ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಂಣದಲ್ಲಿ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudarshan) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಗ್ಗಜ ವಿರಾಟ್ ಕೊಹ್ಲಿಯ (Virat Kohli) ದಾಖಲೆಯನ್ನು ಮುರಿದಿದ್ದಾರೆ. ಅವರು ಈ ಪಂದ್ಯದಲ್ಲಿ ಆಡಿದ 44 ಎಸೆತಗಳಲ್ಲಿ 61 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಜಿಟಿ 168 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದಾರೆ.
ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಟೈಟನ್ಸ್ ತಂಡದ ಪರ ಸಾಯಿ ಸುದರ್ಶನ್ ಇನಿಂಗ್ಸ್ ಆರಂಭಿಸಿ ಉತ್ತಮ ಪ್ರದರ್ಶನವನ್ನು ತೋರಿದರು. ಅವರು ಒಂದು ತುದಿಯಲ್ಲಿ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಸಾಯಿ ಸುದರ್ಶನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶವನ್ನು ತೋರಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಗಳಿಸಿದ್ದಾರೆ. ಅಂದ ಹಾಗೆ ಈ ಇನಿಂಗ್ಸ್ ಮೂಲಕ ಅವರು ಸಾಯಿ ಸುದರ್ಶನ್ ಅವರು ಈ ಸೀಸನ್‌ನಲ್ಲಿ 500 ರನ್‌ಗಳನ್ನು ಪೂರ್ಣಗೊಳಿಸಿದರು.
GT vs SRH: ಗುಜರಾತ್ ಟೈಟನ್ಸ್ ಬೌಲರ್‌ಗಳಿಗೆ ಸುಲಭ ತುತ್ತಾದ ಸನ್‌ರೈಸರ್ಸ್ ಹೈದರಾಬಾದ್!
ಇತಿಹಾಸ ಬರೆದ ಸಾಯಿ ಸುದರ್ಶನ್
2026ರ ಐಪಿಎಲ್ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಸಾಯಿ ಸುದರ್ಶನ್ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ. 2025ರ ಐಪಿಎಲ್ ಆರೆಂಜ್ ಕ್ಯಾಪ್ ವಿನ್ನರ್ ಈ ಬಾರಿ ಆಡಿದ 12 ಇನಿಂಗ್ಸ್‌ಗಳಿಂದ 501 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಐದು ಅರ್ಧಶತಕವನ್ನು ಬಾರಿಸಿದ್ದಾರೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಾಯಿ ಎರಡನೇ ಸ್ಥಾನದಲ್ಲಿದ್ದಾರೆ.
ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 500 ರನ್ ಗಳಿಸಿರುವುದು ಸಾಯಿ ಸುದರ್ಶನ್ ಪಾಲಿಗೆ ಮೂರನೇ ಬಾರಿಯಾಗಿದೆ. 2024ರಲ್ಲಿ 527 ರನ್‌ಗಳು ಹಾಗೂ 2024ರ ಟೂರ್ನಿಯಲ್ಲಿ 758 ರನ್‌ಗಳನ್ನು ಕಲೆ ಹಾಕಿದ್ದರು. 24ನೇ ವಯಸ್ಸಿನಲ್ಲಿ ಮೂರು ಬಾರಿ 500ಕ್ಕೂ ಅಧಿಕ ರನ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ 25ನೇ ವಯಸ್ಸಿಗೂ ಮುನ್ನ ಎರಡು ಬಾರಿ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್; ಮೂರನೇ ಸ್ಥಾನಕ್ಕೆ ಕುಸಿದ ಸನ್‌ರೈಸರ್ಸ್
