RCB vs LSG: ಮಿಚೆಲ್ ಮಾರ್ಷ್ ಶತಕದ ಬಲದಿಂದ ಗೆದ್ದ ಲಖನೌ, ಆರ್‌ಸಿಬಿಗೆ ಸತತ ಎರಡನೇ ಸೋಲು!
RCB vs LSG Match Highlights: ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನೀಡಿದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಎದುರಾಳಿ ಲಖನೌ ಸೂಪರ್ ಜಯಂಟ್ಸ್ ಎದುರು 9 ರನ್‌ಗಳಿಂದ ಸೋಲು (ಡಿಎಲ್‌ಎಸ್) ಅನುಭಸಿತು. ಆರ್‌ಸಿಬಿ ಪಾಲಿಗೆ ಇದು ನಾಲ್ಕನೇ ಸೋಲಾದರೆ, ಎಲ್‌ಎಸ್‌ಜಿಗೆ ಮೂರನೇ ಗೆಲುವಾಗಿದೆ.
ಲಖನೌ ಎದುರು ಸೋತ ಆರ್‌ಸಿಬಿ. -
ಲಖನೌ: ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನೀಡಿದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಲಖನೌ ಸೂಪರ್ ಜಯಂಟ್ಸ್ (LSG) ವಿರುದ್ಧವೂ 9 ರನ್‌ಗಳ ಸೋಲು ಅನುಭವಿಸಿತು. ಇದು ಆರ್‌ಸಿಬಿಗೆ ಪಾಲಿಗೆ ಟೂರ್ನಿಯಲ್ಲಿ ನಾಲ್ಕನೇ ಸೋಲಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಆರ್‌ಸಿಬಿ ಕನಸನ್ನು ಸದ್ಯ ಎಲ್‌ಎಸ್‌ಜಿ ಭಗ್ನಗೊಳಿಸಿದೆ. ಬಹುತೇಕ ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಹೊರಗಿರುವ ಲಖನೌ ತಂಡಕ್ಕೆ ಈ ಗೆಲುವು ವಿಶ್ವಾಸವನ್ನು ತಂದುಕೊಟ್ಟಿದೆ. ಇದಕ್ಕೆ ಕಾರಣರಾಗಿದ್ದು ಮಿಚೆಲ್ ಮಾರ್ಷ್ ಸಿಡಿಸಿದ ಶತಕ.
ಮೇ 7 ರಂದು ಗುರುವಾರ ಮಳೆಯ ಅಡೆತಡೆಯ ಹೊರತಾಗಿಯೂ ಲಖನೌ ನೀಡಿದ್ದ 213 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ಬಹುಬೇಗ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಜೇಕಬ್ ಬೆಥೆಲ್ ಹಾಗೂ ವಿರಾಟ್ ಕೊಹ್ಲಿ ಅವರಿಂದ ಜತೆಯಾಟ ಮೂಡಿಬರಲಿಲ್ಲ. ಆದರೆ, ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ 95 ರನ್‌ಗಳ ಜೊತೆಯಾಟದ ಮೂಲಕ ಆರ್‌ಸಿಬಿ ಗೆಲುವಿನ ಹಾದಿಗೆ ಮರಳಿತ್ತು. ಪಡಿಕ್ಕಲ್ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಜತ್ ಪಾಟಿದಾರ್ 31 ಎಸೆತಗಳಲ್ಲಿ 61 ರನ್ ಸಿಡಿಸಿ ಆರ್‌ಸಿಬಿಗೆ ಆಸರೆಯಾಗಿದ್ದರು.
RCB vs LSG: 49 ಎಸೆತಗಳಲ್ಲಿ ಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಮಿಚೆಲ್ ಮಾರ್ಷ್!
ಟಿಮ್ ಡೇವಿಡ್ 17 ಎಸೆತಗಳಲ್ಲಿ 40 ರನ್ ಗಳಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. ಅವರು ಇನ್ನೇನು ಗೆಲ್ಲಿಸುವ ಹಾದಿಯಲ್ಲಿದ್ದಾಗ ಶಹಬಾಝ್ ಅಹ್ಮದ್ ಎಸೆತದಲ್ಲಿ ದಿಗ್ವೇಶ್ ಸಿಂಗ್‌ಗೆ ಕ್ಯಾಚ್ ಕೊಟ್ಟರು. ಡೇವಿಡ್ ಔಟ್ ಆದ ಬಳಿಕ ಕೃಣಾಲ್ ಪಾಂಡ್ಯ 16 ಎಸೆತಗಳಲ್ಲಿ 28 ರನ್ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರು, ಮತ್ತೊಂದು ತುದಿಯಲ್ಲಿ ರೊಮ್ಯಾರಿಯೊ ಶೆಫರ್ಡ್ 15 ಎಸೆತಗಳಲ್ಲಿ 23 ರನ್ ಗಳಿಸಿದರು. ಆದರೆ, ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದಾಗ ದಿಗ್ವೇಶ್ ಸಿಂಗ್ ಒಂದು ಬೌಂಡರಿ ಸೇರಿ 10 ರನ್ ನೀಡಿದರು. ಆ ಮೂಲಕ ಎಲ್‌ಎಸ್‌ಜಿಗೆ ಮೂರನೇ ಗೆಲುವು ಖಾತ್ರಿಗೊಳಿಸಿದರು.
ಎಲ್‌ಎಸ್‌ಜಿ ಪರ ಪ್ರಿನ್ಸ್ ಯಾದವ್ ಮೂರು ವಿಕೆಟ್ ಕಿತ್ತರೆ, ಶಹಬಾಝ್ ಅಹ್ಮದ್ ಎರಡು ವಿಕೆಟ್ ಪಡೆದರು.
Heart rates through the roof, but the Super Giants cross the line! 📈
— IndianPremierLeague (@IPL) May 7, 2026
A nail-biter of a finish sees #LSG hold their nerve to snatch a vital win and stay in the hunt for the playoffs ❤️💙
Updates ▶️ https://t.co/W0eDq9aWb7#TATAIPL | #KhelBindaas | #LSGvRCB | @LucknowIPL pic.twitter.com/DkuAkiqwPn
209 ರನ್ ಕಲೆ ಹಾಕಿದ್ದ ಎಲ್‌ಎಸ್‌ಜಿ
ಇದಕೂ ಮುನ್ನ ಟಾಸ್ ಗೆದ್ದು ಎದರಾಳಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಯೋಜನೆಯನ್ನು ಆರಂಭಿಕ ಮಿಚೆಲ್ ಮಾರ್ಷ್ ಉಲ್ಟಾ ಮಾಡಿದರು. ಮಳೆಯ ಅಡೆತಡೆಯ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಸ್ಪೋಟಕ ಶತಕದ ಬಲದಿಂದ ಆತಿಥೇಯ ಲಖನೌ ಸೂಪರ್ ಜಯಂಟ್ಸ್ ತಂಡ 19 ಓವರ್‌ಗಳಿಗೆ ಮೂರು ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಡಿಎಲ್‌ಎಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿಯನ್ನು ನೀಡಲಾಯಿತು.
𝗠𝗶𝗴𝗵𝘁𝘆. 𝗠𝗮𝗿𝘃𝗲𝗹𝗼𝘂𝘀. 𝗠𝗮𝗿𝘀𝗵 👊
— IndianPremierLeague (@IPL) May 7, 2026
Mitchell Marsh is the Player of the Match for his display of sheer power during a knock of 1️⃣1️⃣1️⃣(56) 💪
WATCH his innings ▶️ https://t.co/7BZBAGMWOB#TATAIPL | #KhelBindaas | #LSGvRCB | @LucknowIPL pic.twitter.com/oHZhkZ8HP6
ಎಲ್‌ಎಸ್‌ಜಿ ಪರ ವೇಗದ ಶತಕ ಬಾರಿಸಿದ ಮಾರ್ಷ್
ಜಾಶ್ ಇಂಗ್ಲಿಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಮಾರ್ಷ್ ಜೊತೆ ಇನಿಂಗ್ಸ್ ಆರಂಭಿಸಿದ ಅರ್ಶಿನ್ ಕುಲಕರ್ಣಿ 17 ರನ್ ಗಳಿಸಿದ ಬಳಿಕ ಔಟ್ ಆದರು. ಇಲ್ಲಿನ ಏಕನಾ ಕ್ರೀಡಾಂಗನದ ಪಿಚ್ ನಿಧಾನಗತಿಯಿಂದ ಕೂಡಿದ್ದು 200 ರನ್‌ಗಳನ್ನು ಕಲೆ ಹಾಕುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಆದರೆ, ಮಿಚೆಲ್ ಮಾರ್ಷ್ ಇದನ್ನು ಸುಳ್ಳಾಗಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಅವರು 49 ಎಸೆತಗಳಲ್ಲಿ ಎಲ್‌ಎಸ್‌ಜಿ ಪರ ವೇಗದ ಶತಕವನ್ನು ಸಿಡಿಸಿದರು. ಅಂತಿಮವಾಗಿ ಆಡಿದ 56 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 111 ರನ್‌ಗಳನ್ನು ಚಚ್ಚಿದರು. ಆ ಮೂಲಕ ಎಲ್‌ಎಸ್‌ಜಿ 200ರ ಗಡಿ ದಾಟಿಸಲು ನೆರವು ನೀಡಿದರು.
