ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI 2026 ಸರಣಿಯ ಸಂಪೂರ್ಣ ವೇಳಾಪಟ್ಟಿ, ತಂಡಗಳು, ಲೈವ್‌ ಸ್ಟ್ರೀಮಿಂಗ್‌ ವಿವರ!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ವೈಟ್‌ ಬಾಲ್‌ ಸರಣಿಗಳ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಇವೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟಂಬರ್‌ 27ರಂದು ಆರಂಭವಾದರೆ, ಐದು ಪಂದ್ಯಗಳ ಟಿ20ಐ ಸರಣಿ ಅಕ್ಟೋನರ್‌ 17 ರಂದು ಆರಂಭವಾಗಲಿದೆ. ಈ ಎರಡೂ ಸರಣಿಗಳಿಗೆ ಭಾರತ ಆತಿಥ್ಯ ವಹಿಸಲಿದೆ.

ಭಾರತ vs ವೆಸ್ಟ್‌ ಇಂಡೀಸ್‌ ಸರಣಿಯ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ವೈಟ್‌ಬಾಲ್‌ ಸರಣಿಗಳ ವಿವರ. -

Profile
Ramesh Kote Sep 24, 2026 7:28 PM

ನವದೆಹಲಿ: ಭಾರತ ಹಾಗೂ ವೆಸ್ಟ್‌ ಇಂಡೀಸ್‌ (IND vs WI 2026) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಗಳು ಸೆಪ್ಟಂಬರ್‌ 27 ರಿಂದ ಅಕ್ಟೋಬರ್‌ 17ರವರೆಗೆ ನಡೆಯಲಿದೆ. ಈ ಎಂಟು ವೈಟ್‌ಬಾಲ್‌ ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಲಿದೆ. ಭಾರತ ಏಕದಿನ ತಂಡವನ್ನು ಶುಭಮನ್‌ ಗಿಲ್‌ ಮುನ್ನಡೆಸಿದರೆ, ಭಾರತ ಟಿ20 ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ. ಇನ್ನು ಎದುರಾಳಿ ವೆಸ್ಟ್‌ ಇಂಡೀಸ್‌ ತಂಡವನ್ನು ಟಿ20ಐ ಹಾಗೂ ಒಡಿಐ ಸರಣಿಗಳಲ್ಲಿ ಶೇಯ್‌ ಹೋಪ್‌ ಮುನ್ನಡೆಸಲಿದ್ದಾರೆ.

ಟಿ20ಐ ಪಂದ್ಯಗಳು ಲಖನೌ, ರಾಂಚಿ, ಇಂದೋರ್‌, ಹೈದರಾಬಾದ್‌ ಹಾಗೂ ಬೆಂಗಳೂರಿನಲ್ಲಿ ಕ್ರಮವಾಗಿ ಅಕ್ಟೋಬರ್‌ 6, 9, 11, 14, ಹಾಗೂ 17 ರಂದು ನಡೆಯಲಿವೆ. ಇನ್ನು 50 ಓವರ್‌ಗಳ ಮೂರು ಪಂದ್ಯಗಳು ತಿರುವನಂತಪುರಂ, ಗುವಾಹಟಿ ಹಾಗೂ ನವ ಚಂಡೀಗಢದಲ್ಲಿ ಕ್ರಮವಾಗಿ ಸೆಪ್ಟಂಬರ್‌ 27, 30 ಹಾಗೂ ಅಕ್ಟೋಬರ್‌ 3 ರಂದು ನಡೆಯಲಿವೆ.

ಮುಖ್ಯ ಆಯ್ಕೆಗಾರ ಹುದ್ದೆಯಿಂದ ಅಜಿತ್ ಅಗರ್ಕರ್ ನಿರ್ಗಮನ ಖಚಿತಪಡಿಸಿದ ಬಿಸಿಸಿಐ

ನ್ಯೂಜಿಲೆಂಡ್‌ ಪ್ರವಾಸದಲ್ಲಿ ಎಲ್ಲಾ ಸ್ವರೂಪದ ಪಂದ್ಯಗಳನ್ನು ಆಡುವುದಕ್ಕೂ ಮುನ್ನ ಭಾರತ ತಂಡ, ವೆಸ್ಟ್‌ ಇಂಡೀಸ್‌ ತಂಡಕ್ಕೆಡ ತವರಿನಲ್ಲಿ ಎಂಟು ವೈಟ್‌ಬಾಲ್‌ ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ. ವಿಂಡೀಸ್‌ ತಂಡ, ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿರುವ ಕಾರಣ, ಭಾರತ ತಂಡಕ್ಕೆ ತವರು ಅಭಿಮಾನಿಗಳ ಎದುರು ಕಠಿಣ ಸವಾಲು ಎದುರಾಗಲಿದೆ. ಏಕದಿನ ಸರಣಿಯ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು. ಅರ್ಧ ತಾಸಿಗೂ ಮುನ್ನ ಟಾಸ್‌ ನಡೆಯಲಿದೆ. ಇನ್ನು ಟಿ20ಐ ಸರಣಿಯ ಪಂದ್ಯಗಳು ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಇದಕ್ಕೂ ಮುನ್ನ 6:30 ಕ್ಕೆ ಟಾಸ್‌ ನಡೆಯಲಿದೆ.

