ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಪಂಜಾಬ್‌ ಕಿಂಗ್ಸ್‌ನ ಸತತ 6ನೇ ಸೋಲಿನ ಬಳಿಕ ಮೌನಕ್ಕೆ ಜಾರಿದ ಕೋಚ್‌ ರಿಕಿ ಪಾಂಟಿಂಗ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 23 ರನ್‌ಗಳ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಸತತ ಆರನೇ ಸೋಲು ಅನುಭವಿಸಿದ ಬಳಿಕ ಪಂಜಾಬ್‌ ತಂಡದ ಡ್ರೆಸ್ಸಿಂಗ್‌ ಕೊಠಡಿ ಮೌನಕ್ಕೆ ಜಾರಿಗೆ. ಅದರಲ್ಲಿಯೂ ವಿಶೇಷವಾಗಿ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಅವರು ತಮ್ಮ ಭಾವನೆಗಳನ್ನು ತಡೆಯಲಾಗದೆ ಮೌನಕ್ಕೆ ಜಾರಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಆರ್‌ಸಿಬಿ ಎದುರು ಸೋಲಿನ ಬಳಿಕ ಡಗ್‌ಔಟ್‌ನಲ್ಲಿ ಮೌನಕ್ಕೆ ಶರಣಾದ ರಿಕಿ ಪಾಂಟಿಂಗ್‌.

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ (RCB vs PBKS) ಪಂಜಾಬ್‌ ಕಿಂಗ್ಸ್‌ ತಂಡ 23 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯಲ್ಲಿ ಸತತ 6ನೇ ಸೋಲು ಅನುಭವಿಸಿದ ಬಳಿಕ ಪಂಜಾಬ್‌ ತಂಡದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ತನ್ನ ಕೊನೆಯ ಪಂದ್ಯವನ್ನು ಲಖನೌ ಸೂಪರ್‌ ಜಯಂಟ್ಸ್‌ ಎದುರು ಗೆದ್ದರೂ ಪಂಜಾಬ್‌ ತಂಡದ ನಾಕ್‌ಔಟ್‌ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಹಾಗಾಗಿ ಆರ್‌ಸಿಬಿ ಎದುರು ಸೋಲು ಅನುಭವಿಸಿದ ಬಳಿಕ ಪಂಜಾಬ್‌ ತಂಡದ ಡ್ರೆಸ್ಸಿಂಗ್‌ ರೂಂ ಮೌನಕ್ಕೆ ಜಾರಿದೆ. ವಿಶೇಷವಾಗಿ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ (Ricky Ponting) ಡಗ್‌ಔಟ್‌ನಲ್ಲಿ ಅಸಹಾಕರಾಗಿ ಕುಳಿತಿರುವ ಪೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ಗೆ ಆಗಿತ್ತು. ಅದರಂತೆ ಈ ಸೀಸನಲ್ಲಿಯೂ ಅದೇ ಲಯವನ್ನು ಮುಂದುವರಿಸಿ ಮೊದಲ ಅವಧಿಯಲ್ಲಿ ಆಡಿದ್ದ 7 ಪಂದ್ಯಗಳಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿತ್ತು ಹಾಗೂ ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿತ್ತು. ಒಟ್ಟಾರೆ ಮೊದಲ ಅವಧಿಯಲ್ಲಿ 13 ಅಂಕಗಳ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತ್ತು. ಆದರೆ, ಎರಡನೇ ಅವಧಿಯಲ್ಲಿ ಪಂಜಾಬ್‌ ತಂಡ ತನ್ನ ಗೆಲುವಿನ ಲಯವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಸತತ ಆರು ಪಂದ್ಯಗಳನ್ನು ಪಿಬಿಕೆಎಸ್‌ ಸೋತಿತು. ಭಾನುವಾರ ಆರ್‌ಸಿಬಿ ನೀಡಿದ್ದ 223 ರನ್‌ಗಳ ಗುರಿಯನ್ನು ತಲುಪುವಲ್ಲಿಯೂ ವಿಫಲವಾಯಿತು.

IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್‌ ಅಯ್ಯರ್‌!

ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೊರತಾಗಿ, ಫ್ರಾಂಚೈಸಿಯ ಸಹ ಓನರ್‌ ಪ್ರೀತಿ ಜಿಂಟಾ ಕೂಡ ಪಂದ್ಯ ಮುಗಿದ ಬಳಿಕ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಜೊತೆ ದೀರ್ಘ ಚರ್ಚೆಯಲ್ಲಿ ತೊಡಗಿರುವುದು ಗಮನ ಸೆಳೆಯಿತು. ತಂಡದ ಇತ್ತೀಚಿನ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತವಾದಂತೆಯೇ ಈ ದೃಶ್ಯ ಕಂಡುಬಂದಿತು.

