ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RCBW vs GGW: ರಾಧಾ ಯಾದವ್‌ ಫಿಫ್ಟಿ, ಆರ್‌ಸಿಬಿ ವನಿತೆಯರಿಗೆ ಹ್ಯಾಟ್ರಿಕ್‌ ಗೆಲುವಿನ ಶ್ರೇಯಾಂಕ!

RCBW vs GGW Match Highlights: ರಾಧಾ ಯಾದವ್‌ ಅರ್ಧಶತಕ ಹಾಗೂ ಶ್ರೇಯಾಂಕ ಪಾಟೀಲ್‌ ಸ್ಪಿನ್‌ ಮೋಡಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಗುಜರಾತ್‌ ಜಯಂಟ್ಸ್‌ ವಿರುದ್ಧ 32 ರನ್‌ಗಳ ಗೆಲುವು ಪಡೆದಿದೆ. ಈ ಗೆಲುವಿನ ಮೂಲಕ ಆರ್‌ಸಿಬಿ ವನಿತೆಯರು 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದೆ.

ಗುಜರಾತ್‌ ಜಯಂಟ್ಸ್‌ಗೆ ಸೋಲುಣಿಸಿದ ಆರ್‌ಸಿಬಿ ವನಿತೆಯರು.

ನವಿ ಮುಂಬೈ: ರಾಧಾ ಯಾದವ್‌ (Radha Yadav) ಅರ್ಧಶತಕ ಹಾಗೂ ಶ್ರೇಯಾಂಕ ಪಾಟೀಲ್‌ (Shreyanka Patil) ಸ್ಪಿನ್‌ ಮೋಡಿಯ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 32 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ ಈ ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ವನಿತೆಯರು ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಆರ್‌ಸಿಬಿ ಪರ ನಿರ್ಣಾಯಕ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ರಾಧಾ ಯಾದವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶುಕ್ರವಾರ ಇಲ್ಲಿನ ಡಿ ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಜಯಂಟ್ಸ್‌ ತಂಡ, ಶ್ರೇಯಾಂಕ ಪಾಟೀಲ್‌ ಸ್ಪಿನ್‌ ಮೋಡಿಗೆ ನಲುಗಿತು. ಆ ಮೂಲಕ 18.5 ಓವರ್‌ಗಳಿಗೆ 150 ರನ್‌ಗಳಿಗೆ ಆಲ್‌ಔಟ್‌ ಆಯಿತು ಹಾಗೂ ಸೋಲು ಒಪ್ಪಿಕೊಂಡಿತು. ಕಳೆದ ಪಂದ್ಯದಲ್ಲಿಯೂ ಗುಜರಾತ್‌ ತಂಡ, ಮುಂಬೈ ಇಂಡಿಯನ್ಸ್‌ ಎದುರು 7 ವಿಕೆಟ್‌ಗಳಿಂದ ಸೋತಿತ್ತು. ಜಯಂಟ್ಸ್‌ ತಂಡದ ಚೇಸಿಂಗ್‌ನಲ್ಲಿ ಬೆಥ್‌ ಮೂನಿ (27 ರನ್)‌, ಭಾರತೀ ಫುಲ್ಮಾಲಿ (39 ರನ್‌) ಹಾಗೂ ತನುಜಾ ಕಾನ್ವರ್‌ (21 ರನ್‌) ಅವರು ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ವಿಫಲರಾದರು.

IND vs NZ: ವಾಷಿಂಗ್ಟನ್‌ ಸುಂದರ್‌ ಔಟ್‌, ಭಾರತ ಟಿ20ಐ ತಂಡಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌, ರವಿ ಬಿಷ್ಣೋಯ್!

ಶ್ರೇಯಾಂಕ ಪಾಟೀಲ್‌ಗೆ ಚೊಚ್ಚಲ 5 ವಿಕೆಟ್‌

ಆರ್‌ಸಿಬಿ ಪರ ಅತ್ಯುತ್ತಮವಾಗಿ ಸ್ಪಿನ್‌ ಮೋಡಿ ಮಾಡಿದ ಶ್ರೇಯಾಂಕ ಪಾಟೀಲ್‌, ಡಬ್ಲ್ಯುಪಿಎಲ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಎದುರಾಳಿ ತಂಡವನ್ನು ಬಹುಬೇಗ ಆಲ್‌ಔಟ್‌ ಮಾಡುವಲ್ಲಿ ಆರ್‌ಸಿಬಿಗೆ ನೆರವು ನೀಡಿದರು. ಇವರು ಬೌಲ್‌ ಮಾಡಿದ 3.5 ಓವರ್‌ಗಳಿಗೆ 23 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಇವರ ಜೊತೆಗೆ ಲಾರೆನ್‌ ಬೆಲ್‌ ಮೂರು ವಿಕೆಟ್‌ ಕಿತ್ತರು.



