RCB vs SRH: ರಜತ್ ಪಾಟಿದಾರ್ ಬದಲು ಆರ್‌ಸಿಬಿಯನ್ನು ಜಿತೇಶ್ ಶರ್ಮಾ ಮುನ್ನಡೆಸುತ್ತಿರುವುದು ಏಕೆ?
RCB vs SRH: ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ರಜತ್ ಪಾಟಿದಾರ್ ಬದಲು ಜಿತೇಶ್ ಶರ್ಮಾ ಮುನ್ನಡೆಸುತ್ತಿದ್ದಾರೆ.

ಎಸ್‌ಆರ್‌ಎಚ್ ಪಂದ್ಯದಲ್ಲಿ ರಜತ್ ಪಾಟಿದಾರ್ ಇಂಪ್ಯಾಕ್ಟ್ ಪ್ಲೇಯರ್.

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಇದೀಗ ಇಲ್ಲಿನ ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 65ನೇ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ಗೆ ರಜತ್ ಪಾಟಿದಾರ್ (Rajat Patidar) ಅವರು ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಬರುವ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈ ವೇಳೆ ರಜತ್ ಪಾಟಿದಾರ್ ಅವರು ಏಕೆ ಆಡಲಿಲ್ಲ ಎಂಬ ಬಗ್ಗೆ ಅಭಿಮಾನಿಗಳಿಗೆ ಪ್ರಶ್ನೆ ಉಂಟಾಯಿತು. ರಜತ್ ಪಾಟಿದಾರ್ ಬದಲು ಜಿತೇಶ್ ಶರ್ಮಾ ಆರ್‌ಸಿಬಿಯನ್ನು ಮುನ್ನಡೆಸಲು ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.
ಟಾಸ್ ಗೆದ್ದ ಬಳಿಕ ಜಿತೇಶ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ವೇಳೆ ಆರ್‌ಸಿಬಿ ಪ್ಲೇಯಿಂಗ್ IX ಬಗ್ಗೆಯೂ ವಿವರಿಸಿದರು. ಈ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿರುವ ದೇವದತ್ ಪಡಿಕ್ಕಲ್ ಅವರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಬಂದಿದ್ದರೆ, ಜಾಕೋಬ್ ಬೆಥೆಲ್ ಅವರ ಜಾಗಕ್ಕೆ ಫಿಲ್ ಸಾಲ್ಟ್ ಬಂದಿದ್ದಾರೆ. ಈ ವೇಳೆ ರಜತ್ ಪಾಟಿದಾರ್ ಅವರ ಬಗ್ಗೆಯೂ ಜಿತೇಶ್ ಶರ್ಮಾ ಮಾಹಿತಿ ನೀಡಿದರು.
RCB vs SRH: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ರಜತ್ ಪಾಟಿದಾರ್ ನಾಯಕನಾಗಿ ಆಡದೇ ಇರಲು ಕಾರಣವೇನು?
ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ ಎಂದು ಜಿತೇಶ್ ಶರ್ಮಾ ತಿಳಿಸಿದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರು ಗಾಯಕ್ಕೆ ತುತ್ತಾಗಿದ್ದರು. ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಎರಡು ವಾರ ಸಮಯ ಸಿಕ್ಕಿತ್ತು. ಆದರೂ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ನಾಯಕತ್ವದ ಜವಾಬ್ದಾರಿಗೆ ಮರಳಿಲ್ಲ. ಅವರನ್ನು ಇಂಪ್ಯಾಕ್ಸ್ ಪ್ಲೇಯರ್ ಆಗಿ ಆರ್‌ಸಿಬಿ ಎರಡನೇ ಇನಿಂಗ್ಸ್‌ನಲ್ಲಿ ಬಳಸಿಕೊಳ್ಳಲಿದೆ.
🚨 Toss 🚨@RCBTweets won the toss and elected to bowl against @SunRisers in Lucknow.
— IndianPremierLeague (@IPL) May 23, 2025
Updates ▶️ https://t.co/sJ6dOP9ung#TATAIPL | #RCBvSRH pic.twitter.com/8IFxI9fEqa
ಉಭಯ ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ನಾಯಕ, ವಿ.ಕೀ), ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್ಗಿಡಿ, ಸುಯೇಶ್ ಶರ್ಮಾ
🪙 Resuming our campaign on a lucky note, Captain Jitesh wins the toss and chooses to bowl! 🤩
— Royal Challengers Bengaluru (@RCBTweets) May 23, 2025
Team News: 📰
2️⃣ changes from the last game: ⬇️
Salt 🔄 Bethell
Mayank 🔄 Dev#PlayBold #ನಮ್ಮRCB #IPL2025 #RCBvSRH @qatarairways pic.twitter.com/Kdtr7hXBPZ
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿ.ಕೀ), ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕಾಟ್, ಇಸಾನ್ ಮಾಲಿಂಗ
Here’s the starting 1⃣1⃣ you’ll be cheering for tonight, #OrangeArmy! 🧡#PlayWithFire | #RCBvSRH | #TATAIPL2025 pic.twitter.com/W65o7xJPzC
— SunRisers Hyderabad (@SunRisers) May 23, 2025
ಪ್ಲೇಆಫ್ಸ್‌ಗೆ ಪ್ರವೇಶ ಮಾಡಿರುವ ಆರ್‌ಸಿಬಿ
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದೆ. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಿಂದ ಆರ್‌ಸಿಬಿ, 8ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಮಳೆಗೆ ರದ್ದಾಗಿತ್ತು. ಒಟ್ಟು 17 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆದರೆ, ಇನ್ನುಳಿದ ಎರಡೂ ಪಂದ್ಯಗಳನ್ನು ಗೆದ್ದು ಅಗ್ರ ಎರಡು ಸ್ಥಾನಗಳ ಮೂಲಕ ಲೀಗ್ ಹಂತವನ್ನು ಮುಗಿಸಲು ಆರ್‌ಸಿಬಿ ಎದುರು ನೋಡುತ್ತಿದೆ.