ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rising star Asia Cup: ಪಾಕಿಸ್ತಾನ ಎ ವಿರುದ್ಧ ಭಾರತ ಎ ತಂಡಕ್ಕೆ ಸೋಲು!

India A vs Pakistan A: 2025ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಪಾಕಿಸ್ತಾನ ಎ ತಂಡ, ಭಾರತ ಎ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ದೋಹಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ಎ ತಂಡ 136 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಪಾಕಿಸ್ತಾನ ಎ ತಂಡ ಈ ಮೊತವನ್ನು ಸುಲಭವಾಗಿ ಚೇಸ್‌ ಮಾಡಿ ಸೆಮಿಫೈನಲ್‌ಗೆ ಪ್ರವೇಶ ಮಾಡಿತು.

ಪಾಕಿಸ್ತಾನ ಎ ವಿರುದ್ಧ ಭಾರತ ಎ ತಂಡಕ್ಕೆ ಸೋಲು.

ದೋಹಾ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ (Asia Cup Rising Stars) ಟೂರ್ನಿಯಲ್ಲಿ ಪಾಕಿಸ್ತಾನ ಎ (Pakistan A) ವಿರುದ್ಧ ಭಾರತ ಎ ತಂಡ (India A) ಸೋಲು ಅನುಭವಿಸಿತು. ಕತಾರ್‌ನ ದೋಹಾದಲ್ಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ, 8 ವಿಕೆಟ್‌ಗಳಿಂದ ಜಯಗಳಿಸಿತು. ಟಾಸ್ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಎ ತಂಡ, 19 ನೇ ಓವರ್‌ನಲ್ಲಿ 136 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ, ತಂಡದ ಸ್ಕೋರ್ 10ನೇ ಓವರ್‌ನಲ್ಲಿ 2 ವಿಕೆಟ್‌ಗೆ 91 ರನ್ ಆಗಿತ್ತು. ನಂತರ ಭಾರತದ ವಿಕೆಟ್‌ಗಳು ತ್ವರಿತವಾಗಿ ಉರುಳಿದ್ದವು. ಪಾಕಿಸ್ತಾನ ಎ ತಂಡ 14ನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಸುಲಭವಾಗಿ ಗುರಿಯನ್ನು ತಲುಪಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ಎ ಸೆಮಿಫೈನಲ್‌ಗೆ ಪ್ರವೇಶ ಮಾಡಿತು.

ವೈಭವ್ ಸೂರ್ಯವಂಶಿ ಭಾರತ ಎ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಪ್ರಿಯಾಂಶ್ ಆರ್ಯ 10 ರನ್‌ಗಳಿಗೆ ಔಟಾದರು, ಆದರೆ ವೈಭವ್ ನಂತರ ನಮನ್ ಧೀರ್ ಸೇರಿಕೊಂಡು ಸುಲಭವಾಗಿ ರನ್ ಗಳಿಸಿದರು. ಬ್ಯಾಟಿಂಗ್ ಪವರ್‌ಪ್ಲೇನಲ್ಲಿ ಭಾರತ ಎ ತಂಡ 50 ರನ್ ಗಳಿಸಿತು. ನಮನ್ ಧೀರ್ 35 ರನ್ ಗಳಿಸಿದ ನಂತರ ಔಟಾದರು. ಸಾದ್ ಮಸೂದ್ ಇವರ ವಿಕೆಟ್ ಪಡೆದರು. ಧೀರ್ 20 ಎಸೆತಗಳಲ್ಲಿ 35 ರನ್ ಗಳಿಸಿದರು. ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ 45 ರನ್ ಗಳಿಸಿ ಅರ್ಧಶತಕ ಗಳಿಸಲು ವಿಫಲರಾದರು. ಸುಫ್ಯಾನ್ ಮುಕೀಲ್ ಅವರ ವಿಕೆಟ್ ಪಡೆದರು.

