ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ನ್ಯೂಜಿಲೆಂಡ್‌ ಏಕದಿನ ಸರಣಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು ಆಟಗಾರರು!

India vs New Zealand: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಂದು ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವುದು ಬಾಕಿ ಇದೆ. ಮುಂದಿನ ಎರಡು ದಿನಗಳಲ್ಲಿ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸುವುದು ಬಾಕಿ ಇದೆ. ಆದರೆ, ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು ಆಟಗಾರರನ್ನು ಇಲ್ಲಿ ನೀಡಲಾಗಿದೆ.

ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು ಆಟಗಾರರು!

ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು ಆಟಗಾರರು. -

Profile
Ramesh Kote Dec 28, 2025 8:03 PM

ನವದೆಹಲಿ: ಮುಂದಿನ ವಾರ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ (BCCI) ಆಯ್ಕೆ ಸಮಿತಿಯು ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (India ODI Squad) ಪ್ರಕಟಿಸಲಿದೆ. ಈ ಬಾರಿ ಏಕದಿನ ತಂಡದಲ್ಲಿ ಕೆಲವೊಂದು ಬದಲಾವಣೆಯನ್ನು ತರಬಹುದು. ಶುಭಮನ್‌ ಗಿಲ್‌ (Shubman Gill) ಅವರು ಈ ಸರಣಿಯ ಭಾರತ ತಂಡಕ್ಕೆ ಮರಳಲಿದ್ದಾರೆ. ಕುತ್ತಿಗೆ ಗಾಯದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶುಭಮನ್‌ ಗಿಲ್‌ ಅಲಭ್ಯರಾಗಿದ್ದರು. ಆದರೆ, ಇದೇ ತಂಡದ ವಿರುದ್ಧ ಟಿ20ಐ ಸರಣಿಯ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು. ಅದಲ್ಲದೆ, ಪಂಜಾಬ್‌ ಪರ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ಆಡಿದ್ದರು. ಇದೀಗ ಅವರು ಕಿವೀಸ್‌ ಎದುರು ಏಕದಿನ ಸರಣಿಯನ್ನು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಭಾರತ ತಂಡದಲ್ಲಿ ಆಡಿದ್ದ ಬಹುತೇಕ ಆಟಗಾರರನ್ನು ನ್ಯೂಜಿಲೆಂಡ್‌ ಸರಣಿಗೂ ಉಳಿಸಿಕೊಳ್ಳಬಹುದು. ಆದರೆ, ಇವರ ಪೈಕಿ ಮೂವರು ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಡುವ ಸಾಧ್ಯತೆ ಇದೆ. ಈ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

IND vs NZ: ಸಚಿನ್‌ ತೆಂಡೂಲ್ಕರ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರುವ ಸನಿಹದಲ್ಲಿ ರೋಹಿತ್‌ ಶರ್ಮಾ!

ನ್ಯೂಜಿಲೆಂಡ್‌ ಏಕದಿನ ಸರಣಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು ಆಟಗಾರರು

1.ರಿಷಭ್‌ ಪಂತ್‌

ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಏಕದಿನ ಸರಣಿಯಲ್ಲಿ ರಿಷಭ್‌ ಪಂತ್‌ ಇದ್ದರು. ಆದರೆ, ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. 2024ರ ಆಗಸ್ಟ್‌ ಬಳಿಕ ಅವರು ಏಕದಿನ ತಂಡದ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಚಾಂಪಿಯನ್ಸ್‌ ಟ್ರೋಫಿ ಹಾಗೂ ಇಂಗ್ಲೆಂಡ್‌ ವಿರುದ್ಧದ ತವರು ಸರಣಿಯಲ್ಲಿಯೂ ಪಂತ್‌ ಬೆಂಚ್‌ ಕಾದಿದ್ದರು.

ಅವರು ಮತ್ತೊಮ್ಮೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಬೆಂಚ್‌ ಕಾದಿದ್ದರು. ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ಇಶಾನ್ ಕಿಶನ್ ಅವರನ್ನು ಬದಲಾಯಿಸಬಹುದು, ಇದರಿಂದಾಗಿ ಅವರಿಗೆ ವಿಶ್ವಕಪ್‌ಗೂ ಮುನ್ನ ಸ್ವಲ್ಪ ಸಮಯ ಸಿಕ್ಕಂದತಾಗುತ್ತದೆ.

ಗೌತಮ್‌ ಗಂಭೀರ್‌ ಭಾರತದ ಹೆಡ್‌ ಕೋಚ್‌ ಹುದ್ದೆಯನ್ನು ಕಳೆದುಕೊಳ್ತಾರಾ? ಸ್ಪಷ್ಟನೆ ನೀಡಿದ ಬಿಸಿಸಿಐ!

2.ಧ್ರುವ್‌ ಜುರೆಲ್‌

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಧ್ರುವ್‌ ಜುರೆಲ್‌ ಮೊದಲ ಬಾರಿ ಒಡಿಐ ತಂಡದಲ್ಲಿ ಸ್ಥಾನವನ್ನು ಪಡೆದಿದ್ದರು. ಆದರೆ, ಅವರು ಅವಕಾಶ ಸಿಗದೆ ಬೆಂಚ್‌ ಕಾದಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಅವರು ಬೆಂಚ್‌ನಲ್ಲಿದ್ದರು. ಹಾಗಾಗಿ ಕಿವೀಸ್‌ ಏಕದಿನ ಸರಣಿಯ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್‌ ಅವರನ್ನು ಕರೆ ತರುವ ಸಾಧ್ಯತೆ ಇದೆ. ಏಕೆಂದರೆ ಟಿ20 ವಿಶ್ವಕಪ್‌ಗೂ ಮುನ್ನ ಸ್ವಲ್ಪ ಅಭ್ಯಾಸವಾಗಲಿ ಎಂಬ ಉದ್ದೇಶ ಇದಾಗಿದೆ. ಹಾಗಾಗಿ ಸಂಜು ಮತ್ತು ಇಶಾನ್‌ ಕಿಶನ ಇಬ್ಬರನ್ನು ಕರೆ ತರಬಹುದು.

AUS vs ENG: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್‌ ಗಳಿಸಿದ ಜೋ ರೂಟ್‌!

3.ತಿಲಕ್‌ ವರ್ಮಾ

ಗಾಯದಿಂದ ಗುಣಮುಖರಾಗಿ ದಕ್ಷಿಣ ಆಫ್ರಿಕಾ ಟಿ20ಐ ಸರಣಿಯ ಮೂಲಕ ಭಾರತ ತಂಡಕ್ಕೆ ಮರಳಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ತಮ್ಮ ಫಿಟ್‌ನೆಸ್‌ ಅನ್ನು ಸಾಬೀತುಪಡಿಸಿದ್ದರು. ಹಾಗಾಗಿ ಕಿವೀಸ್‌ ಎದುರು ಏಕದಿನ ಸರಣಿಗೂ ಹಾರ್ದಿಕ್‌ ಬರುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಕೀ ಆಟಗಾರ. ಹಾಗಾಗಿ ಅವರನ್ನು 50 ಓವರ್‌ಗಳ ಸ್ವರೂಪಕ್ಕೆ ಸೇರಿಸಬಹುದು.