ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸಂಜು ಸ್ಯಾಮ್ಸನ್‌ ಶತಕದ ಇನಿಂಗ್ಸ್‌ ಬಗ್ಗೆ ಹರ್ಭಜನ್‌ ಸಿಂಗ್‌ ದೊಡ್ಡ ಹೇಳಿಕೆ!

CSK vs MI: ಮುಂಬೈ ಇಂಡಿಯನ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 33ನೇ ಪಂದ್ಯದಲ್ಲಿ ಬುದ್ದಿವಂತಿಕೆಯ ಶತಕ ಸಿಡಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಂಜು ಸ್ಯಾಮ್ಸನ್‌ ಅವರನ್ನು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಸೆಂಚುರಿ ಬಾರಿಸಿದ ಸಂಜು ಸ್ಯಾಮ್ಸನ್‌ ಬಗ್ಗೆ ಭಜ್ಜಿ ದೊಡ್ಡ ಹೇಳಿಕೆ!

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ಗೆ ಹರ್ಭಜನ್‌ ಸಿಂಗ್‌ ಮೆಚ್ಚುಗೆ. -

Profile
Ramesh Kote Apr 24, 2026 6:42 PM

ನವದೆಹಲಿ: ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿ ಜೀವನದ 7ನೇ ಶತಕ ಸಿಡಿಸಿ ಮುಂಬೈ ಇಂಡಿಯನ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ 104 ರನ್‌ಗಳ ಗೆಲುವಿಗೆ ನೆರವು ನೀಡಿದ ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ (sanju Samson) ಅವರನ್ನು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ (Harbhajan Singh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಏಪ್ರಿಲ್‌ 23ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಂಜು ಸಿಎಸ್‌ಕೆ ಪರ ಎರಡನೇ ಶತಕವನ್ನು ಬಾರಿಸಿದರು. ಅವರು ತಮ್ಮ ಅಜೇಯ ಇನಿಂಗ್ಸ್‌ನಲ್ಲಿ 104 ರನ್‌ಗಳನ್ನು ಕಲೆ ಹಾಕಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಭಾಗವಹಿಸಿದ ಹರ್ಭಜನ್‌ ಸಿಂಗ್‌, ಸಂಜು ಸ್ಯಾಮ್ಸನ್‌ ಅವರ ಅದ್ಭುತ ಇನಿಂಗ್ಸ್‌ಗಳಲಿ ಇದು ಕೂಡ ಒಂದಾಗಿದೆ. ಅವರು ಆಟದ ಸನ್ನಿವೇಶವನ್ನು ಅರಿತುಕೊಂಡು ಕೊನೆಯವರೆಗೂ ಬ್ಯಾಟ್‌ ಮಾಡಿದ್ದಾರೆ. ಅರ್ಧಶತಕ ಸಿಡಿಸಿದ ಬಳಿಕ ಅವರು ತಮ್ಮ ಬ್ಯಾಟಿಂಗ್‌ ವೇಗವನ್ನು ನಿಧಾನಗೊಳಿಸಿದರು ಹಾಗೂ ಒಂದು, ಎರಡು ರನ್‌ಗಳನ್ನು ತೆಗೆದುಕೊಂಡು ಕೊನಯವರೆಗೂ ಬ್ಯಾಟ್‌ ಮಾಡಲು ನಿರ್ಧರಿಸಿದ್ದರು ಎಂದು ಅವರು ಹೇಳಿದ್ದಾರೆ.

IPL 2026: ʻಮುಂಬೈ ಇಂಡಿಯನ್ಸ್‌ ಸತತ ವೈಫಲ್ಯಕ್ಕೆ ನೀವೇ ಕಾರಣʼ-ಹಾರ್ದಿಕ್‌ ಪಾಂಡ್ಯಗೆ ಜಾಡಿಸಿದ ಅಶ್ವಿನ್‌!