IND vs SA: ʻಗೌತಮ್‌ ಗಂಭೀರ್‌ ಭಾರತ ತಂಡದ ಅತ್ಯಂತ ಕೆಟ್ಟ ಕೋಚ್‌ʼ-ರೊಚ್ಚಿಗೆದ್ದ ಅಭಿಮಾನಿಗಳು!

ಇಲ್ಲಿಂದ ಪಾಕಿಸ್ತಾನ ಎ ತಂಡ ಕಮ್‌ಬ್ಯಾಕ್‌ ಮಾಡಿತು. ಜಿತೇಶ್ ಶರ್ಮಾ, ನೆಹಾಲ್ ವಧೇರಾ ಮತ್ತು ಅಶುತೋಷ್ ಶರ್ಮಾ ಕಡಿಮೆ ಮೊತ್ತಕ್ಕೆ ಔಟಾದರು. ಕೆಳ ಕ್ರಮಾಂಕದಲ್ಲಿ ಹರ್ಷ್ ದುಬೆ 19 ರನ್ ಗಳಿಸಿದರು. ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ತಂಡದ ಮೊತ್ತ 19ನೇ ಓವರ್‌ನಲ್ಲಿ 136 ರನ್‌ಗಳಿಗೆ ಇಳಿಯಿತು. ಶಾಹಿದ್ ಅಜೀಜ್ ಮೂರು ವಿಕೆಟ್ ಪಡೆದರೆ, ಮಾಜ್ ಸದಾಕತ್ ಮತ್ತು ಸಾದ್ ಮಸೂದ್ ತಲಾ ಎರಡು ವಿಕೆಟ್ ಪಡೆದರು.

ಮಾಝ್‌ ಸದಾಕತ್‌ ಅರ್ಧಶತಕ

ಮಾಜ್ ಸದಾಕತ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊಹಮ್ಮದ್ ನಯೀಮ್ 10 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು, ಆದರೆ ಸದಾಕತ್ ಭಯ ಮುಕ್ತವಾಗಿ ಆಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 53 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಪಾಕಿಸ್ತಾನ ಎ ಬ್ಯಾಟಿಂಗ್ ಪವರ್‌ಪ್ಲೇನಲ್ಲಿ 57 ರನ್ ಗಳಿಸಿತು, ಇದರಿಂದಾಗಿ ಭಾರತ ಎ ತಂಡ ಕಮ್‌ಬ್ಯಾಕ್‌ ಮಾಡಲು ಆಗಲಿಲ್ಲ. 7 ನೇ ಓವರ್‌ನಲ್ಲಿ ನಮನ್ ಧೀರ್ 20 ರನ್ ಬಿಟ್ಟುಕೊಟ್ಟರು. ಸದಾಕತ್‌ 31 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗಳಿಸಿದರು.

IND vs SA: ʻಪಂದ್ಯ ಟರ್ನ್‌ ಆಗಿದ್ದೇ ಇಲ್ಲಿʼ-ಭಾರತ ತಂಡ ಸೋಲಲು ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್‌ ಪೂಜಾರ!

ಪಾಕಿಸ್ತಾನ ಎ ತಂಡ 13.2 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ಪಂದ್ಯ ಶ್ರೇಷ್ಠ ಮಾಜ್ ಸದಾಕತ್ 47 ಎಸೆತಗಳಲ್ಲಿ 79 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು 7 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಫೈಕ್ ಸಿಕ್ಸರ್‌ನೊಂದಿಗೆ ಪಂದ್ಯವನ್ನು ಮುಗಿಸಿದರು. ಭಾರತ ಎ ತಂಡದ ಬೌಲರ್‌ಗಳು 17 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟರು. ಭಾರತದ ಪರ ಯಶ್ ಠಾಕೂರ್ ಮತ್ತು ಸುಯಾಶ್ ಶರ್ಮಾ ತಲಾ 1 ವಿಕೆಟ್ ಪಡೆದರು.