ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವಕಪ್‌ ವಿಜೇತೆ ಶ್ರೀ ಚರಣಿಗೆ 2.5 ಕೋಟಿ ರು., ಜೊತೆಗೆ ಸರ್ಕಾರಿ ಹುದ್ದೆ ಘೋಷಿಸಿದ ಚಂದ್ರಬಾಬು ನಾಯ್ಡು!

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರ್ತಿ ಶ್ರೀ ಚರಣಿಗೆ ಆಂಧ್ರ ಪ್ರದೇಶ ಸರ್ಕಾರದಿಂದ ಬಂಪರ್‌ ಕೊಡುಗೆ ನೀಡಲಾಗಿದೆ. 2.5 ಕೋಟಿ ರು ಹಾಗೂ ಸರ್ಕಾರಿ ಹುದ್ದೆಯನ್ನು ನೀಡಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ವಿಶ್ವಕಪ್‌ ವಿಜೇತೆ ಶ್ರೀಚರಣಿಗೆ ದೊಡ್ಡ ಕೊಡುಗೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು.

ನವದೆಹಲಿ: ಕಳೆದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ (Women's World Cup 2025) ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿಗೆ ನೆರವು ನೀಡಿದ್ದ ಶ್ರೀ ಚರಣಿಗೆ (Sri Charani) ಆಂಧ್ರ ಪ್ರದೇಶ ಸರ್ಕಾರ ಭರ್ಜರಿ ಉಡುಗೊರೆಯನ್ನು ನೀಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandra babu Naidu) ಅವರು ಶ್ರೀ ಚರಣಿಗೆ 2.5 ಕೋಟಿ ರು ಹಾಗೂ ಗ್ರೂಪ್‌-I ಸರ್ಕಾರಿ ಹುದ್ದೆಯನ್ನು ನೀಡಿದ್ದಾರೆ. ಇದರ ಜೊತೆಗೆ ಅವರಿಗೆ ತವರೂರು ಕಡಪದಲ್ಲಿ 1000 ಚದರ ಅಡಿಯಲ್ಲಿ ನಿವೇಶನವನ್ನು ನೀಡಲಾಗಿದೆ. ಈ ಬಗ್ಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೇ ಘೋಷಿಸಿದ್ದಾರೆ.

ಶ್ರೀ ಚರಣಿ ಅವರು ದಿಲ್ಲಿಯಿಂದ ತವರಿಗೆ ಮರಳಿದ ಬಳಿಕ ಮೀಟಿಂಗ್‌ ನಡೆಸಿದ್ದ ಚಂದ್ರಬಾಬು ನಾಯ್ಡು ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಚಂದ್ರಬಾಬು ನಾಯ್ಡು ಅವರ ಪ್ರದರ್ಶನವನ್ನು ಅಭಿನಂದಿಸಿದ್ದಾರೆ. ಭಾರತದ ಪರ ವಿಶ್ವಕಪ್‌ ಗೆಲ್ಲುವ ಮೂಲಕ ಆಂಧ್ರ ಪ್ರದೇಶಕ್ಕೆ ಗೌರವ ತಂದಿದ್ದಾರೆಂದು ಅವರು ಶ್ಲಾಘಿಸಿದ್ದಾರೆ. ಸಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಚರಣಿ ಭಾರತ ಮಹಿಳಾ ತಂಡ ಮೊಟ್ಟ ಮೊದಲ ಬಾರಿ 50 ಓವರ್‌ಗಳ ವಿಶ್ವಕಪ್‌ ಗೆದ್ದಿದ್ದೇಗೆಂದು ವಿವರಿಸಿದ್ದಾರೆ.

Women's World Cup: ವಿಶ್ವ ಗೆದ್ದ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ ಮೋಟಾರ್ಸ್

ಈ ಕ್ಷಣದವರೆಗಿನ ಶ್ರೀ ಚರಣಿಯ ಪಯಣ ಅದ್ಭುತವಾಗಿದೆ. 21ನೇ ವಯಸ್ಸಿನ ಎಡಗೈ ಸ್ಪಿನ್ನರ್ ಕಳೆದ ಏಪ್ರಿಲ್‌ನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಪಂದ್ಯಾವಳಿಯಾದ್ಯಂತ ಭಾರತದ ಅತ್ಯಂತ ವಿಶ್ವಾಸಾರ್ಹ ಬೌಲರ್‌ಗಳಲ್ಲಿ ಒಬ್ಬರಾದರು. ಅವರು ಹಲವಾರು ಪಂದ್ಯಗಳಲ್ಲಿ ಪ್ರಮುಖ ಸ್ಪೆಲ್‌ಗಳನ್ನು ನೀಡುವ ಮೂಲಕ 14 ವಿಕೆಟ್‌ಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ, ಅನ್ನೆಕೆ ಬಾಷ್ ಅವರನ್ನು ಶೂನ್ಯಕ್ಕೆ ಸಿಲುಕಿಸುವ ಮೂಲಕ ಅವರು ಭಾರತಕ್ಕೆ ನಿರ್ಣಾಯಕ ಪ್ರಗತಿಯನ್ನು ನೀಡಿದರು, ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಿದರು.

ಅವರು ರಾಜ್ಯಕ್ಕೆ ಮರಳಿದಾಗ ಆತ್ಮೀಯ ಸ್ವಾಗತ ದೊರೆಯಿತು. ಗನ್ನವರಂ ವಿಮಾನ ನಿಲ್ದಾಣದಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಜ್ಯ ಸಚಿವರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಲು ಜಮಾಯಿಸಿದರು.

Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ಕಡಪದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದ ಕುಟುಂಬದಲ್ಲಿ ಚರಣಿ ಬೆಳೆದಿದ್ದಾರೆ. ಆದರೆ ಅವರ ಪ್ರತಿಭೆ ಮತ್ತು ದೃಢಸಂಕಲ್ಪ ಅವರನ್ನು ಮುಂದೆ ಸಾಗುವಂತೆ ಮಾಡಿತು. ಅವರು ಸ್ಥಳೀಯ ಮತ್ತು ರಾಜ್ಯ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂತಿಮವಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದರು. ಅವರ ಮೊದಲ ವಿಶ್ವಕಪ್‌ನಲ್ಲಿ ಅವರ ತ್ವರಿತ ಏರಿಕೆ ಮತ್ತು ಪ್ರಭಾವವು ಈಗ ಆಂಧ್ರಪ್ರದೇಶದಾದ್ಯಂತದ ಯುವ ಕ್ರಿಕೆಟಿಗರಿಗೆ ಅವರನ್ನು ಮಾದರಿಯನ್ನಾಗಿ ಮಾಡಿದೆ.

ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಮಹಿಳಾ ತಂಡ, ಶಫಾಲಿ ವರ್ಮಾ ಹಾಗೂ ದೀಪ್ತಿ ಶರ್ಮಾ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಲಾರಾ ವಾಲ್ವಾರ್ಡ್ಟ್‌ ಅವರ ಶತಕದ ಹೊರತಾಗಿಯೂ 246 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ 52 ರನ್‌ಗಳಿಂದ ಗೆದ್ದ ಭಾರತ ಮಹಿಳಾ ತಂಡ, ಚೊಚ್ಚಲ ಏಕದಿನ ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.