10 ಎಸೆತಗಳಲ್ಲಿ 32 ರನ್ ಚಚ್ಚಿದ ಪಂತ್
ಮಿಚೆಲ್ ಮಾರ್ಷ್ ಅಬ್ಬರದ ನಡುವೆ ಆರ್‌ಸಿಬಿ ಬೌಲರ್‌ಗಳು ಮಂಕಾದರು. ಆದರೆ ಅವರನ್ನು 17ನೇ ಓವರ್‌ನಲ್ಲಿ ಔಟ್ ಮಾಡುವಲ್ಲಿ ಜಾಶ್ ಹೇಝಲ್‌ವುಡ್ ಯಶಸ್ವಿಯಾದರು. ಆದರೂ ಡೆತ್ ಓವರ್‌ಗಳಲ್ಲಿ ನಿಕೋಲಸ್ ಪೂರನ್ ಹಾಗೂ ರಿಷಭ್ ಪಂತ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿಗೆ ದೊಡ್ಡ ಹೊಡೆತವನ್ನು ನೀಡಿದರು. ಪೂರನ್ 23 ಎಸೆತಗಳಲ್ಲಿ 38 ರನ್ ಗಳಿಸಿದರೆ, ಪಂತ್ ಕೇವಲ 10 ಎಸೆತಗಳಲ್ಲಿ 320ರ ಸ್ಟ್ರೈಕ್ ರೇಟ್‌ನಲ್ಲಿ 32 ರನ್ ಚಚ್ಚಿದರು. ಆ ಮೂಲಕ ಎಲ್‌ಎಸ್‌ಜಿ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Innings Break!
— IndianPremierLeague (@IPL) May 7, 2026
A magnificent hundred from Mitchell Marsh, followed by a fiery finish propel #LSG to a big total 👏
Scorecard ▶️ https://t.co/W0eDq9aWb7#TATAIPL | #KhelBindaas | #LSGvRCB pic.twitter.com/xmKYJThdZR
ಸ್ಕೋರ್ ವಿವರ (ಡಿಎಲ್‌ಎಸ್)
ಲಖನೌ ಸೂಪರ್ ಜಯಂಟ್ಸ್: 19 ಓವರ್‌ಗಳಿಗೆ 209-3 (ಮಿಚೆಲ್ ಮಾರ್ಷ್ 111 ರನ್, ನಿಕೋಲಸ್ ಪೂರನ್ 38 ರನ್, ರಿಷಭ್ ಪಂತ್ 32 ರನ್; ಕೃಣಾಲ್ ಪಾಂಡ್ಯ 31ಕ್ಕೆ 1, ಜಾಶ್ ಹೇಝಲ್‌ವುಡ್ 49 ಕ್ಕೆ 1)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 19 ಓವರ್‌ಗಳಿಗೆ 203-6 (ರಜತ್ ಪಾಟಿದಾರ್ 61, ಟಿಮ್ ಡೇವಿಡ್ 40, ದೇವದತ್ ಪಡಕ್ಕಲ್ 34, ಕೃಣಾಲ್ ಪಾಂಡ್ಯ 28*, ರೊಮ್ಯಾರಿಯೊ ಶೆಫರ್‌ಡ್ 23* (ಪ್ರಿನ್ಸ್ ಯಾದವ್ 33 ಕ್ಕೆ 3, ಶಹಭಾಝ್ ಅಹ್ಮದ್ 33 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಮಿಚೆಲ್ ಮಾರ್ಷ್