ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಎಲ್ಲಾ 10 ಫ್ರಾಂಚೈಸಿಗಳನ್ನು ಹಿಂದಿಕ್ಕಿ ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡ ಆರ್‌ಸಿಬಿ!

IPL 2026: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಟ್ಟು ವ್ಯವಹಾರ ಮೌಲ್ಯ ಶೇ.11.4 ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿಗೆ ತಲುಪಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅತ್ಯಂತ ಮೌಲ್ಯಯುತ ಐಪಿಎಲ್ ತಂಡವಾಗಿದ್ದು, 2,982 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ.

ಆರ್‌ಸಿಬಿ ಬ್ರ್ಯಾಂಡ್‌ ಮೌಲ್ಯದಲ್ಲಿ ಗಮನಾರ್ಹ ಏರಿಕೆ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ (IPL 2026) ಸತತ ಎರಡು ಬಾರಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, (RCB) ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ತಂಡದ ಬ್ರ್ಯಾಂಡ್ ಮೌಲ್ಯವ ಇದೇ ಮೊದಲ ಬಾರಿ 300 ಮಿಲಿಯನ್ ಡಾಲರ್ (ಸುಮಾರು 2,979 ಕೋಟಿ ರೂ.) ಗಡಿ ದಾಟಿದೆ. ಇದರ ಜೊತೆಗೆ ಐಪಿಎಲ್‌ನ ಒಟ್ಟು ವ್ಯವಹಾರದ ಮೌಲ್ಯವೂ ಇದೇ ಮೊದಲ ಬಾರಿ 20 ಬಿಲಿಯನ್ ಡಾಲರ್ (ಸುಮಾರು 1.96 ಲಕ್ಷ ಕೋಟಿ ರೂ.) ದಾಟಿದೆ. ಇದರಿಂದ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಈಗ ಕೇವಲ ಎರಡು ತಿಂಗಳ ಟೂರ್ನಿಯಾಗಿರದೆ, ವರ್ಷಪೂರ್ತಿ ಆದಾಯ ತರುವ ಜಾಗತಿಕ ವ್ಯವಹಾರ ವ್ಯವಸ್ಥೆಯಾಗಿ ಬೆಳೆದಿದೆ.

ಹೂಲೀಹಾನ್ ಲೋಕಿ ಅವರ 2026ರ ಐಪಿಎಲ್ ಬ್ರ್ಯಾಂಡ್ ಮೌಲ್ಯ ವರದಿಯ ಪ್ರಕಾರ, ಐಪಿಎಲ್‌ನ ಒಟ್ಟು ವ್ಯವಹಾರ ಮೌಲ್ಯ ಕಳೆದ ವರ್ಷಕ್ಕೆ ಹೋಲಿಸಿದರೆ 11.4% ಏರಿಕೆಯಾಗಿ 20.6 ಬಿಲಿಯನ್ ಡಾಲರ್ (ಸುಮಾರು 1.96 ಲಕ್ಷ ಕೋಟಿ ರೂ.) ತಲುಪಿದೆ. ಅದೇ ರೀತಿ, ಐಪಿಎಲ್ ಬ್ರ್ಯಾಂಡ್‌ನ ಸ್ವಂತ ಮೌಲ್ಯ 10.3% ಹೆಚ್ಚಾಗಿ 4.3 ಬಿಲಿಯನ್ ಡಾಲರ್ (ಸುಮಾರು 41,000 ಕೋಟಿ ರೂ.) ಆಗಿದೆ.

ಭಾರತ ತಂಡವನ್ನು ತೊರೆದ ಬೆನ್ನಲ್ಲೆ ಕೆಕೆಆರ್‌ ತಂಡದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್‌ ಟೆನ್‌ ಡಶ್ಕಾಟೆ!

