IPL 2026: ಆರ್‌ಸಿಬಿ ಎದುರು ಸೋತ ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್ ಇದೆಯಾ? ಇಲ್ಲಿದೆ ಲೆಕ್ಕಾಚಾರ!
PBKS Playoffs Scenario: ರಾಯಲ್ ಚಾಲೆಂಜರ್ಸ್ ಎದುರು 23 ರನ್‌ಗಳ ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಆರನೇ ಸೋಲು ಅನುಭವಿಸಿದಂತಾಗಿದೆ. ಇದೀಗ ಪಂಜಾಬ್ ತಂಡದ ಪ್ಲೇಆಫ್ಸ್ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನುಳಿದ ಒಂದು ಪಂದ್ಯವನ್ನು ಗೆದ್ದರೂ ಪಂಜಾಬ್‌ಗೆ ಅಂತಿಮ ನಾಲ್ಕರ ಸ್ಥಾನ ಕಷ್ಟ.
ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ಸ್ ಲೆಕ್ಕಾಚಾರ ಹೇಗಿದೆ? -
ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 23 ರನ್‌ಗಳ ಸೋಲಿನ ಮೂಲಕ ಪಂಜಾಬ್ ಕಿಂಗ್ಸ್ ತಂಡದ (PBKS) ಸೋಲಿನ ಸರಣಿ ಮುಂದುವರಿದಿದೆ. ಸತತ ಆರನೇ ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ಹಾದಿ ಅತ್ಯಂತ ಕಠಿಣವಾಗಿದೆ ಹಾಗೂ ಇವರ ನಾಕ್‌ಔಟ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಆದರೆ, ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧೀಕೃತವಾಗಿ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು.
ಭಾನುವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಅವರ ಅರ್ಧಶತಕಗಳ ಸಹಾಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 222 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಂಜಾಬ್‌ಗೆ 223 ರನ್‌ಗಳ ಗುರಿಯನ್ನು ನೀಡಿತು.
RCB vs PBKS: ʻಪವರ್‌ಪ್ಲೇನಲ್ಲಿಯೇ ನಾವು ಸೋತೆವುʼ-ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಬೇಸರ!
ಬಳಿಕ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 19 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದರೂ ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ಹಾಗೂ ಸೂರ್ಯಾಂಶ್ ಶೆಡ್ಗೆ ಅವರ ಕಠಿಣ ಹೋರಾಟದ ಹೊರತಾಗಿಯೂ ಭುವನೇಶ್ವರ್ ಕುಮಾರ್ ಹಾಗೂ ರಸಿಕ್ ಸಲಾಂ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗೆ 199 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸತತ ಆರನೇ ಸೋಲು ಅನುಭವಿಸಿತು.
ಪಂಜಾಬ್ ಕಿಂಗ್ಸ್‌ನ ಪ್ಲೇಆಫ್ಸ್ ಲೆಕ್ಕಾಚಾರ
ಪಂಜಾಬ್ ಕಿಂಗ್ಸ್ ತಂಡ ಮೇ 23ರಂದು ತಮ್ಮ ಅಂತಿಮ ಲೀಗ್ ಪಂದ್ಯವನ್ನು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆಡಲಿದೆ. ಪ್ಲೇಆಫ್ ಹಾದಿಯಲ್ಲಿ ಮುಂದುವರಿಯಲು ಪಂಜಾಬ್ ಕಿಂಗ್ಸ್, ತನ್ನ ಕೊನೆಯ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಆ ಪಂದ್ಯದಲ್ಲಿ ಪಂಜಾಬ್ ಸೋತರೆ, 13 ಅಂಕಗಳೊಂದಿಗೆ ಶ್ರೇಯಸ್ ಅಯ್ಯರ್ ಟೂರ್ನಿಯಿಂದ ಹೊರಬೀಳಲಿದೆ.
ಇದಲ್ಲದೆ, ತನ್ನ ಕೊನೆಯ ಪಂದ್ಯವನ್ನು ಗೆದ್ದರೂ ಪಂಜಾಬ್ ತಂಡದ ಪ್ಲೇಆಫ್ಸ್ ಭವಿಷ್ಯ ಕೋಲ್ಕತಾ ನೈಟ್ ರೈಡರ್ಸ್ , ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ತಮ್ಮ ಮುಂದಿನ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ.
🚨 POINTS TABLE UPDATES 🚨
— Indian Cricket (@IPL2025Auction) May 17, 2026
🔸RCB becomes first team to qualify for playoffs
🔸Gujarat Titans is almost qualified.
🔸After the defeat it will be tough for Punjab Kings.
🔸If Rajasthan Royals wins tonight, they will move to 4th position
🔸Chances of CSK and KKR are also alive… pic.twitter.com/WnJZ9ktS4L
ಪಂಜಾಬ್ ಕಿಂಗ್ಸ್ ತಂಡ, ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಅಗ್ರ ಎರಡರಲ್ಲಿ ಲೀಗ್ ಹಂತವನ್ನು ಮುಗಿಸುವ ಅವಕಾಶವನ್ನು ಕಳೆದುಕೊಂಡಿದೆ. ಇದು ಟೂರ್ನಿಯ ಮೊದಲಾರ್ಧದಲ್ಲಿ ಸೋಲಿಲ್ಲದೆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಪಂಜಾಬ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡರ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು. ಆದರೆ, ಎರಡನೇ ಲೆಗ್‌ನಲ್ಲಿ ಸತತ ಆರು ಸೋಲುಗಳಿಂದ ಪಂಜಾಬ್‌ಗೆ ಭಾರಿ ಹಿನ್ನಡೆಯಾಗಿದೆ.
RCB vs PBKS: ಪಂಜಾಬ್ ಕಿಂಗ್ಸ್ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಪಂಜಾಬ್ ಕಿಂಗ್ಸ್ ಈಗ ಗರಿಷ್ಠ 15 ಅಂಕಗಳನ್ನು ಮಾತ್ರ ತಲುಪಬಹುದಾಗಿದೆ. ಅಂದರೆ ಪಿಬಿಕೆಎಸ್ ಪ್ಲೇಆಫ್‌ಗೆ ಅರ್ಹತೆ ಪಡೆದರೂ ಟ್ರೋಫಿ ಗೆಲ್ಲಲು ಕ್ರಮವಾಗಿ ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಸೇರಿದಂತೆ ಮೂರು ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಾಗುತ್ತದೆ. ಇದೇ ವೇಳೆ, ರಾಜಸ್ಥಾನ್ ರಾಯಲ್ಸ್, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿದರೆ, ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಟಾಪ್-4 ಸ್ಥಾನದಿಂದ ಹೊರಬಿದ್ದು ಐದನೇ ಸ್ಥಾನಕ್ಕೆ ಇಳಿಯಲಿದೆ.