ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಲ್ಪ ವಿರಾಮದ ಬಳಿಕ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆರ್‌ಸಿಬಿ ಏಪ್ರಿಲ್ 24 ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತವರು ಅಂಗಣದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (Gujarat Titans) ಎದುರು ಕಾದಾಟ ನಡೆಸಲಿದೆ. ಈ ಪಂದ್ಯದ ಸಲುವಾಗಿ ಕಳೆದ ಎರಡು ದಿನಗಳಿಂದ ಆರ್‌ಸಿಬಿ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ.
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತಿದ್ದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಬಾದ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ಎದುರು ಗೆಲುವು ಪಡೆದಿದೆ. ಒಟ್ಟು 8 ಅಂಕಗಳ ಮೂಲಕ ಆರ್‌ಸಿಬಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
IPL 2026: ಸಹೋದರ ಪಾಂಡ್ಯ ಜತೆಗೆ ಬಿರುಕು; ವದಂತಿಗಳ ಬಗ್ಗೆ ಕೃನಾಲ್ ಸ್ಪಷ್ಟನೆ!
ಟೂರ್ನಿಯ ಮೊದಲನೇ ಅವಧಿಯನ್ನು ಮುಗಿಸಲು ಆರ್‌ಸಿಬಿಗೆ ಇನ್ನು ಕೇವಲ ಒಂದು ಬಾಕಿ ಇದೆ. ಗುಜರಾತ್ ಟೈಟನ್ಸ್ ಎದುರು ಗೆದ್ದರೆ ಆರ್‌ಸಿಬಿ ಮೊದಲ ಅವಧಿಯಲ್ಲಿ ಒಟ್ಟು 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗುತ್ತದೆ. ಇನ್ನು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಆಡರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಜಿಟಿ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು.
ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಬದಲಾವಣೆ?
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಆಡುವ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಬಹುದು. ಆದರೆ, ಕಳೆದ ಪಂದ್ಯದಲ್ಲಿ ಎಸಗಿದ್ದ ತಪ್ಪುಗಳನು ತಿದ್ದಿಕೊಂಡು ಆರ್‌ಸಿಬಿ ಕಣಕ್ಕೆ ಇಳಿಯಲಿದೆ.
IPL 2026: ಅಭ್ಯಾಸದ ವೇಳೆ ಸಿಗರೇಟ್ ಸೇದಿದ ಕಗಿಸೊ ರಬಾಡ; ವಿಡಿಯೊ ವೈರಲ್
ಗುಜರಾತ್ ಟೈಟನ್ಸ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
1.ವಿರಾಟ್ ಕೊಹ್ಲಿ
2.ಫಿಲಿಪ್ ಸಾಲ್ಟ್
3.ದೇವದತ್ ಪಡಿಕ್ಕಲ್
4.ರಜತ್ ಪಾಟಿದಾರ್ (ನಾಯಕ)
5.ಜಿತೇಶ್ ಶರ್ಮಾ (ವಿಕೆಟ್ ಕೀಪರ್)
6.ಟಿಮ್ ಡೇವಿಡ್,=
7.ರೊಮಾರಿಯೊ ಶೆಫರ್ಡ್
8.ಕೃನಾಲ್ ಪಾಂಡ್ಯ
9.ಭುವನೇಶ್ವರ್ ಕುಮಾರ್
10.ಸುಯಾಶ್ ಶರ್ಮಾ
11.ಜಾಶ್ ಹೇಝಲ್‌ವುಡ್
ಇಂಪ್ಯಾಕ್ಟ್ ಪ್ಲೇಯರ್: ರಸಿಕ್ ದಾರ್ ಸಲಾಮ್