ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI 1st ODI: ನಮನ್‌ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

IND vs WI: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಇನ್ನೂ ಕೇವಲ ಎರಡು ದಿನಗಳು ಬಾಕಿ ಇದೆ. ಮೊದಲನೇ ಏಕದಿನ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಸೆಪ್ಟಂಬರ್‌ 27 ರಂದು ನಡೆಯಲಿದೆ. ಈ ಪಂದ್ಯದ ಮೂಲಕ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ.

ವಿಂಡೀಸ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ತಿರುವನಂತಪುರಂ: ಮುಂದಿನ ವರ್ಷ ನಡೆಯುವ 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2027) ಟೂರ್ನಿಯ ತಯಾರಿ ಸರಣಿ ಎಂದೇ ಭಾವಿಸಲಾಗಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (IND vs WI) ಕಣಕ್ಕೆ ಇಳಿಯಲು ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಎದುರು ನೋಡುತ್ತಿದೆ. ಮೊದಲನೇ ಏಕದಿನ ಪಂದ್ಯ ಸೆಪ್ಟಂಬರ್‌ 27 ರಂದು ಇಲ್ಲಿನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ವಿಂಡೀಸ್‌ ತಂಡದ ಭಾರತದ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.

ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ಟಿ20 ತಂಡ, ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಪಾನ್‌ಗೆ ತೆರಳಿದೆ. ಏಕದಿನ ತಂಡದ ಹಲವು ಸ್ಟಾರ್‌ ಆಟಗಾರರು ಟಿ20 ತಂಡದಲ್ಲಿದ್ದಾರೆ. ಈ ಕಾರಣದಿಂದಾಗಿ ವಿಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಹೊಸಬರಿಗೆ ಸ್ಥಾನವನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್‌ ಆಟಗಾರ ನಮನ್‌ ಧೀರ್‌ಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಋತುರಾಜ್‌ ಗಾಯಕ್ವಾಡ್‌ಗೆ ಸ್ಥಾನವನ್ನು ನೀಡಲಾಗುತ್ತಿದೆ.

IND vs WI 2026 ಸರಣಿಯ ಸಂಪೂರ್ಣ ವೇಳಾಪಟ್ಟಿ, ತಂಡಗಳು, ಲೈವ್‌ ಸ್ಟ್ರೀಮಿಂಗ್‌ ವಿವರ!

ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ಕನ್ನಡಿಗ ಕೆಎಲ್‌ ರಾಹುಲ್‌ ಮುಂದುವರಿಯಲಿದ್ದಾರೆ. ಎರಡನೇ ವಿಕೆಟ್‌ ಕೀಪರ್‌ ಆಗಿ ಧ್ರುವ್‌ ಜುರೆಲ್‌ ತಂಡದಲ್ಲಿದ್ದಾರೆ. ನಮನ್‌ ಧೀರ್‌ಗೆ ಮೊದಲನೇ ಪಂದ್ಯದಲ್ಲಿ ಅವಕಾಶ ನೀಡದೇ ಧ್ರುವ್‌ ಜುರೆಲ್‌ ಅವರನ್ನು ವಿಶೇಷ ಬ್ಯಾಟ್ಸ್‌ಮನ್‌ ಆಗಿ ಬಳಸಿಕೊಂಡರೂ ಅಚ್ಚರಿ ಇಲ್ಲ. ಇನ್ನು ಯಶಸ್ವಿ ಜೈಸ್ವಾಲ್‌ ಕೂಡ ತಂಡದಲ್ಲಿದ್ದಾರೆ. ಆದರೆ, ಅವರು ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಕಾರಣ ಅವರು ಬೆಂಚ್‌ ಕಾಯಬಹದು. ಇಲ್ಲವಾದಲ್ಲಿ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು. ಇದೆಲ್ಲವೂ ಟೀಮ್‌ ಮ್ಯಾನೇಜ್‌ಮೆಂಟ್‌ನ ನಿರ್ಧಾರವಾಗಿದೆ.

ಇನ್ನು ಆಲ್‌ರೌಂಡರ್‌ಗಳಾಗಿ ನಿತೀಶ್‌ಕುಮಾರ್‌ ರೆಡ್ಡಿ ಹಾಗೂ ರವೀಂದ್ರ ಜಡೇಜಾ ಕಣಕ್ಕೆ ಇಳಿಯಲಿದ್ದಾರೆ. ನಿತೀಶ್‌ ರೆಡ್ಡಿ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದರು. ಅದೇ ಲಯವನ್ನು ವಿಂಡೀಸ್‌ ವಿರುದ್ಧವೂ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇನ್ನು ರವೀಂದ್ರ ಜಡೇಜಾ, ಏಕದಿನ ತಂಡಕ್ಕೆ ಮರಳಿದ್ದು, ಅವರ ಮೇಲೆಯೂ ಸಾಕಷ್ಟು ನಿರೀಕ್ಷೆ ಇದೆ. ಏಕೈಕ ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ ಆಡಲಿದ್ದು, ಅವರಿಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಸಾಥ್‌ ನೀಡಲಿದ್ದಾರೆ.



ವೇಗದ ಬೌಲಿಂಗ್‌ ವಿಭಾಗವನ್ನು ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ ಮುನ್ನಡೆಸಲಿದ್ದು, ಇವರಿಗೆ ಮತ್ತೊಂದು ತುದಿಯಲ್ಲಿ ಗುರ್ನೂರ್‌ ಬ್ರಾರ್‌ ಸಹಾಯ ಮಾಡಲಿದ್ದಾರೆ. ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರು ಸಾಥ್‌ ನೀಡಲಿದ್ದಾರೆ. ಪಿಚ್‌ನ ಕಂಡೀಷನ್ಸ್‌ ನೋಡಿಕೊಂಡು ಟೀಮ್‌ ಮ್ಯಾನೇಜ್‌ಮೆಂಟ್‌ ಟಾಸ್‌ಗೂ ಮುನ್ನ ಹೆಚ್ಚುವರಿ ವೇಗಿ ಅಥವಾ ಹೆಚ್ಚುವರಿ ಸ್ಪಿನ್ನರ್‌ಗೆ ಮಣೆ ಹಾಕಬಹುದು.

ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಪಾತ್ರವನ್ನು ವಿವರಿಸಿದ ಗೌತಮ್‌ ಗಂಭೀರ್‌!

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

  1. ರೋಹಿತ್‌ ಶರ್ಮಾ
  2. ಶುಭಮನ್‌ ಗಿಲ್‌
  3. ವಿರಾಟ್‌ ಕೊಹ್ಲಿ
  4. ಋತುರಾಜ್‌ ಗಾಯಕ್ವಾಡ್‌
  5. ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌)
  6. ನಮನ್‌ ಧೀರ್‌
  7. ನಿತೀಶ್‌ ಕುಮಾರ್‌ ರೆಡ್ಡಿ
  8. ರವೀಂದ್ರ ಜಡೇಜಾ
  9. ಕುಲ್ದೀಪ್‌ ಯಾದವ್‌
  10. ಗುರ್ನೂರ್‌ ಬ್ರಾರ್‌
  11. ಮೊಹಮ್ಮದ್‌ ಸಿರಾಜ್‌