IPL 2026: ಸಹೋದರ ಪಾಂಡ್ಯ ಜತೆಗೆ ಬಿರುಕು; ವದಂತಿಗಳ ಬಗ್ಗೆ ಕೃನಾಲ್ ಸ್ಪಷ್ಟನೆ!
ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನ ಬಳಿಕ ಹಾರ್ದಿಕ್ ಹಾಗೂ ಕೃನಾಲ್ ಸಂಬಂಧ ಹಳಸಿದೆ ಎನ್ನಲಾಗಿದೆ. ನತಾಶ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಅಂತರ ಉಂಟುಮಾಡಿರಬಹುದು ಎಂದು ಹೇಳಲಾಗುತ್ತಿದೆ.
Krunal Pandya -
ಬೆಂಗಳೂರು, ಎ.22: ಕೃನಾಲ್ ಪಾಂಡ್ಯ ಮತ್ತು ಅವರ ಸಹೋದರ ಹಾರ್ದಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಸಹೋದರರಿಬ್ಬರು ಮುಖಾಮುಖಿಯಾಗಿದ್ದರು. ಆದರೆ ಈ ಹಿಂದೆ ಇದ್ದಂತಹ ಆತ್ಮೀಯತೆ ಕಂಡುಬಂದಿರಲ್ಲ. ಈ ಬಗ್ಗೆ ಕೃನಾಲ್ ಮೌನ ಮುರಿದಿದ್ದಾರೆ.
ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಡ್ಯಾನಿಶ್ ಸೇಠ್ ಜತೆ ಕಾಣಿಸಿಕೊಂಡ ಕೃನಾಲ್‌ಗೆ ನಿಮ್ಮ ಮತ್ತು ಮುಂಬೈ ಇಂಡಿಯನ್ಸ್ ನಾಯಕನ ನಡುವೆ ಎಲ್ಲವೂ ಸರಿಯಾಗಿದೆಯೇ ಎಂದು ತಮಾಷೆಯಾಗಿ ಕೇಳಲಾಯಿತು. ಆಗ ಅವರು ನಗುತ್ತಲೇ ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದರು.
'ಎಲ್ಲ ಸರಿಯಾಗಿದೆಯೇ ಅಥವಾ ಏನಾದರೂ ಜಗಳವಾಡುತ್ತೀರಾ?' ಎಂದು ಕೇಳಿದಲೂ ಕೃನಾಲ್ ನಗುತ್ತಲೇ ಇದ್ದರು. 'ಆಲ್ ಓಕೆ?' ಎಂದು ಮತ್ತೆ ಕೇಳಿದಾಗ, ಕೃನಾಲ್ 'ಆಲ್ ಓಕೆ' ಎಂದು ಉತ್ತರಿಸಿದರು.
𝗔𝘂𝗿𝗮 + 𝗩𝗶𝗯𝗲𝘀: 𝗞𝗿𝘂𝗻𝗮𝗹 𝗣𝗮𝗻𝗱𝘆𝗮 🤝 𝗠𝗿. 𝗡𝗮𝗴𝘀 😂🥶✌️
— Royal Challengers Bengaluru (@RCBTweets) April 22, 2026
Krunal’s hairstyles, business ventures, on field tactics & antics, and some personal life secrets - Mr. Nags bowls bouncers to Krunal Pandya on this latest episode of @bigbasket_com presents RCB Insider.… pic.twitter.com/iI4U3KofMI
ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನ ಬಳಿಕ ಹಾರ್ದಿಕ್ ಹಾಗೂ ಕೃನಾಲ್ ಸಂಬಂಧ ಹಳಸಿದೆ ಎನ್ನಲಾಗಿದೆ. ನತಾಶ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಅಂತರ ಉಂಟುಮಾಡಿರಬಹುದು ಎಂದು ಹೇಳಲಾಗುತ್ತಿದೆ.
IPL 2026: ಅಭ್ಯಾಸದ ವೇಳೆ ಸಿಗರೇಟ್ ಸೇದಿದ ಕಗಿಸೊ ರಬಾಡ; ವಿಡಿಯೊ ವೈರಲ್
ಫ್ಯಾಷನ್ ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗಿನ ಹಾರ್ದಿಕ್‌ನ ವಿಶೇಷ ಬಾಂಧವ್ಯ ಸಹೋದರ ವಿರುದ್ಧದ ಮುನಿಸಿಗೆ ಕಾರಣವಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. 25 ವರ್ಷದ ಮಹೀಕಾ ಟಿ 20 ವಿಶ್ವಕಪ್‌ನಾದ್ಯಂತ 32 ವರ್ಷದ ಹಾರ್ದಿಕ್ ಜೊತೆ ಪ್ರಯಾಣಿಸುತ್ತಿದ್ದರು ಮತ್ತು ಕ್ರೀಡಾಂಗಣದಲ್ಲಿ ಅವರಿಗೆ ಉತ್ಸಾಹದಿಂದ ಹುರಿದುಂಬಿಸುತ್ತಿದ್ದರು. ಹಾರ್ದಿಕ್ ತನ್ನ ಎಲ್ಲಾ ಪ್ರವಾಸಗಳಲ್ಲಿ ಮಹೀಕಾ ಅವರೊಂದಿಗಿನ ಪೋಸ್ಟ್ ಹಂಚಿಕೊಂಡಿದ್ದರು. ಐಪಿಎಲ್‌ನಲ್ಲಿಯೂ ಮಹಿಕಾ ಪಾಂಡ್ಯ ಜತೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಂಡ್ಯ ಗೆಳತಿಗಾಗಿ 12 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫೆರಾರಿ 12 ಸಿಲಿಂಡ್ರಿಯ(Ferrari 12Cilindri) ಕಾರನ್ನು ಉಡುಗೊರೆಯಾಗಿ ನೀಡಿದ್ದರು.