ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RCBW vs MIW: ನಡಿನ್‌ ಡಿ ಕ್ಲಾರ್ಕ್‌ ಆಲ್‌ರೌಂಡರ್‌ ಆಟದಿಂದ ಗೆದ್ದು ಬೀಗಿದ ಆರ್‌ಸಿಬಿ ವನಿತೆಯರು!

ನಡಿನ್‌ ಡಿ ಕ್ಲರ್ಕ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎದುರು 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿತು.

WPL 2026: ಮುಂಬೈ ಎದುರು ಆರ್‌ಸಿಬಿಯನ್ನು ಗೆಲ್ಲಿಸಿದ ಡಿ ಕ್ಲರ್ಕ್‌!

ಆರ್‌ಸಿಬಿ ತಂಡವನ್ನು ಗೆಲ್ಲಿಸಿದ ನದಿಮ್‌ ಡಿ ಕ್ಲರ್ಕ್‌. -

Profile
Ramesh Kote Jan 9, 2026 11:31 PM

ಮುಂಬೈ: ನಡಿನ್‌ ಡಿ ಕ್ಲರ್ಕ್‌ (Nadine De Klerk) ಅವರ ಆಲ್‌ರೌಂಡರ್‌ ಆಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಮುಂಬೈ ಇಂಡಿಯನ್ಸ್‌ (MI) ಎದುರು ಉದ್ಘಾಟನಾ ಪಂದ್ಯದಲ್ಲಿ ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಆರ್‌ಸಿಬಿ ತಂಡದ ಗೆಲುವಿನ ಶ್ರೇಯ ಡಿ ಕ್ಲರ್ಕ್‌ಗೆ ಸಲ್ಲಬೇಕು. ಏಕೆಂದರೆ ಬೌಲಿಂಗ್‌ನಲ್ಲಿ 4 ವಿಕೆಟ್‌ ಹಾಗೂ ಬ್ಯಾಟಿಂಗ್‌ ಮ್ಯಾಚ್‌ ವಿನ್ನಿಂಗ್‌ 63 ರನ್‌ಗಳನ್ನು ಬಾರಿಸಿದರು. ಅದರಲ್ಲಿಯೂ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ ಆರ್‌ಸಿಬಿಯನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.

ಇಲ್ಲಿನ ಡಿ ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಮುಂಬೈ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಗ್ರೇಸ್‌ ಹ್ಯಾರಿಸ್‌ ಅವರು 40 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಉತ್ತಮ ಆರಂಭ ತಂದುಕೊಟ್ಟಿದ್ದರು. ಆದರೆ, ಸ್ಮೃತಿ (18) ಹಾಗೂ ಹ್ಯಾರಿಸ್‌ (25) ಅವರು ಹಠಾತ್‌ ವಿಕೆಟ್‌ ಒಪ್ಪಿಸಿದ ಬಳಿಕ ಆರ್‌ಸಿಬಿ, ಡಯಲಾನ ಹೇಮಲತಾ, ರಿಚಾ ಘೋಷ್‌ ಹಾಗೂ ರಾಧ ಯಾದವ್‌ ಅವರ ವಿಕೆಟ್‌ಗಳನ್ನು ತ್ವರಿತವಾಗಿ ಕಳೆದುಕೊಂಡಿತು. ಆ ಮೂಲಕ ಆರ್‌ಸಿಬಿ 65 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

WPL 2026: ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಎಲಿಸ್‌ ಪೆರಿ ಏಕೆ ಆಡುತ್ತಿಲ್ಲ?

ನಡಿನ್‌ ಡಿ ಕ್ಲರ್ಕ್‌ ಅಬ್ಬರ

ಬಹುಬೇಗ 5 ವಿಕೆಟ್‌ ಕಳೆದುಕೊಂಡು ಬಳಿಕ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಆರ್‌ಸಿಬಿ ಕಳೆದುಕೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ನಡಿನ್‌ ಡಿ ಕ್ಲರ್ಕ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಪಂದ್ಯದ ದಿಕ್ಕನ್ನು ಬದಲಿಸಿದರು. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಡಿನ್‌, ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆಡಿದ 44 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 63 ರನ್‌ ಗಳಿಸಿದರು. ಅದರಲ್ಲಿಯೂ ವಿಶೇಷವಾಗಿ ಕೊನೆಯ ಎರಡು ಓವರ್‌ನಲ್ಲಿ ಆರ್‌ಸಿಬಿಗೆ 29 ರನ್‌ ಅಗತ್ಯವಿತ್ತು ಹಾಗೂ ಕೊನೆಯ ಓವರ್‌ನಲ್ಲಿ 18 ರನ್‌ ಅಗತ್ಯವಿತ್ತು. ಈ ವೇಳೆ ನಡಿನ್‌ ಡಿ ಕ್ಲರ್ಕ್‌ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿ ಆರ್‌ಸಿಬಿಗೆ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟರು. ಕೊನೆಯ ಅರುಂಧತಿ ರೆಡ್ಡಿ 20 ರನ್‌ಗಳ ಕೊಡುಗೆಯನ್ನು ನೀಡಿದ್ದರು.



ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿ ಗೆದ್ದು ಬೀಗಿತು. ಮುಂಬೈ ಪರ ನಿಕೋಲಾ ಕ್ಯಾರಿ ಹಾಗೂ ಅಮೇಲಿಯಾ ಕೆರ್‌ ತಲಾ ಎರಡೆರಡು ವಿಕೆಟ್‌ ಕಿತ್ತರು.

154 ರನ್‌ ಗಳಿಸಿದ ಆರ್‌ಸಿಬಿ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ, ಮಧ್ಯಮ ಕ್ರಮಾಂಕದ ನಿಕೋಲಾ ಕ್ಯಾರಿ ಮತ್ತು ಸಜೀವನ್‌ ಸಂಜನಾ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಮುಂಬೈ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 154 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 155 ರನ್‌ಗಳ ಗುರಿಯನ್ನು ನೀಡಿತು.‌



ಮುಂಬೈಗೆ ಶಾಕ್‌ ನೀಡಿದ್ದ ಲಾರೆನ್ ಬೆಲ್‌

ಹೊಸ ಚೆಂಡಿನಲ್ಲಿ ಅತ್ಯುತ್ತಮವಾಗಿ ಬೌಲ್‌ ಮಾಡಿದ ಲಾರೆನ್‌ ಬೆಲ್‌, ಟೂರ್ನಿಯ ಹಾಗೂ ಪಂದ್ಯದ ಮೊಟ್ಟ ಮೊದಲ ಓವರ್‌ನಲ್ಲಿ ಒಂದೇ ಒಂದು ರನ್‌ ನೀಡದೆ ಮೇಡಿನ್‌ ಪಡೆದರು. ಇವರು ಆರಂಭಿಕ ಎರಡು ಓವರ್‌ಗಳಲ್ಲಿ ಕೇವಲ ಒಂದು ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದರು. ಅಂತಿಮವಾಗಿ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 14 ರನ್‌ ನೀಡಿ ಒಂದು ವಿಕೆಟ್‌ ಕಿತ್ತರು.



ಮಂಬೈ ಪರ ಆರಂಭಿಕ ಆಟಗಾರ್ತಿ ಜಿ ಕಮಲಿನಿ 28 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 32 ರನ್‌ ಗಳಿಸಿದರು. ಆದರೆ, ಅಮೇಲಿಯಾ ಕೆರ್‌, ನ್ಯಾಟ್‌ ಸೀವರ್‌ ಬ್ರಂಟ್‌ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕದೆ ಔಟ್‌ ಆದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ 20 ರನ್‌ ಗಳಿಸಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

WPL 2026: ಮೇಡಿನ್‌ ಓವರ್‌ ಬೌಲ್‌ ಮಾಡಿ ಆರ್‌ಸಿಬಿ ಫ್ಯಾನ್ಸ್‌ ದಿಲ್‌ ಗೆದ್ದ ಸುಂದರಿ ಲಾರೆನ್‌ ಬೆಲ್‌ ಯಾರು?

ಮಧ್ಯಮ ಕ್ರಮಾಂಕದಲ್ಲಿ ಐದನೇ ವಿಕೆಟ್‌ಗೆ ಜೊತೆಯಾದ ನಿಕೋಲಾ ಕ್ಯಾರಿ ಹಾಗೂ ಸಜೀವನ್‌ ಸಂಜನಾ ಅವರು 82 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 150ರ ಸನಿಹ ತಂದು ವಿಕೆಟ್‌ ಒಪ್ಪಿಸಿದರು. ಸಂಜನಾ ಅವರು 25 ಎಸೆತಗಳಲ್ಲಿ 45 ರನ್‌ಗಳನ್ನು ಬಾರಿಸಿದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಚೆನ್ನಾಗಿ ಆಡಿದ್ದ ನಿಕೋಲಾ ಕ್ಯಾರಿ 29 ಎಸೆತಗಳಲ್ಲಿ 40 ರನ್‌ಗಳನ್ನು ಕಲೆ ಹಾಕಿದರು.

ಆರ್‌ಸಿಬಿ ಪರ ನಡಿನ್‌ ಡಿ ಕ್ಲರ್ಕ್‌ ತಮ್ಮ ಸ್ಪಿನ್‌ ಮೋಡಿಯಿಂದ ನಾಲ್ಕು ಓವರ್‌ಗಳಿಗೆ 26 ರನ್‌ ನೀಡಿ 4 ವಿಕೆಟ್‌ ಕಿತ್ತರು.