182 ರನ್‌ಗಳನ್ನು ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ರಾಧ ಯಾದವ್‌ ಹಾಗೂ ರಿಚಾ ಘೋಷ್‌ ಅವರ ನಿರ್ಣಾಯಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಜಯಂಟ್ಸ್‌ ತಂಡಕ್ಕೆ 183 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು.



ಆರ್‌ಸಿಬಿಗೆ ಆರಂಭಿಕ ಆಘಾತ

ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ಗ್ರೇಸ್‌ ಹ್ಯಾರಿಸ್‌ ಹಾಗೂ ಸ್ಮೃತಿ ಮಂಧಾನಾ ವಿಫಲರಾದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಹ್ಯಾರಿಸ್‌ ಈ ಪಂದ್ಯದಲ್ಲಿಯೂ 8 ಎಸೆತಗಳಲ್ಲಿ 17 ರನ್‌ ಗಳಿಸಿ ಉತ್ತಮ ಆರಂಭ ಕಂಡಿದ್ದರು. ಆದರೆ, ಕಾಶ್ವೇ ಗೌತಮ್‌ ಔಟ್‌ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಡಯಾಲನ್‌ ಹೇಮಲತಾ ಕೂಡ ಕಾಶ್ವೀಗೆ ವಿಕೆಟ್‌ ಒಪ್ಪಿಸಿದರು. ಮತ್ತೊಂದು ಕಡೆ ನಾಯಕಿ ಸ್ಮೃತಿ ಮಂಧಾನಾ 7 ರನ್‌ಗೆ ರೇಣುಕಾ ಸಿಂಗ್‌ಗೆ ಶರಣಾದರು. 9 ರನ್‌ ಗಳಿಸಿದ ಬಳಿಕ ಗೌತಮಿ ನಾಯಕ್‌ ಕೂಡ ಔಟ್‌ ಆದರು. ಆ ಮೂಲಕ ಆರ್‌ಸಿಬಿ ಕೇವಲ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.



ರಾಧಾ-ರಿಚಾ ಜುಗಲ್‌ಬಂದಿ

ನಂತರ ಐದನೇ ವಿಕೆಟ್‌ಗೆ ಜೊತೆಯಾದ ರಾಧ ಯಾದವ್‌ ಹಾಗೂ ರಿಚಾ ಘೋಷ್‌ ಅವರು ಗುಜರಾತ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಒತ್ತಡವನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಈ ಜೋಡಿ 66 ಎಸೆತಗಳಲ್ಲಿ 105 ರನ್‌ಗಳನ್ನು ದಾಖಲಿಸಿತು. ಆ ಮೂಲಕ ತಂಡದ ಮೊತ್ತವನ್ನು 150ರ ಸನಿಹ ತಂದು ಅಪಾಯದಿಂದ ಪಾರು ಮಾಡಿತು. ಅದ್ಭುತವಾಗಿ ಬ್ಯಾಟ್‌ ಮಾಡಿದ ರಿಚಾ ಘೋಷ್‌, 28 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 44 ರನ್‌ ಗಳಿಸಿದರು. ಆದರೆ, ಅರ್ಧಶತಕದಂಚಿನಲ್ಲಿ ಜಾರ್ಜಿಯಾ ವ್ಯಾರ್‌ಹ್ಯಾಮ್‌ಗೆ ವಿಕೆಟ್‌ಒಪ್ಪಿಸಿದರು.

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ಪ್ಲೇಯಿಂಗ್‌ XI ಕಟ್ಟಿದ ಜಿತೇಶ್‌ ಶರ್ಮಾ!

ರಾಧ ಯಾದವ್‌ ನಿರ್ಣಾಯಕ ಅರ್ಧಶತಕ

ಆರ್‌ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಧಾ ಯಾದವ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 47 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ 66 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಡಬ್ಲ್ಯುಪಿಎಲ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಅರ್ಧಶತಕವನ್ನು ಬಾರಿಸಿದರು. ಕೊನೆಯಲ್ಲಿ ನದಿನ್‌ ಡಿ ಕ್ಲರ್ಕ್‌ ಕೇವಲ 12 ಎಸೆತಗಳಲ್ಲಿ 26 ರನ್‌ ಗಳಿಸಿ ಔಟ್‌ ಆದರು.

ಗುಜರಾತ್‌ ಜಯಂಟ್ಸ್‌ ಪರ ಸೋಫಿ ಡಿವೈನ್‌ ನಾಲ್ಕು ಓವರ್‌ಗಳಿಗೆ 31 ರನ್‌ ನೀಡಿ 3 ವಿಕೆಟ್‌ಗಳನ್ನು ಕಿತ್ತರು. ಕಾಶ್ವೇ ಗೌತಮ್‌ 42 ರನ್‌ ನೀಡಿ ದುಬಾರಿಯಾದರೂ ಎರಡು ವಿಕೆಟ್‌ ಪಡೆದರು.