ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC Women's rankings: ಟಿ20ಐ ಶ್ರೇಯಾಂಕದಲ್ಲಿ ಪ್ರಗತಿ ಕಂಡ ಶಫಾಲಿ ವರ್ಮಾ, ರೇಣುಕಾ ಸಿಂಗ್!

ಶ್ರೀಲಂಕಾ ವಿರುದ್ಧ ಮಹಿಳಾ ಟಿ20ಐ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಭಾರತ ಮಹಿಳಾ ತಂಡದ ಶಫಾಲಿ ವರ್ಮಾ ಹಾಗೂ ರೇಣುಕಾ ಸಿಂಗ್‌ ಅವರು ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ. ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಶಫಾಲಿ ಏರಿಕೆ ಕಂಡರೆ, ಬೌಲಿಂಗ್‌ ಶ್ರೇಯಾಂಕದಲ್ಲಿ ರೇಣುಕಾ ಸಿಂಗ್‌ ಏರಿಕೆ ಕಂಡಿದ್ದಾರೆ.

ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡ ಶಫಾಲಿ ವರ್ಮಾ.

ನವದೆಹಲಿ: ಶ್ರೀಲಂಕಾ ವಿರುದ್ಧದ ಮಹಿಳಾ ಟಿ20ಐ ಸರಣಿಯಲ್ಲಿ (INDW vs SLW) ಅತ್ಯುತ್ತಮ ಪ್ರದರ್ಶನವನ್ನು ತೋರಿದ ಶಫಾಲಿ ವರ್ಮಾ (Shafali Verma) ಹಾಗೂ ರೇಣುಕಾ ಸಿಂಗ್‌ (Renuka Singh) ಅವರು ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಈ ಸರಣಿಯಲ್ಲಿ ಶಫಾಲಿ ವರ್ಮಾ ಅತಿ ಹೆಚ್ಚು ರನ್‌ ಗಳಿಸಿದ್ದರೆ, ರೇಣುಕಾ ಸಿಂಗ್‌ ಮೂರನೇ ಟಿ20ಐ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಸಾಧನೆ ಮಾಡಿದ್ದಾರೆ. ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಶಫಾಲಿ ವರ್ಮಾ ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡು 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ನಾಲ್ಕನೇ ