ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CSK vs GT: 5000 ಐಪಿಎಲ್‌ ರನ್‌ ಗಳಿಸಿ ಎಂಎಸ್‌ ಧೋನಿ ದಾಖಲೆ ಮುರಿದ ಸಂಜು ಸ್ಯಾಮ್ಸನ್‌!

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 11 ರನ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಜು ಸ್ಯಾಮ್ಸನ್ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ 5,000 ರನ್ ಗಳಿಸಿದರು. ಕಡಿಮೆ ಎಸೆತಗಳಲ್ಲಿ ಈ ಮೈ ಗಲ್ಲು ತಲುಪಿದ ಮೂರನೇ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

5000 ಐಪಿಎಲ್‌ ರನ್‌ಗಳನ್ನು ಕಲೆ ಹಾಕಿದ ಸಂಜು ಸ್ಯಾಮ್ಸನ್‌.

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 37ನೇ ಪಂದ್ಯದಲ್ಲಿ(GT vs CSK) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಕೇವಲ 11 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರ ಹೊರತಾಗಿಯೂ ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಒಂದು ಸ್ಮರಣೀಯ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಅವರು 5,000 ರನ್‌ಗಳನ್ನು ಪೂರ್ಣಗೊಳಿಸಿದ ಎಲೈಟ್‌ ಆಟಗಾರರನ್ನು ಒಳಗೊಂಡಿರುವ ಪಟ್ಟಿಗೆ ಸೇರ್ಪೆಡಯಾಗಿದ್ದಾರೆ.

2026ರ ಐಪಿಎಲ್ ಈ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷಿಸಲಾಗಿತ್ತು; ಆದರೆ ಅವರು ಕೇವಲ 11 ರನ್‌ಗಳನ್ನು ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, 11 ರನ್‌ಗಳ ಮೂಲಕ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 5,000 ರನ್‌ಗಳನ್ನು ಪೂರ್ಣಗೊಳಿಸಿದರು. ತಮ್ಮ ಕ್ಲಾಸ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಲ್ಲಿ ಇನಿಂಗ್ಸ್‌ ಆರಂಭಿಸಿದ ಅವರು, ಕಗಿಸೊ ರಬಾಡ ಎಸೆತದಲ್ಲಿ ಜೋಸ್‌ ಬಟ್ಲರ್‌ಗೆ ಕ್ಯಾಚ್‌ ಕೊಟ್ಟರು.

CSK vs MI: ಸೆಂಚುರಿ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್‌!

ಸಂಜು ಸ್ಯಾಮ್ಸನ್ ಅವರು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಕಡಿಮೆ ಎಸೆತಗಳಲ್ಲಿ 5,000 ರನ್ ಪೂರೈಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಮೈಲುಗಲ್ಲು ತಲುಪಲು ಸ್ಯಾಮ್ಸನ್, ಕೇವಲ 3,555 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಅವರು ಸುರೇಶ್ ರೈನಾ, ಕೆಎಲ್ ರಾಹುಲ್ ಮತ್ತು ಎಂಎಸ್ ಧೋನಿಯಂತಹ ದಂತಕಥೆಗಳನ್ನು ಎಲೈಟ್‌ ಲಿಸ್ಟ್‌ನಲ್ಲಿ ಹಿಂದಿಕ್ಕಿದ್ದಾರೆ.



ಐಪಿಎಲ್‌ ಟೂರ್ನಿಯಲ್ಲಿ 5000 ರನ್‌ಗಳನ್ನು ಕಲೆ ಹಾಕಿದ ಒಟ್ಟಾರೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ದಂತಕಥೆ ಎಬಿ ಡಿವಿಲಿಯರ್ಸ್ (3,288 ಎಸೆತಗಳು) ಇದ್ದಾರೆ, ನಂತರ ಡೇವಿಡ್ ವಾರ್ನರ್ (3,554 ಎಸೆತಗಳು) ಎರಡನೇ ಸ್ಥಾನದಲ್ಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಡೇವಿಡ್‌ ವಾರ್ನರ್ ನಡುವೆ ಕೇವಲ ಒಂದು ಎಸೆತದ ವ್ಯತ್ಯಾಸವಿದೆ.

IPL 2026: ಸಂಜು ಸ್ಯಾಮ್ಸನ್‌ ಶತಕದ ಇನಿಂಗ್ಸ್‌ ಬಗ್ಗೆ ಹರ್ಭಜನ್‌ ಸಿಂಗ್‌ ದೊಡ್ಡ ಹೇಳಿಕೆ!

ಸಂಜು ಸ್ಯಾಮ್ಸನ್‌ರ ಈ ದಾಖಲೆಯು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರು 3,620 ಎಸೆತಗಳಲ್ಲಿ ಈ ಮೈಲುಗಲ್ಲು ಸಾಧಿಸಿದ ಸುರೇಶ್ ರೈನಾ - ಸಾಮಾನ್ಯವಾಗಿ 'ಮಿಸ್ಟರ್ ಐಪಿಎಲ್' ಎಂದು ಕರೆಯಲ್ಪಡುವ - ಅವರನ್ನು ಹಿಂದಿಕ್ಕಿದ್ದಾರೆ. ಇದಲ್ಲದೆ, ಕೆಎಲ್ ರಾಹುಲ್ (3,688 ಎಸೆತಗಳು) ಮತ್ತು ಎಂಎಸ್ ಧೋನಿ (3,691 ಎಸೆತಗಳು) ಕೂಡ ಈ ಪಟ್ಟಿಯಲ್ಲಿ ಸಂಜುಗಿಂತ ಹಿಂದುಳಿದಿದ್ದಾರೆ. ಸಂಜು ಅವರ ಈ ಸಾಧನೆಯು ಅವರು ರನ್ ಗಳಿಸುವುದು ಮಾತ್ರವಲ್ಲದೆ ತಂಡದ ಅವಶ್ಯಕತೆಗಳಿಗೆ ಅನುಗುಣವಾಗಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.