ಭಾರತ vs ವೆಸ್ಟ್‌ ಇಂಡೀಸ್‌ ಸರಣಿಗಳ ವೇಳಾಪಟ್ಟಿ

ಏಕದಿನ ಸರಣಿ

ಮೊದಲನೇ ಏಕದಿನ ಪಂದ್ಯ: ಸೆಪ್ಟಂಬರ್‌ 27

ಎರಡನೇ ಏಕದಿನ ಪಂದ್ಯ: ಸೆಪ್ಟಂಬರ್‌ 30

ಮೂರನೇ ಏಕದಿನ ಪಂದ್ಯ: ಅಕ್ಟೋಬರ್‌ 3

IND vs AFG ಟಿ20ಐ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಆಡದೇ ಇರಲು ಕಾರಣ ತಿಳಿಸಿದ ಗೌತಮ್‌ ಗಂಭೀರ್‌!

ಟಿ20ಐ ಸರಣಿ

ಮೊದಲನೇ ಪಂದ್ಯ: ಅಕ್ಟೋಬರ್‌ 6

ಎರಡನೇ ಪಂದ್ಯ: ಅಕ್ಟೋಬರ್‌ 9

ಮೂರನೇ ಪಂದ್ಯ: ಅಕ್ಟೋಬರ್‌ 11

ನಾಲ್ಕನೇ ಪಂದ್ಯ: ಅಕ್ಟೋಬರ್‌ 14

ಐದನೇ ಪಂದ್ಯ: ಅಕ್ಟೋಬರ್‌ 17

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಸರಣಿಗಳ ನೇರ ಪ್ರಸಾರ ಯಾವ ಚಾನೆಲ್‌?

ಭಾರತ ಹಾಗೂ ವಿಂಡೀಸ್‌ ನಡುವಣ ಸೀಮಿತ ಓವರ್‌ಗಳ ಸರಣಿಯ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಸರಣಿಗಳ ಲೈವ್‌ ಸ್ಟೀಮಿಂಗ್‌ ಹೇಗೆ?

ಇಂಡೋ-ವಿಂಡೀಸ್‌ ನಡುವಣ ಸರಣಿಗಳ ಪಂದ್ಯಗಳನ್ನು ಜಿಯೊ ಹಾಟ್‌ಸ್ಟಾರ್‌ ಹಾಗೂ ವೆಬ್‌ ಸೈಟ್‌ನಲ್ಲಿ ವೀಕ್ಷಿಸಬಹುದು.

ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಪಾತ್ರವನ್ನು ವಿವರಿಸಿದ ಗೌತಮ್‌ ಗಂಭೀರ್‌!

ತಂಡಗಳು

ಭಾರತ ಏಕದಿನ ತಂಡ: ಶುಭಮನ್‌ ಗಿಲ್‌ (ನಾಯಕ), ವಿರಾಟ್‌ ಕೊಹ್ಲಿ, ಋತುರಾಜ್‌ ಗಾಯಕ್ವಾಡ್‌, ಕೆಎಲ್‌ ರಾಹುಲ್‌ (ಉಪ ನಾಯಕ, ವಿಕೆಟ್‌ ಕೀಪರ್‌), ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಪ್ರಸಿಧ್‌ ಕೃಷ್ಣ, ಗುರ್ನೂರ್‌ ಬ್ರಾರ್‌, ಮೊಹಮ್ಮದ್‌ ಸಿರಾಜ್‌, ಆಕಿಬ್‌ ನಬಿ, ಯಶಸ್ವಿ ಜೈಸ್ವಾಲ್‌, ನಮನ್‌ ಧೀರ್‌

ಭಾರತ ಟಿ20ಐ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್

IND vs AFG ಟಿ20ಐ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಆಡದೇ ಇರಲು ಕಾರಣ ತಿಳಿಸಿದ ಗೌತಮ್‌ ಗಂಭೀರ್‌!

ವೆಸ್ಟ್‌ ಇಂಡೀಸ್‌ ಏಕದಿನ ತಂಡ: ಶೇಯ್‌ ಹೋಪ್ (ನಾಯಕ), ಜುವೆಲ್ ಆಂಡ್ರೂ, ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ರಾಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಆಮಿರ್ ಜಾಂಗೂ, ಆಲ್ಝಾರಿ ಜೋಸೆಫ್, ಶಮರ್ ಜೋಸೆಫ್, ವಿಟೆಲ್ ಲಾವ್ಸ್, ಗುಡಾಕೇಶ್ ಮೋತಿ, ಕೀಮೋ ಪಾಲ್, ಶೆರ್ಫೇನ್ ಋದರ್‌ಫೋರ್ಡ್, ಜೇಡನ್ ಸೀಲ್ಸ್

ವೆಸ್ಟ್‌ ಇಂಡೀಸ್‌ ಟಿ20 ತಂಡ: ಶೇಯ್‌ ಹೋಪ್ (ನಾಯಕ), ಜುವೆಲ್ ಆಂಡ್ರೂ, ರಾಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮಾಯರ್, ಅಕೀಲ್ ಹುಸೇನ್, ಶಮರ್ ಜೋಸೆಫ್, ಗುಡಕೇಶ್ ಮೋತಿ, ಕೀಮೋ ಪಾಲ್, ಕಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ಋದರ್‌ಫೋರ್ಡ್, ಕ್ವಿಂಟನ್ ಸ್ಯಾಂಪ್ಸನ್, ರೊಮಾರಿಯೊ ಶೆಫರ್ಡ್, ಶಮರ್ ಸ್ಪ್ರಿಂಗರ್