ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VHT 2025-26: ನ್ಯೂಜಿಲೆಂಡ್‌ ಏಕದಿನ ಸರಣಿಗೂ ಮುನ್ನ ಭರ್ಜರಿ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌!

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದ್ದಾರೆ.

ಉತ್ತರಾಖಂಡ ವಿರುದ್ಧ ಶತಕ ಬಾರಿಸಿದ ಋತುರಾತ್‌ ಗಾಯಕ್ವಾಡ್‌!

ಉತ್ತರಾಖಂಡ ವಿರುದ್ಧ ಶತಕವನ್ನು ಬಾರಿಸಿದ ಋತುರಾಜ್‌ ಗಾಯಕ್ವಾಡ್‌. -

Profile
Ramesh Kote Dec 31, 2025 5:18 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಹಾರಾಷ್ಟ್ರ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಅದ್ಭುತ ಪ್ರದರ್ಶನವನ್ನು ತೋರಿದರು. ಅವರು ಶತಕವನ್ನು ಬಾರಿಸುವ ಮೂಲಕ ಉತ್ತರಾಖಂಡ ಎದುರು ಮಹಾರಾಷ್ಟ್ರ ತಂಡವನ್ನು ಗೆಲ್ಲಿಸಿದರು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಲ್ಲಿ (India's ODI Squad) ತಮ್ಮ ಸ್ಥಾನವನ್ನು ಬಹುತೇಕ ಗಟ್ಟಿ ಮಾಡಿಕೊಂಡಿದ್ದಾರೆ.

ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ, ಪವರ್‌ಪ್ಲೇ ಒಳಗೆ ಕೇವಲ 50 ರನ್‌ಗಳಿಗೆ ಅರ್ಶಿನ್ ಕುಲಕರ್ಣಿ, ಎಸ್.ಎ ವೀರ್ ಮತ್ತು ಅಂಕಿತ್ ಬಾವ್ನೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಬಂದ ಋತುರಾಜ್‌ ಗಾಯಕ್ವಾಡ್ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿದರು. ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟ್‌ ಮಾಡಿದ ಅವರು ತಂಡವನ್ನು ತೊಂದರೆಯಿಂದ ಪಾರು ಮಾಡಿದ್ದಲ್ಲದೆ, ಬಲವಾದ ಸ್ಕೋರ್‌ಗೆ ಅಡಿಪಾಯ ಹಾಕಿದರು.

VHT 2025-26: ಗೋವಾ ಎದುರು ಕೇವಲ 75 ಎಸೆತಗಳಲ್ಲಿ 157 ರನ್‌ ಸಿಡಿಸಿದ ಸರ್ಫರಾಝ್‌ ಖಾನ್‌!

ತಮ್ಮ ನಾಯಕತ್ವದ ಇನಿಂಗ್ಸ್‌ನಲ್ಲಿ ಋತುರಾಜ್‌ ಗಾಯಕ್ವಾಡ್‌ 113 ಎಸೆತಗಳನ್ನು ಎದುರಿಸಿ 124 ರನ್‌ಗಳ ಆಕ್ರಮಣಕಾರಿ ಆಟವನ್ನು ಆಡಿದರು, ಇದರಲ್ಲಿ 12 ಅದ್ಭುತ ಬೌಂಡರಿಗಳು ಮತ್ತು 3 ಅತ್ಯುತ್ತಮ ಸಿಕ್ಸರ್‌ಗಳು ಸೇರಿವೆ. ಈ ಇನಿಂಗ್ಸ್‌ನಲ್ಲಿ ಅವರು ರಾಹುಲ್ ತ್ರಿಪಾಠಿ ಅವರೊಂದಿಗೆ 50 ರನ್‌ಗಳು ಮತ್ತು ಸತ್ಯಜಿತ್ ಬಚ್ಚವ್ ಅವರೊಂದಿಗೆ 109 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ, ರಾಮಕೃಷ್ಣ ಘೋಷ್ ಅವರೊಂದಿಗೆ ಮಹಾರಾಷ್ಟ್ರದ ಸ್ಕೋರ್ 50 ಓವರ್‌ಗಳಲ್ಲಿ 331/7 ತಲುಪುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ಸಂಯೋಜಿತ ಬ್ಯಾಟಿಂಗ್ ಎದುರು ಉತ್ತರಾಖಂಡದ ಬೌಲರ್‌ಗಳು ಅಸಹಾಯಕರಾಗಿ ಕಾಣಿಸಿಕೊಂಡರು.



ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಏಕದಿನ ಸರಣಿಗೆ ತಂಡವನ್ನು ಶೀಘ್ರದಲ್ಲೇ ಆಯ್ಕೆ ಮಾಡುವ ನಿರೀಕ್ಷೆಯಿರುವುದರಿಂದ, ಋತುರಾಜ್ ಗಾಯಕ್ವಾಡ್ ಅವರ ಶತಕವು ಆಯ್ಕೆದಾರರಿಗೆ ಮಹತ್ವದ ಸಂದೇಶವನ್ನು ರವಾನಿಸಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದ ಗಾಯಕ್ವಾಡ್‌ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾಗಾಗಿ ಅವರನ್ನು ಭಾರತ ಏಕದಿನ ತಂಡದಲ್ಲಿ ಆಯ್ಕೆದಾರರು ಉಳಿಸಿಕೊಳ್ಳಲಿದ್ದಾರೆ.

ನಾಕೌಟ್‌ ರೇಸ್‌ನಲ್ಲಿ ಜೀವಂತವಾಗಿ ಉಳಿದಿರುವ ಮಹಾರಾಷ್ಟ್ರ

ಮಹಾರಾಷ್ಟ್ರ ತಂಡ ನೀಡಿದ್ದ 332 ರನ್‌ಗಳ ಗುರಿಯನ್ನಿ ಹಿಂಬಾಲಿಸಿದ್ದ ಉತ್ತರಾಖಂಡ ತಂಡ, ರಾಜ್ವವರ್ಧನ್‌ ಹಂಗರ್ಗೇಕರ್‌ ಹಾಗೂ ಸತ್ಯಜೀತ್‌ ಬಚಾವ್‌ ಅವರ ಮಾರಕ ದಾಳಿಗೆ ನಲುಗಿತು. ಆ ಮೂಲಕ ಉತ್ತರಾಖಂಡ ತಂಡ 43.4 ಓವರ್‌ಗಳಿಗೆ ಕೇವಲ 202 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 129 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಉತ್ತರಾಖಂಡ ತಂಡದ ಪರ 56 ರನ್‌ ಗಳಿಸಿದ ಸೌರಭ್‌ ರಾವತ್‌ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಈ ಪಂದ್ಯದ ಮೂಲಕ ಮಹಾರಾಷ್ಟ್ರ ತಂಡ 8 ಅಂಗಳನ್ನು ಕಲೆ ಹಾಕಿ ಸಿ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.