“ಸಂಜು ಸ್ಯಾಮ್ಸನ್ ಅವರ ಆಟದ ಅರಿವಿನಿಂದ ಅವರು ವಿಶೇಷವಾಗಿ ಗಮನ ಸೆಳೆದರು. ಹಲವರಿಗೆ ಪ್ರತಿಭೆ ಇರುತ್ತದೆ, ಆದರೆ ವಿಭಿನ್ನ ಸಂದರ್ಭಗಳಲ್ಲಿ ಇನಿಂಗ್ಸ್ ಅನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವವರು ಬಹಳ ಕಡಿಮೆ. ತಮ್ಮ ಸುತ್ತಲೂ ಯುವ ಆಟಗಾರರು ಇದ್ದಾಗ, ಅಂತ್ಯದವರೆಗೆ ಬ್ಯಾಟ್‌ ಮಾಡುವ ಮಹತ್ವವನ್ನು ಅವರು ಚೆನ್ನಾಗಿ ಗುರುತಿಸಿದರು,” ಎಂದು ಹರ್ಭಜನ್ ಹೇಳಿದ್ದಾರೆ.

“ಅರ್ಧಶತಕದ ನಂತರ ಅವರು ವೇಗ ಬದಲಿಸಿ, ಸಿಂಗಲ್ಸ್ ಮತ್ತು ಡಬಲ್ಸ್ ಮೇಲೆ ಗಮನಹರಿಸಿ, ಕೊನೆಯ ಹಂತದವರೆಗೆ ಕ್ರೀಸ್‌ನಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಂಡರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದಾಗ, ಅವರು ಜವಾಬ್ದಾರಿಯನ್ನು ತೆಗೆದುಕೊಂಡು ತಮ್ಮ ಮೌಲ್ಯಯುತವಾದ ಇನಿಂಗ್ಸ್ ಅನ್ನು ಮುಕ್ತಾಯಗೊಳಿಸಿದರು,” ಎಂದು ಅವರು ಸೇರಿಸಿದ್ದಾರೆ.

CSK vs MI: ಸಂಜು ಸ್ಯಾಮ್ಸನ್‌ ಶತಕದ ಬಲದಿಂದ ಮುಂಬೈಗೆ ಸೋಲಿನ ಬರೆ ಎಳೆದ ಚೆನ್ನೈ ಸೂಪರ್‌ ಕಿಂಗ್ಸ್!

“ನನ್ನ ದೃಷ್ಟಿಯಲ್ಲಿ ಆಟದ ಅರಿವು ಮತ್ತು ದೃಢನಿಶ್ಚಯದ ದೃಷ್ಟಿಯಿಂದ ಇದು ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದಾಗಿದೆ,” ಎಂದು ಅವರು ಮತ್ತಷ್ಟು ಹೇಳಿದ್ದಾರೆ.

ಮುಂಬೈ ಎದುರು ಇತಿಹಾಸ ಬರೆದ ಸಂಜು

ಸಂಜು ಸ್ಯಾಮ್ಸನ್ 54 ಚೆಂಡುಗಳಲ್ಲಿ ಅಜೇಯ 101 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಅವರು 10 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಆಟಗಾರ ಎಂಬ ದಾಖಲೆಯನ್ನು ಅವರು ಬರೆದರು.

ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಋತುರಾಜ್ ಗಾಯಕ್ವಾಡ್ ಅವರ ಹೆಸರಿನಲ್ಲಿತ್ತು. ಅವರು 88 ರನ್ ಗಳಿಸಿದ್ದರು.

CSK vs MI: ಸೆಂಚುರಿ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್‌!

ಮುಂಬೈ ಇಂಡಿಯನ್ಸ್ ವಿರುದ್ಧ ಗರಿಷ್ಠ ವೈಯಕ್ತಿಕ ಮೊತ್ತ ಕಲೆ ಹಾಕಿದ ಸಿಎಸ್‌ಕೆ ಆಟಗಾರರು

ಸಂಜು ಸ್ಯಾಮ್ಸನ್ – 101*

ಋತುರಾಜ್ ಗಾಯಕ್ವಾಡ್ – 88*

ಮೈಕಲ್ ಹಸ್ಸಿ – 86*

ಸುರೇಶ್ ರೈನಾ – 83*

ಸುರೇಶ್ ರೈನಾ – 82*