೆ ನೀಡಿ ಶೂನ್ಯಕ್ಕೆ ಔಟ್
"ಕೊನೆಯ ಓವರ್ ಅನ್ನು ದಿಗ್ವೇಶ್ ಸಿಂಗ್‌ಗೆ ನೀಡಬೇಕಾ ಅಥವಾ ಶಹಬಾಝ್ ಅಹ್ಮದ್‌ಗೆ ನೀಡಬೇಕಾ ಎಂಬುದು ಕಠಿಣ ನಿರ್ಧಾರವಾಗಿತ್ತು. ನಾವು ಒತ್ತಡದಲ್ಲಿದ್ದೆವು. ಆದರೆ, ಇದೇ ಸಮಯದಲ್ಲಿ ನೀವು ನಿಮ್ಮ ಬೌಲರ್ ಮೇಲೆ ವಿಶ್ವಾಸವನ್ನು ಇಡಬೇಕಾಗುತ್ತದೆ. ಶೆಫರ್ಡ್ ಎದುರು ದಿಗ್ವೇಶ್ ಸಿಂಗ್ ಸೂಕ್ತ ಬೌಲರ್ ಆಗಿದರು. ಅವರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿ ಯಶಸ್ವಿಯಾಗಿದ್ದಾರೆ," ಎಂದು ಪೋಸ್ಟ್ ಮ್ಯಾಚ್ ಪ್ರೆಸೇಂಟೇಷನ್‌ನಲ್ಲಿ ರಿಷಭ್ ಪಂತ್ ತಿಳಿಸಿದ್ದಾರೆ.