2,982 ಕೋಟಿ ರೂ. ಮೌಲ್ಯದೊಂದಿಗೆ ಆರ್‌ಸಿಬಿಗೆ ಅಗ್ರ ಸ್ಥಾನ

ಸತತವಾಗಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾಗಿ ಆರ್‌ಸಿಬಿ ಮುಂದುವರಿದಿದೆ. ತಂಡದ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಕ್ಕಿಂತ 16% ಹೆಚ್ಚಾಗಿ ಸುಮಾರು 2,982 ಕೋಟಿ ರೂ. ತಲುಪಿದೆ. 300 ಮಿಲಿಯನ್ ಡಾಲರ್ ಮೌಲ್ಯದ ಗಡಿ ದಾಟಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ಪಾತ್ರವಾಗಿದೆ. ಇದೇ ವರ್ಷ ಆರ್‌ಸಿಬಿ ತಂಡದ ಮಾಲೀಕತ್ವವನ್ನು ದಾಖಲೆಯ 1.78 ಬಿಲಿಯನ್ ಡಾಲರ್ (ಸುಮಾರು 17,000 ಕೋಟಿ ರೂ.) ಮೊತ್ತಕ್ಕೆ ಖರೀದಿಸಲಾಗಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತ ಇದಾಗಿದೆ. ಇದಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವವನ್ನು ಸುಮಾರು 15,750 ಕೋಟಿ ರೂ. ಭಾರೀ ಮೊತ್ತಕ್ಕೆ ಖರೀದಿಸಲಾಗಿತ್ತು.

2026ರಲ್ಲಿ ಆರ್‌ಸಿಬಿ ತನ್ನ ಎರಡನೇ ಐಪಿಎಲ್ ಟ್ರೋಫಿ ಗೆದ್ದಿರುವುದು ಅಭಿಮಾನಿಗಳಿಗೆ ಹೆಚ್ಚಿನ ಸಂತಸವನ್ನು ತಂದಿದೆ. ಆದರೆ ತಂಡದ ನಿಜವಾದ ಶಕ್ತಿ ಅದರ ಬಲಿಷ್ಠ ಅಭಿಮಾನಿ ಬಳಗ, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅತಿ ಫ್ಯಾನ್‌ ಫಾಲೋವರ್ಸ್‌ ಎಂದರೆ ತಪ್ಪಾಗಲಾರದು. ಕಳೆದ ಒಂದು ವರ್ಷದಲ್ಲೇ ಆರ್‌ಸಿಬಿ ತನ್ನ ಬ್ರ್ಯಾಂಡ್ ಮೌಲ್ಯಕ್ಕೆ ಸುಮಾರು 410 ಕೋಟಿ ರೂ. ಸೇರ್ಪಡೆಯಾಗಿದೆ.

ಐಪಿಎಲ್‌ನ ಇತರ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಸುಮಾರು 2,520 ಕೋಟಿ ರೂ. ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ನಂತರ ಕೋಲ್ಕತ್ತಾ ನೈಟ್ ರೈಡರ್ಸ್ (2,339 ಕೋಟಿ ರೂ.) ಮೂರನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (2,330 ಕೋಟಿ ರೂ.) ನಾಲ್ಕನೇ ಸ್ಥಾನದಲ್ಲಿದೆ.

ಬಾಬರ್‌ ಆಝಮ್‌ ನಾಯಕನಾಗಿ ಮರಳಿದರೂ ಪಾಕಿಸ್ತಾನ ತಂಡದ ಹಣೆ ಬರಹ ಬದಲಾಗಲಿಲ್ಲ!

ವರದಿಯ ಪ್ರಕಾರ, ಎಂಎಸ್ ಧೋನಿ ಆಡದಿರುವುದು ಸಿಎಸ್‌ಕೆ ತಂಡದ ಬ್ರ್ಯಾಂಡ್ ಮೌಲ್ಯದ ಬೆಳವಣಿಗೆಯ ವೇಗದ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಇದು ತಂಡಗಳು ಭವಿಷ್ಯದ ಯೋಜನೆಗಳಿಗೆ ಎಷ್ಟು ಮಹತ್ವ ನೀಡಬೇಕು ಎಂಬುದನ್ನು ತೋರಿಸುತ್ತದೆ.

