ಭಾರತ ಟೆಸ್ಟ್ ತಂಡದ ಏಳನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ರಾಬಿನ್ ಉತ್ತಪ್ಪ!
ಭಾರತ ಟೆಸ್ಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಆಗ್ರಹಿಸಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ದೀರ್ಘಾವಧಿ ಸ್ವರೂಪದಿಂದ ಹಲವು ವರ್ಷಗಳ ಹಿಂದೆ ಹೊರ ಬಿದ್ದಿದ್ದರು. ಇದೀಗ ಅವರು ಕೇವಲ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯರನ್ನು ಟೆಸ್ಟ್ ತಂಡದಲ್ಲಿ ಆಡಿಸಿ ಎಂದ ಉತ್ತಪ್ಪ. -
ನವದೆಹಲಿ: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಸತತ ಗಾಯಗಳ ಕಾರಣ ಟೆಸ್ಟ್ ತಂಡದಲ್ಲಿ ದೀರ್ಘಾವಧಿ ಆಡಲು ಸಾಧ್ಯವಾಗಿಲ್ಲ. ಅವರು ಬೆನ್ನು ನೋವಿನ ಕಾರಣ ಹಲವು ವರ್ಷಗಳ ಹಿಂದೆ ಭಾರತ ಟೆಸ್ಟ್ (India's Test Team) ತಂಡದಿಂದ ಹೊರ ಬಿದ್ದಿದ್ದರು. ಆದರೆ, ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (Robin Uthappa), ಹಾರ್ದಿಕ್ ಪಾಂಡ್ಯಗೆ ಇನ್ನೂ ದೀರ್ಘಾವಧಿ ಸ್ವರೂಪದಲ್ಲಿ ಆಡಲು ಅವಕಾಶವಿದೆ ಎಂದು ಹೇಳಿದ್ದಾರೆ. ಅಲ್ಲದೆ, ಟೆಸ್ಟ್ ತಂಡದ ಪ್ಲೇಯಿಂಗ್ xiನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂದು ಕನ್ನಡಿಗ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಅರ್ಥಪೂರ್ಣ ಪಾತ್ರವನ್ನು ವಹಿಸಬಹುದೆಂದು ನಂಬಿದ್ದಾರೆ, ಅವರು ಕೆಂಪು-ಚೆಂಡಿನ ಸ್ವರೂಪಕ್ಕೆ ಮರಳಲು ಆರಿಸಿಕೊಂಡರೆ ಆಲ್‌ರೌಂಡರ್ ಭಾರತಕ್ಕೆ 7ನೇ ಕ್ರಮಾಂಕಕ್ಕೆ ಆಯ್ಕೆಯಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪಾಂಡ್ಯ ಅವರ ಪ್ರಸ್ತುತ ಫಿಟ್‌ನೆಸ್ ಮತ್ತು ಕೌಶಲ ಟೆಸ್ಟ್ ಕಮ್‌ಬ್ಯಾಕ್‌ಗೆ ಅವಾಸ್ತವಿಕವಲ್ಲ ಎಂದು ಉತ್ತಪ್ಪ ಭಾವಿಸಿದ್ದಾರೆ. ಭಾರತ ಟೆಸ್ಟ್ ತಂಡದಲ್ಲಿ ಇತ್ತೀಚೆಗೆ ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಕಂಡೀಷನ್ಸ್‌ಗೆ ತಕ್ಕಂತೆ ಬಳಿಸಿಕೊಳ್ಳಲಾಗಿತ್ತು. ಆದರೆ, ಇವರ ಪೈಕಿ ಯಾವ ಆಟಗಾರ ಸ್ಥಿರವಾಗಿ ಒಂದು ಕ್ರಮಾಂಕದಲ್ಲಿ ಆಡುತ್ತಿಲ್ಲ. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ತಂಡಕ್ಕೆ ಸೂಕ್ತ ಎಂದು ಹೇಳಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಪ್ರಕಟ, ಜೋಫ್ರಾ ಆರ್ಚರ್‌ಗೆ ಸ್ಥಾನ!