ಒಂದು ಅಥವಾ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವುದು ಸಾಮಾನ್ಯವಾದರೂ, ಪಂಜಾಬ್ ಕಿಂಗ್ಸ್ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ವಿಶೇಷವಾಗಿ ಸೀಸನ್‌ನ ಮೊದಲಾರ್ಧದಲ್ಲಿ ಪಂಜಾಬ್ ಅದ್ಭುತ ಪ್ರದರ್ಶನ ನೀಡಿತ್ತು. ಆರಂಭಿಕ ಏಳು ಪಂದ್ಯಗಳಲ್ಲಿ ಸೋಲು ಕಾಣದೆ ಅಬ್ಬರಿಸಿದ್ದ ತಂಡ, ಒಂದು ಹಂತದಲ್ಲಿ ಪ್ಲೇಆಫ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಂತೆಯೇ ಕಾಣಿಸಿಕೊಂಡಿತ್ತು. ಆದರೆ ಬಳಿಕ ನಿರಂತರ ಸೋಲುಗಳಿಂದ ತಂಡದ ಅಭಿಯಾನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

IPL 2026: ಆರ್‌ಸಿಬಿ ಎದುರು ಸೋತ ಪಂಜಾಬ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಮೌನಕ್ಕೆ ಜಾರಿದ ರಿಕಿ ಪಾಂಟಿಂಗ್‌

ಐಪಿಎಲ್‌ ಇತಿಹಾಸದ ಶ್ರೇಷ್ಠ ಕೋಚ್‌ಗಳಲ್ಲಿ ರಿಕಿ ಪಾಟಿಂಗ್‌ ಒಬ್ಬರು. ಶ್ರೇಯಸ್‌ ಅಯ್ಯರ್‌ ಹಾಗೂ ರಿಕಿ ಪಾಂಟಿಂಗ್‌ ಸಂಯೋಜನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಹಿಂದೆ ಫೈನಲ್‌ಗೆ ಪ್ರವೇಶ ಮಾಡಿತ್ತು. 2025ರಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ, 2026ರ ಟೂರ್ನಿಯ ಎರಡನೇ ಲೆಗ್‌ನಲ್ಲಿ ಪಂಜಾಬ್‌ ನಂಬಲಾಗದ ರೀತಿ ಸತತ ವೈಫಲ್ಯ ಅನುಭವಿಸಿದ ಕನಿಷ್ಠ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ ಎಂಬ ವಾತಾವರಣ ಸೃಷ್ಟಿಯಾಗಿದೆ. ಆದರೆ, ಆರ್‌ಸಿಬಿ ಎದುರು ಸೋಲಿನ ಬೆನ್ನಲ್ಲೆ ರಿಕಿ ಪಾಂಟಿಂಗ್‌ ಡಗ್‌ಔಟ್‌ನಲ್ಲಿ ಕುಸಿದು ಬಿದ್ದಿರುವ ರೀತಿ ಕಂಡುಬಂದರು. ಅವರು ತಮ್ಮ ಭಾವನೆಗಳನ್ನು ತಡೆಯಲಾಗದೆ, ಮೌನಕ್ಕೆ ಜಾರಿದರು. ಪಂಜಾಬ್‌ ಕಿಂಗ್ಸ್‌ಗೆ ಚೊಚ್ಚಲ ಕಪ್‌ ಗೆದ್ದುಕೊಡಬೇಕೆಂಬ ಅವರ ಕನಸು ಈ ಸೀಸನ್‌ನಲ್ಲಿ ಭಗ್ನವಾಗುತ್ತಿದ್ದಂತೆ ಅವರು ಒಂದು ರೀತಿಯಲ್ಲಿ ಖಿನ್ನತೆಗೆ ಒಳಗಾದಂತೆ ಕಂಡು ಬಂದರು.



ಶ್ರೇಯಸ್‌ ಅಯ್ಯರ್‌ ಹೇಳಿದ್ದೇನು?

“ಪವರ್‌ಪ್ಲೇ ಬಳಿಕ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಮೇಲೆ ತಕ್ಷಣವೇ ದಾಳಿ ನಡೆಸಿ ಅದ್ಭುತ ಆರಂಭ ಪಡೆದರು. 222 ರನ್ ಗಳಿಸುವುದು ನಿಜಕ್ಕೂ ಶ್ಲಾಘನೀಯ ಪ್ರದರ್ಶನ. ನನ್ನ ಅನಿಸಿಕೆಯಲ್ಲಿ ಪಂದ್ಯ ಪವರ್‌ಪ್ಲೇಯಲ್ಲೇ ಕೈತಪ್ಪಿತು. ಪವರ್‌ಪ್ಲೇ ವೇಳೆಗೆ ನಮ್ಮ ಮೂರು ವಿಕೆಟ್‌ಗಳು ಕಳೆದುಹೋಗಿದ್ದವು ಮತ್ತು ಪ್ರಮುಖ ರನ್ ಸ್ಕೋರರ್‌ಗಳು ಬೇಗನೇ ಔಟಾದರು. ಫಲಿತಾಂಶದಿಂದ ತುಂಬಾ ನಿರಾಶೆಯಾಗಿದೆ. ಆದರೆ ಶಶಾಂಕ್, ಸ್ಟೋಯ್ನಿಸ್ ಹಾಗೂ ಇನ್ನೂ ಕೆಲ ಆಟಗಾರರ ಹೋರಾಟ ಶ್ಲಾಘನೀಯ,” ಎಂದು ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.