24ನೇ ವಯಸ್ಸಿನ 500ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟರ್ಸ್
ಸಾಯಿ ಸುದರ್ಶನ್: 3 (2024, 2025, 2026)- ಗುಜರಾತ್ ಟೈಟಾನ್ಸ್
ವಿರಾಟ್ ಕೊಹ್ಲಿ 2 (2011, 2013)- ರಾಯಲ್ ಚಾಲೆಂಜರ್ಸ್ ಬೆಂಗಳೂರು
ಯಶಸ್ವಿ ಜೈಸ್ವಾಲ್: 2 (2023, 2025)- ರಾಜಸ್ಥಾನ್ ರಾಯಲ್ಸ್
ಶಾನ್ ಮಾರ್ಷ್: 1 (2008)- ಕಿಂಗ್ಸ್ XI ಪಂಜಾಬ್
ಸುರೇಶ್ ರೈನಾ: 1 (2010) -ಚೆನ್ನೈ ಸೂಪರ್ ಕಿಂಗ್ಸ್
ಅಜಿಂಕ್ಯ ರಹಾನೆ: 1 (2012)- ರಾಜಸ್ಥಾನ್ ರಾಯಲ್ಸ್
ರಿಷಬ್ ಪಂತ್ : 1 (2018) ಡೆಲ್ಲಿ ಡೇರ್ ಡೆವಿಲ್ಸ್
ಇಶಾನ್ ಕಿಶನ್: 1 (2020)- ಮುಂಬೈ ಇಂಡಿಯನ್ಸ್
ಋತುರಾಜ್ ಗಾಯಕ್ವಾಡ್: 1 (2021)- ಚೆನ್ನೈ ಸೂಪರ್ ಕಿಂಗ್ಸ್
ಶುಭಮನ್ ಗಿಲ್: 1 (2023)- ಗುಜರಾತ್ ಟೈಟನ್ಸ್
ರಿಯಾನ್ ಪರಾಗ್: 1 (2024)- ರಾಜಸ್ಥಾನ್ ರಾಯಲ್ಸ್
ಪ್ರಭಾಸಿಮ್ರಾನ್ ಸಿಂಗ್: 1 (2025)- ಪಂಜಾಬ್ ಕಿಂಗ್ಸ್
IPL 2026: ಸತತ 4 ಪಂದ್ಯ ಗೆದ್ದಿರುವ ಕೆಕೆಆರ್ ಬಗ್ಗೆ ಸಂಜಯ್ ಬಾಂಗರ್ ದೊಡ್ಡ ಹೇಳಿಕೆ!
ವಿರಾಟ್ ಕೊಹ್ಲಿ ದಾಖಲೆ ಮುರಿದ ಸುದರ್ಶನ್
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಸಾಯಿ ಸುದರ್ಶನ್. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ತಮ್ಮ 26ನೇ ವಯಸ್ಸಿನಲ್ಲಿ 2016ರ ಟೂರ್ನಿಯಲ್ಲಿ ಈ ದಾಖಲೆ ಬರೆದಿದ್ದರು. ಈ ಸೀಸನ್‌ನಲ್ಲಿ ಸಾಯಿ ಸುದರ್ಶನ್ ಅವರ ದಾಖಲೆಯನ್ನು ಸರಿಗಟ್ಟಲು ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್‌ಗೆ ಅವಕಾಶವಿದೆ. ಅವರು ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 315 ರನ್‌ಗಳನ್ನು ಗಳಿಸಿದ್ದಾರೆ.
ಸಾಯಿ ಸುದರ್ಶನ್ ಅವರು ಗುಜರಾತ್ ಟೈಟನ್ಸ್ ತಂಡದ ಇತಿಹಾಸದಲ್ಲಿ ಮೂರು ಬಾರಿ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮೊದಲ ಆಟಗಾರರಾಗಿದ್ದಾರೆ. 2022ರ ಚಾಂಪಿಯನ್ ತಂಡದ ನಾಯಕ ಶುಭಮನ್ ಗಿಲ್ ಅವರು 2023 ಮತ್ತು 2025ರಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇದೇ ವೇಳೆ, ಜೋಸ್ ಬಟ್ಲರ್ ಅವರು 2025ರಲ್ಲಿ ಒಮ್ಮೆ 500+ ರನ್ ಮೈಲುಗಲ್ಲು ತಲುಪಿದ್ದರು.