ಎಲ್ಲಾ 10 ತಂಡಗಳ ಬ್ರ್ಯಾಂಡ್‌ ಮೌಲ್ಯ

1.ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): 312 ಮಿಲಿಯನ್ ಡಾಲರ್

2.ಮುಂಬೈ ಇಂಡಿಯನ್ಸ್ (MI): 264 ಮಿಲಿಯನ್ ಡಾಲರ್

3.ಕೋಲ್ಕತ್ತಾ ನೈಟ್ ರೈಡರ್ಸ್ (KKR): 245 ಮಿಲಿಯನ್ ಡಾಲರ್

4.ಚೆನ್ನೈ ಸೂಪರ್ ಕಿಂಗ್ಸ್ (CSK): 244 ಮಿಲಿಯನ್ ಡಾಲರ್

5.ಸನ್‌ರೈಸರ್ಸ್ ಹೈದರಾಬಾದ್ (SRH): 168 ಮಿಲಿಯನ್ ಡಾಲರ್

6.ರಾಜಸ್ಥಾನ್ ರಾಯಲ್ಸ್ (RR): 161 ಮಿಲಿಯನ್ ಡಾಲರ್

7.ಪಂಜಾಬ್ ಕಿಂಗ್ಸ್ (PBKS): 158 ಮಿಲಿಯನ್ ಡಾಲರ್

8.ಗುಜರಾತ್ ಟೈಟನ್ಸ್ (GT): 157 ಮಿಲಿಯನ್ ಡಾಲರ್

9.ಡೆಲ್ಲಿ ಕ್ಯಾಪಿಟಲ್ಸ್ (DC): 156 ಮಿಲಿಯನ್ ಡಾಲರ್

10.ಲಖನೌ ಸೂಪರ್ ಜಯಂಟ್ಸ್‌ (LSG): 122 ಮಿಲಿಯನ್ ಡಾಲರ್

IND vs ZIM: ವೈಭವ್‌ ಸೂರ್ಯವಂಶಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

ಟಿವಿಗಿಂತ ಮೊಬೈಲ್ ಮತ್ತು ಸ್ಮಾರ್ಟ್ ಟಿವಿಯಲ್ಲಿ ಹೆಚ್ಚಾದ ಐಪಿಎಲ್ ಕ್ರೇಜ್

ಪ್ರೇಕ್ಷಕರು ಪಂದ್ಯ ವೀಕ್ಷಿಸುವ ವಿಧಾನದಲ್ಲೂ ದೊಡ್ಡ ಬದಲಾವಣೆ ಕಂಡುಬಂದಿದೆ. ಜಿಯೋಸ್ಟಾರ್ ಪ್ರಕಾರ, 2026ರ ಐಪಿಎಲ್ ಟೂರ್ನಿಯನ್ನು ಒಟ್ಟು 106 ಕೋಟಿ ಸ್ಕ್ರೀನ್‌ಗಳಲ್ಲಿ ವೀಕ್ಷಿಸಲಾಗಿದೆ. ಸ್ಮಾರ್ಟ್ ಟಿವಿಯಲ್ಲಿ ಪಂದ್ಯ ವೀಕ್ಷಿಸುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಅದು 26% ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಸಾಂಪ್ರದಾಯಿಕ ಸಾಮಾನ್ಯ ಟಿವಿಗಳಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆ 18.8% ಇಳಿಕೆಯಾಗಿದೆ.

2026ರ ಐಪಿಎಲ್ ಟೂರ್ನಿಯ ಆರಂಭಿಕ ವಾರಾಂತ್ಯದಲ್ಲೇ 51.5 ಕೋಟಿ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಇಡೀ ಋತುವಿನಲ್ಲಿ ಐಪಿಎಲ್‌ನ ಒಟ್ಟು ಆದಾಯವು 1.8 ಬಿಲಿಯನ್ ಡಾಲರ್ (ಸುಮಾರು 17,180 ಕೋಟಿ ರೂ.) ಗಡಿ ದಾಟಿದೆ. ಇದರಿಂದ ಐಪಿಎಲ್ ಕೇವಲ ಕ್ರಿಕೆಟ್ ಟೂರ್ನಿಯಾಗಿರದೆ, ಡಿಜಿಟಲ್ ವೀಕ್ಷಣೆ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಜಾಗತಿಕ ವ್ಯವಹಾರವಾಗಿ ಬೆಳೆಯುತ್ತಿರುವುದು ಸ್ಪಷ್ಟವಾಗಿದೆ.