ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶ ಎ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ ಎ!

ಪ್ರಸ್ತುತ ನಡೆಯುತ್ತಿರುವ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಎ ತಂಡದ ಕನಸು ಭಗ್ನವಾಗಿದೆ. ಬಾಂಗ್ಲಾದೇಶ ಎ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ರೋಚಕ ಓವರ್‌ನಲ್ಲಿ ಭಾರತ ಎ ತಂಡ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಸೆಮಿಫೈನಲ್‌ನಲ್ಲಿ ಸೋತ ಭಾರತ ಎ!

ಬಾಂಗ್ಲಾದೇಶ ವಿರುದ್ಧ ಸೋತು ಫೈನಲ್‌ನಿಂದ ಹೊರಬಿದ್ದ ಭಾರತ ಎ -

Profile
Ramesh Kote Nov 21, 2025 9:53 PM

ದೋಹಾ: ಬಾಂಗ್ಲಾದೇಶ ಎ ತಂಡ ಸೂಪರ್ ಓವರ್‌ನಲ್ಲಿ ಭಾರತ ಎ ತಂಡವನ್ನು ಸೋಲಿಸಿ ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಟೂರ್ನಿಯ (Rising Stars Asia Cup 2025) ಫೈನಲ್‌ಗೆ ಅರ್ಹತೆ ಪಡೆಯಿತು. ಶುಕ್ರವಾರ ನಡೆದಿದ್ದ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ಎ ತಂಡ, ಎದುರಾಳಿ ಭಾರತ ಎ ತಂಡಕ್ಕೆ 195 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ಎ ತಂಡ (India A) ತನ್ನ 20 ಓವರ್‌ಗಳಲ್ಲಿ 194 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಆ ಮೂಲಕ ಕೇವಲ ಒಂದು ರನ್‌ನಿಂದ ಭಾರತ ತಂಡ ಸೋಲಿನಿಂದ ತಪ್ಪಿಸಿಕೊಂಡಿತ್ತು. ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್‌ಗೆ ಮೊರೆ ಹೋಗಲಾಗಿತ್ತು. ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ಒಂದೇ ಒಂದು ರನ್ ಗಳಿಸದೆ ಎರಡೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಬಾಂಗ್ಲಾದೇಶ ಎ (Bangladesh A) ಸುಲಭವಾಗಿ ಗೆದ್ದುಕೊಂಡಿತು.

ಭಾರತ ತಂಡ, ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ಟೂರ್ನಿಯಾದ್ಯಂತ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವೈಭವ್ ಸೂರ್ಯವಂಶಿ ಅವರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಓಪನಿಂಗ್‌ಗೆ ಕಳುಹಿಸಲಿಲ್ಲ. ಜಿತೇಶ್ ಶರ್ಮಾ ಮತ್ತು ರಮಣದೀಪ್ ಸಿಂಗ್ ಬ್ಯಾಟ್‌ ಮಾಡಲು ಬಂದರು. ಬಾಂಗ್ಲಾದೇಶದ ಪರವಾಗಿ ರಿಪನ್ ಬೌಲಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರು. ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ರನ್ ಗಳಿಸದೆ ಜಿತೇಶ್ ಶರ್ಮಾ ಅವರನ್ನು ರಿಪನ್ ಬೌಲ್ಡ್ ಮಾಡಿದರು. ಮುಂದಿನ ಎಸೆತದಲ್ಲಿ ಅಶುತೋಷ್ ಶರ್ಮಾ ಕೂಡ ಔಟಾದರು. ಆ ಮೂಲಕ ಭಾರತ ಎ ತಂಡ ಸೂಪರ್‌ ಓವರ್‌ನಲ್ಲಿ ಖಾತೆ ತೆರೆಯದೆ ಎರಡು ವಿಕೆಟ್‌ ಕಳೆದುಕೊಂಡಿತು.

15 ಸಿಕ್ಸರ್‌! 32 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿದ ವೈಭವ್‌ ಸೂರ್ಯವಂಶಿ!

ಕೇವಲ ಒಂದು ರನ್ ಬೆನ್ನಟ್ಟಿದ ಬಾಂಗ್ಲಾದೇಶ ತಂಡ, ಸುಯಾಶ್ ಶರ್ಮಾ ಎಸೆದ ಮೊದಲ ಎಸೆತದಲ್ಲೇ ಯಾಸಿರ್ ಅಲಿಯನ್ನು ವಿಕೆಟ್ ಅನ್ನು ಕಳೆದುಕೊಂಡಿತು. ರಮಣದೀಪ್ ಬೌಂಡರಿ ಬಳಿ ಅದ್ಭುತ ಕ್ಯಾಚ್ ಪಡೆದರು. ನಂತರ ಸುಯಾಶ್ ಶರ್ಮಾ ಮುಂದಿನ ಎಸೆತದಲ್ಲಿ ವೈಡ್ ಹಾಕಿದರು. ಆ ಮೂಲಕ ಬಾಂಗ್ಲಾದೇಶ ಎ ತಂಡ ಗೆಲುವು ಪಡೆಯಿತು.

