Asia Cup 2025: ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಸಂಜಯ್ ಮಾಂಜ್ರೇಕರ್ ಪ್ರತಿಕ್ರಿಯೆ!
ಮುಂಬರುವ ಏಷ್ಯಾ ಕಪ್ ಟೂರ್ನಿಯ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಟಿ20ಐ ಸರಣಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಇದರ ಹೊರತಾಗಿಯೂ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಶ್ರೇಯಸ್ ಅಯ್ಯರ್‌ಗೆ ಬೆಂಬಲ ನೀಡಿದ ಸಂಜಯ್ ಮಾಂಜ್ರೇಕರ್.

ನವದೆಹಲಿ: ಮುಂಬರುವ ಏಷ್ಯಾ ಕಪ್ (Asia Cup 2025) ಟೂರ್ನಿಯ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ (Shreyas Iyer) ಸ್ಥಾನ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ (Sanjay Manjrekar) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ದ ಕಳೆದ ಟಿ20ಐ ಸರಣಿ ಹಾಗೂ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅಲ್ಲದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಭಾರತದ ಪರ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರು. ಇದರ ಹೊರತಾಗಿಯೂ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಪಂಜಾಬ್ ಕಿಂಗ್ಸ್ ನಾಯಕನನ್ನು ಆಯ್ಕೆ ಮಾಡಲಿಲ್ಲ.
ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಮಾತನಾಡಿದ ಸಂಜಯ್ ಮಾಂಜ್ರೇಕರ್, "ಏಷ್ಯಾ ಕಪ್ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡದೇ ಇರುವುದು ಆಘಾತ ತಂದಿದೆ. ದೇಶಿ ಕ್ರಿಕೆಟ್‌ನಲ್ಲಿ ಆಡದೇ ಇರುವ ಕಾರಣ ಈ ಆಟಗಾರನನ್ನು ಒಂದು ಸಮಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ನೀಡಿರಲಿಲ್ಲ. ನಂತರ ಅವರು ದೇಶಿ ಕ್ರಿಕೆಟ್ ಆಡಿ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದ ಹಾದಿ ಅದ್ಭುತವಾಗಿತ್ತು. ಹಿಂದೆಂದೂ ಆಡದ ರೀತಿಯಲ್ಲಿ ಅವರು ಈ ಸರಣಿಯಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು.
Asia Cup 2025 ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ!
"ಆ ಕಮ್‌ಬ್ಯಾಕ್ ಸರಣಿಯಲ್ಲಿ ಅವರು ಒಂದು ಹೆಜ್ಜೆಯೂ ತಪ್ಪು ಮಾಡಲಿಲ್ಲ ಮತ್ತು ನಂತರ ಆ ಫಾರ್ಮ್ ಅನ್ನು ಐಪಿಎಲ್ ಕ್ರಿಕೆಟ್‌ಗೆ ಕೊಂಡೊಯ್ದರು. ಐಪಿಎಲ್ ಋತುವಿನ ಉದ್ದಕ್ಕೂ ಯಾವುದೇ ಬ್ಯಾಟ್ಸ್‌ಮನ್ ಆ ರೀತಿಯ ಫಾರ್ಮ್ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ, ಸರಾಸರಿ 50 ಕ್ಕಿಂತ ಹೆಚ್ಚು, ಸ್ಟ್ರೈಕ್ ರೇಟ್ 170 ಕ್ಕಿಂತ ಹೆಚ್ಚು ಮತ್ತು ಬ್ಯಾಟಿಂಗ್‌ನಲ್ಲಿ ತಂಡದಲ್ಲಿ ಗೇಮ್-ಚೇಂಜರ್ ಆಗಿದ್ದರು. ಅವರು ಆಯ್ಕೆಯಾಗದ ಕಾರಣ ಬಹುಮಾನ ಪಡೆಯುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ
2025ರ ಐಪಿಎಲ್ ಟೂರ್ನಿಯಲ್ಲಿ ಅಯ್ಯರ್ 17 ಪಂದ್ಯಗಳಲ್ಲಿ 604 ರನ್ ಗಳಿಸಿದ್ದರು. 175.07 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ನಡೆಸಿದ್ದ ಅಯ್ಯರ್ 39 ಸಿಕ್ಸರ್‌ಗಳು ಮತ್ತು 43 ಬೌಂಡರಿಗಳನ್ನು ಬಾರಿಸಿದ್ದರು. ಅವರು ಆರು ಬಾರಿ 50 ರನ್‌ಗಳ ಗಡಿಯನ್ನು ದಾಟಿದ್ದರು. ಅವರು ನಾಯಕತ್ವದ ಮುಂಚೂಣಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು ಮತ್ತು 2014 ರ ನಂತರ ಪಿಬಿಕೆಎಸ್ ಅನ್ನು ತಮ್ಮ ಮೊದಲ ಐಪಿಎಲ್ ಫೈನಲ್‌ಗೆ ಮುನ್ನಡೆಸಿದರು. ಪಿಬಿಕೆಎಸ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸಿತ್ತು ಹಾಗೂ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 243 ರನ್
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವನ್ನು ಕಲೆ ಹಾಕಿದ್ದರು. ಅವರು ಆಡಿದ್ದ 5 ಪಂದ್ಯಗಳಿಂದ 243 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಎರಡು ಅರ್ಧಶತಕಗಳು ಮತ್ತು ಫೈನಲ್ ಪಂದ್ಯದಲ್ಲಿ 62 ಎಸೆತಗಳಲ್ಲಿ 48 ರನ್ ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ ತಂಡ ಪ್ರಶಸ್ತಿ ಗೆಲುವಿನಲ್ಲಿ ಶ್ರೇಯಸ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.