"ಹಾರ್ದಿಕ್ ಪಾಂಡ್ಯ ಭಾರತ ಟೆಸ್ಟ್ ತಂಡದ ಏಳನೇ ಕ್ರಮಾಂಕಕ್ಕೆ ಬಂದರೆ, ಇದು ಅದ್ಭುತವಾಗಿರಲಿದೆ. ಅವರು ಆಡುವ ಹಾದಿಯನ್ನು ನೋಡಿದರೆ, ಏನೂ ಬೇಕಾದರೂ ಆಗಬಹುದು. ಇದು ಕ್ರಿಕೆಟ್. ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ ಆಡುತ್ತೇನೆಂದು ಹಾರ್ದಿಕ್ ಪಾಂಡ್ಯ ನಿರ್ಧರಿಸಿದರೆ, ಬಿಸಿಸಿಐ ಅವರನ್ನು ಆಡಬೇಡಿ ಎಂದು ಹೇಳಲಿದೆಯಾ? ಒಂದು ಅವರು ವೇಳೆ ಟೆಸ್ಟ್ ಕ್ರಿಕೆಟ್ ಆಡಿ ಭಾರತಕ್ಕೆ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದಕೊಡಲು ಬಯಸಿದರೆ, ಅವರು ಇದಕ್ಕೆ ಇಲ್ಲ ಎಂದು ಹೇಳುವುದಿಲ್ಲ ಎಂದು ಭಾವಿಸುತ್ತೇನೆ," ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
Robin Uthappa said 🗣️
— CricFit (@CricFit) December 30, 2025
“If Hardik Pandya returns to the No. 7 spot in Tests, it would be wonderful. The way he’s playing. Anything can happen; it’s cricket” pic.twitter.com/Denb3HeIx7
"ಟೆಸ್ಟ್ ತಂಡದಲ್ಲಿ ಆಲ್‌ರೌಂಡರ್‌ಗಳು 20 ಓವರ್‌ಗಳನ್ನು ಬೌಲ್ ಮಾಡುತ್ತಿದ್ದಾರಾ? ಇಲ್ಲವೇ ಇಲ್ಲ. ನಿತೀಶ್ ಕಮಾರ್ ರೆಡ್ಡಿ ಅಷ್ಟೊಂದು ಓವರ್‌ಗಳನ್ನು ಬೌಲ್ ಮಾಡುತ್ತಿಲ್ಲ. ಅವರು ಸುಮಾರು 12 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ 12 ರಿಂದ 15 ಓವರ್‌ಗಳನ್ನು ಒಂದು ಇನಿಂಗ್ಸ್‌ಗೆ ಬೌಲ್ ಮಾಡಿದರೆ, ಅವರು ಸದ್ಯ ಇರುವ ಫಿಟ್ನೆಸ್‌ಗೆ ಅನುಗುಣವಾಗಿ ಇಷ್ಟು ಓವರ್‌ಗಳನ್ನು ಬೌಲ್ ಮಾಡಬಹುದು. ಇದರ ಜೊತೆಗೆ ಬ್ಯಾಟಿಂಗ್ ಕೂಡ ನಡೆಸಬಲ್ಲರು. ಇದು ಅವರೇ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ," ಎಂದು ಕನ್ನಡಿಗೆ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಕೊನೆಯ ಬಾರಿ 2018ರಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಆಡಿದ್ದರು. ಬೆನ್ನು ನೋವಿಗೆ ಒಳಗಾದ ಬಳಿಕ ಅವರು ಟೆಸ್ಟ್ ತಂಡದಿಂದ ದೂರ ಉಳಿದಿದ್ದಾರೆ. ಅಂದಿನಿಂದಲೂ ಅವರು ಕೇವಲ ವೈಟ್‌ಬಾಲ್ ಸರಣಿಗಳಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಆ ಮೂಲಕ ಭಾರತ ತಂಡದಲ್ಲಿ ಪ್ರಮುಖ ಕೀ ಆಟಗಾರರಾಗಿ ಆಡುತ್ತಿದ್ದಾರೆ.