ಮುಂಬೈ: ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೆ ಇದೀಗ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅದೇ ಹಾದಿಯನ್ನು ಅನುಸರಿಸಿದ್ದಾರೆ. ಮೇ 12 ರಂದು ಸೋಮವಾರ ವಿರಾಟ್ ಕೊಹ್ಲಿ ತಮ್ಮ 12 ವರ್ಷಗ ದೀರ್ಘಾವಧಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ಭಾರತೀಯ ಕ್ರಿಕೆಟ್ ಆಟಗಾರರು ತಮ್ಮ ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿದ್ದಾರೆ. ಈ ನಡುವೆ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೊಲ್ಕರ್ (Sachin Tendulkar) ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ 2013ರಲ್ಲಿ ಮುಂಬೈನಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಹೃದಯಸ್ಪರ್ಶಿ ನಡೆಯನ್ನು ಭಾರತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಸ್ಮರಿಸಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಭಾವನಾತ್ನಕ ಪೋಸ್ಟ್ ಮೂಲಕ ವಿರಾಟ್ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
Virat Kohli: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳು!
2013ರ ಘಟನೆಯನ್ನು ನೆನೆದ ಸಚಿನ್
"ನೀವು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿರುವ ಈ ಸಂದರ್ಭದಲ್ಲಿ 12 ವರ್ಷಗಳ ಹಿಂದೆ ನನ್ನ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಿಮ್ಮ ಅದ್ಭುತ ನಡೆಯನ್ನು ನಾನೀಗ ಸ್ಮರಿಸಿಕೊಳ್ಳುತ್ತೇನೆ. ನಿಮ್ಮ ದಿವಂಗತ ತಂದೆಯ ಕೈ ದಾರವನ್ನು ನೀವು ನನಗೆ ಕೊಡುಗೆಯಾಗಿ ನೀಡಿದ್ದೀರಿ. ಇದನ್ನು ಸ್ವೀಕರಿಸುವುದು ನನಗೆ ತೀರಾ ವೈಯಕ್ತಿಕ ವಿಷಯವಾಗಿತ್ತು, ಆದರೆ ನಿಮ್ಮ ಆ ನಡೆ ಹೃದಯಸ್ಪರ್ಶಿಯಾಗಿತ್ತು ಹಾಗೂ ಅದನ್ನು ನಾನು ಈಗಲೂ ಇಟ್ಟುಕೊಂಡಿದ್ದೇನೆಮ" ಎಂದು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.
ನೀವು ಅಸಂಖ್ಯಾತ ಯುವಕರಿಗೆ ಸ್ಪೂರ್ತಿ
"ನಿಮಗೆ ಅದೇ ರೀತಿಯ ದಾರವನ್ನು ಹಿಂತಿರುಗಿಸಲು ನನ್ನ ಬಳಿ ಏನೂ ಇಲ್ಲ. ಆದರೆ, ನಿಮಗೆ ಆಳವಾದ ಮೆಚ್ಚುಗೆ ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ನಿಮ್ಮ ನೈಜ ಪರಂಪರೆ, ನಿಮ್ಮ ಸಾಧನೆ ಕ್ರೀಡೆಯನ್ನು ಸ್ವೀಕರಿಸಿರುವ ಅಸಂಖ್ಯಾತ ಯುವಕರಿಗೆ ಸ್ಪೂರ್ತಿಯನ್ನು ತಂದುಕೊಡುತ್ತದೆ. ನಿಮ್ಮದು ಎಂಥಾ ಅದ್ಭುತ ವೃತ್ತಿ ಜೀವನ! ರನ್‌ಗಳಿಗಿಂತ ದೊಡ್ಡದನ್ನು ನೀವು ಭಾರತೀಯ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ್ದೀರಿ. ಇದನ್ನು ಹೊಸ ತಲೆ ಮಾರಿನ ಉತ್ಸಾಹಭರಿತ ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ನೀಡಿದ್ದೀರಿ. ನಿಮ್ಮ ಅತ್ಯಂತ ವಿಶೇಷ ಟೆಸ್ಟ್ ವೃತ್ತಿ ಜೀವನಕ್ಕೆ ಧನ್ಯವಾದಗಳು," ಎಂದು ಸಚಿನ್ ತೆಂಡೂಲ್ಕರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ʻಕಿಂಗ್ ಆಫ್ ಆಸ್ಟ್ರೇಲಿಯಾʼ: ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್‌ನ ಪ್ರಮುಖ ದಾಖಲೆಗಳು!
ವಿರಾಟ್ ಕೊಹ್ಲಿಯ ಅಂಕಿಅಂಶಗಳು
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕರಿಯರ್‌ನಲ್ಲಿ 45.85ರ ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಇದರ ಜೊತೆಗೆ 30 ಶತಕಗಳು ಹಾಗೂ 31 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನೀಲ್ ಗವಾಸ್ಕಾರ್ ಬಳಿಕ ಭಾರತದ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ.