RCBW vs GGTW: ಸತತ ಐದನೇ ಪಂದ್ಯ ಗೆದ್ದು ಪ್ಲೇಆಫ್ಸ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ ವನಿತೆಯರು, ಗುಜರಾತ್‌ಗೆ ಹ್ಯಾಟ್ರಿಕ್ ಸೋಲು!
RCBW vs GGTW Match Highlights: ಗೌತಮಿ ನಾಯಕ್ ಅರ್ಧಶತಕ ಹಾಗೂ ಸಯಾಲಿ ಸಾತ್ಘರೆ ಅವರ ಬೌಲಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಗುಜರಾತ್ ಜಯಂಟ್ಸ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು.
ಗುಜರಾತ್ ಜಯಂಟ್ಸ್ ವಿರುದ್ಧ ಆರ್‌ಸಿಬಿ ವನಿತೆಯರಿಗೆ ಜಯ. -
ವಡೋದರ: ಗೌತಮಿ ನಾಯಕ್ (Gautami Naik) ಅರ್ಧಶತಕ ಹಾಗೂ ಸಯಾಲಿ ಸಾತ್ಘರೆ ಅವರ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು RCBW) ಮಹಿಳಾ ತಂಡ, ಗುಜರಾತ್ ಜಯಂಟ್ಸ್ ವಿರುದ್ಧ 61 ರನ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ ಹಾಗೂ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಇನ್ನು ಆಶ್ಲೆ ಗಾರ್ಡ್ನರ್ ನಾಯಕತ್ವದ ಗುಜರಾತ್ ತಂಡ ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿತು.
ಸೋಮವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 179 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಜಯಂಟ್ಸ್ ತಂಡ, ಸಯಾಲಿ ಸಾತ್ಘರೆ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 117 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಈ ಆವೃತ್ತಿಯಲ್ಲಿ ಸತತ ಮೂರನೇ ಸೋಲು ಅನುಭವಿಸಿತು.
ಏಕದಿನ ವಿಶ್ವಕಪ್ ಸನಿಹವಾಗುತ್ತದೆ ಏನು ಮಾಡುತ್ತಿದ್ದೀರಿ? ಗೌತಮ್ ಗಂಭೀರ್‌ಗೆ ಅಜಿಂಕ್ಯ ರಹಾನೆ ಪ್ರಶ್ನೆ!
ಆಶ್ಲೆ ಗಾರ್ಡ್ನರ್ ಅರ್ಧಶತಕ
ಗುರಿಯನ್ನು ಹಿಂಬಾಲಿಸಿದ ಗುಜರಾತ್ ಜಯಂಟ್ಸ್ ತಂಡದ ಪರ ನಾಯಕಿ ಆಶ್ಲೆ ಗಾರ್ಡ್ನರ್ ಅರ್ಧಶತಕ ಬಾರಿಸಿದರು. ಇವರು ಆಡಿದ 43 ಎಸೆತಗಳಲ್ಲಿ 54 ರನ್‌ಗಳನ್ನು ಕಲೆ ಹಾಕಿದರು.ಆ ಮೂಲಕ ಜಿಟಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆದರು. ಆದರೆ, ಇನ್ನುಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಸಯಾಲಿ ಸಾತ್ಘಡೆ 4 ಓವರ್‌ಗಳಿಗೆ 21 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರು. ನದಿನ್ ಡಿ ಕ್ಲರ್ಕ್ ಎರಡು ವಿಕೆಟ್ ಕಿತ್ತರು.
𝗪 𝗪 𝗪 𝗪 𝗪!@RCBTweets make it 5⃣ victories in a row to book a playoffs spot! 👏🙌
— Women's Premier League (WPL) (@wplt20) January 19, 2026
Scorecard ▶️ https://t.co/KAjH514Egw #TATAWPL | #KhelEmotionKa | #GGvRCB pic.twitter.com/tTUds8L5tP
178 ರನ್ ಕಲೆ ಹಾಕಿದ್ದ ಆರ್‌ಸಿಬಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ, ಗೌತಮಿ ನಾಯಕ್ ಅವರ ಅರ್ಧಶತಕದ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 178 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಗುಜರಾತ್‌ಗೆ 179 ರನ್‌ಗಳ ಗುರಿಯನ್ನು ನೀಡಿತ್ತು.
Emphatic and 𝙥𝙡𝙖𝙮𝙤𝙛𝙛𝙨 𝙗𝙤𝙪𝙣𝙙! ❤️
— Women's Premier League (WPL) (@wplt20) January 19, 2026
Congratulations to 2⃣0⃣2⃣4⃣ #TATAWPL champions @RCBTweets on becoming the first team to reach the playoffs 👏🔝#KhelEmotionKa | #GGvRCB pic.twitter.com/QOH99joDQ5
ಆರಂಭಿಕ ಆಘಾತ ಅನುಭವಿಸಿದ್ದ ಬೆಂಗಳೂರು
ಮೊದಲು ಬ್ಯಾಟಿಂಗ್ ಮಾಡುವಂತಾಗಿದ್ದ ಆರ್‌ಸಿಬಿ ತಂಡ, 9 ರನ್ ಇರುವಾಗಲೇ ಎರಡು ವಿಕೆಟ್ ಕಳೆದುಕೊಂಡಿತ್ತು. ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವಾಲ್ ಅವರು ಕೇವಲ ಒಂದು ರನ್ ಗಳಿಸಿ ಔಟ್ ಆಗಿದ್ದರು. ಆರ್‌ಸಿಬಿ ಎರಡು ಓವರ್‌ಗಳ ಅಂತ್ಯಕ್ಕೆ 9 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
How impressive has she been 👌
— Women's Premier League (WPL) (@wplt20) January 19, 2026
A crucial 5⃣0⃣ by Gautami Naik 👏
Her maiden in #TATAWPL 🙌
Updates ▶️ https://t.co/KAjH514Egw #KhelEmotionKa | #GGvRCB | @RCBTweets pic.twitter.com/9iG56f4I4f
ಗೌತಮ್ ನಾಯಕ್ ಅರ್ಧಶತಕ
ಆರ್‌ಸಿಬಿ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ವೇಳೆ ಕ್ರೀಸ್‌ಗೆ ಬಂದಿದ್ದ ಗೌತಮಿ ನಾಯಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಆಡಿದ 55 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಗಳಿಸಿದರು. ಇವರು ಸ್ಮೃತಿ ಮಂಧಾನಾ ಅವರ ಜೊತೆ 60 ರನ್ ಹಾಗೂ ರಿಚಾ ಘೋಷ್ ಅವರ ಜೊತೆ 69 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಆರ್‌ಸಿಬಿ 170ರ ಗಡಿ ದಾಟಲು ನೆರವು ನೀಡಿದ್ದರು. ಮಂಧಾನಾ 26 ರನ್ ಹಾಗೂ ರಿಚಾ ಘೋಷ್ 27 ರನ್ ಗಳಿಸಿದರು.