ಒಂದು ರನ್‌ನಿಂದ ಗೆಲುವಿನಿಂದ ತಪ್ಪಿಸಿಕೊಂಡ ಭಾರತ ಎ

ಬಾಂಗ್ಲಾದೇಶ ನೀಡಿದ್ದ 195 ರನ್‌ಗಳಿಗೆ ಉತ್ತರವಾಗಿ, ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಟ್ಟಿದ್ದರು. ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ 38 ರನ್ ಗಳಿಸಿದರೆ, ಪ್ರಿಯಾಂಶ್ 23 ಎಸೆತಗಳಲ್ಲಿ 44 ರನ್ ಗಳಿಸಿದರು. ಜಿತೇಶ್ ಶರ್ಮಾ ಕೂಡ 33 ರನ್ ಗಳಿಸುವ ಮೂಲಕ ಇನಿಂಗ್ಸ್‌ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ನೆಹಲ್ ವಧೇರಾ ಅವರ 29 ಎಸೆತಗಳಲ್ಲಿ ನಿಧಾನಗತಿಯ 32 ರನ್ ಭಾರತವನ್ನು ಹಿನ್ನಡೆಗೆ ತಳ್ಳಿತು. ಅಂತಿಮವಾಗಿ, ಅಶುತೋಷ್ ಶರ್ಮಾ 6 ಎಸೆತಗಳಲ್ಲಿ 13 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ಕಳುಹಿಸಿದರು. ಆ ಮೂಲಕ ಭಾರತ ಎ ಕೇವಲ ಒಂದು ರನ್‌ನಿಂದ ಗೆಲುವು ತಪ್ಪಿಸಿಕೊಂಡಿತು.



ಭಾರತಕ್ಕೆ 195 ರನ್‌ಗಳ ಗುರಿ ನೀಡಿದ್ದ ಬಾಂಗ್ಲಾ

ಇದಕ್ಕೂ ಮೊದಲು ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ಎ ತಂಡ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿತು. ಆ ಮೂಲಕ ಭಾರತ ಎ ತಂಡಕ್ಕೆ 195 ರನ್‌ಗಳ ಸವಾಲಿನ ಗುರಿಯನ್ನು ನಿಗದಿಪಡಿಸಿತು. ಟಾಸ್ ಗೆದ್ದ ಭಾರತ ಎ ತಂಡವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶದ ಪರ, ಆರಂಭಿಕ ಬ್ಯಾಟ್ಸ್‌ಮನ್ ಹಬೀಬುರ್ ರೆಹಮಾನ್ ಒಂದು ತುದಿಯನ್ನು ಗಟ್ಟಿಯಾಗಿ ನಿಂತು 65 ರನ್‌ಗಳೊಂದಿಗೆ ತಮ್ಮ ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಅವರು ಕೇವಲ 32 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು, ತಂಡದ ಮಧ್ಯಮ ಕ್ರಮಾಂಕಕ್ಕೆ ಸ್ಥಿರತೆಯನ್ನು ಒದಗಿಸಿದರು.

ICC U-19 World Cup 2026: ಅಂಡರ್‌-19 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ, ಎ ಗುಂಪಿನಲ್ಲಿ ಭಾರತ!

ಮೆಹರೂಬ್ ಹೊಸೈನ್ ಅವರ ಸ್ಫೋಟಕ ಇನಿಂಗ್ಸ್‌

ಕೆಳ ಕ್ರಮಾಂಕದಲ್ಲಿ ಮೆಹರೂಬ್ ಹೊಸೈನ್ ವಿನಾಶಕಾರಿ ಆಟವಾಡಿದರು. ಅವರು ಕೇವಲ 18 ಎಸೆತಗಳಲ್ಲಿ ಔಟಾಗದೆ 48 ರನ್ ಗಳಿಸಿ, ಬಾಂಗ್ಲಾದೇಶ ಎ ತಂಡದ ಬೃಹತ್ ಮೊತ್ತದತ್ತ ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಓವರ್‌ಗಳಲ್ಲಿ ಮೆಹರೂಬ್ ಸಿಕ್ಸರ್‌ಗಳ ಸುರಿಮಳೆಯೊಂದಿಗೆ ತಮ್ಮ ಇನಿಂಗ್ಸ್‌ ಅನ್ನು ಮುಗಿಸಿದರು.

ಕೊನೆಯ ಎರಡು ಓವರ್‌ಗಳಲ್ಲಿ 50 ರನ್‌ಗಳು

ಬಾಂಗ್ಲಾದೇಶ ಎ ತಂಡ ಕೊನೆಯ ಐದು ಓವರ್‌ಗಳಲ್ಲಿ 75 ರನ್‌ಗಳನ್ನು ಕಲೆ ಹಾಕಿದರು. ಇದು ಭಾರತ ಎ ತಂಡದ ಬೌಲರ್‌ಗಳನ್ನು ತುಂಬಾ ದುಬಾರಿಯನ್ನಾಗಿ ಮಾಡಿತು. ನಮನ್ ಧೀರ್ ಅವರ 19ನೇ ಓವರ್‌ನಲ್ಲಿ 28 ರನ್‌ಗಳನ್ನು ಕೊಟ್ಟರು ಹಾಗೂ ವೈಶಾಖ್ ವಿಜಯ್‌ಕುಮಾರ್ ಕೊನೆಯ ಓವರ್‌ನಲ್ಲಿ 22 ರನ್‌ಗಳನ್ನು ಕೊಟ್ಟರು.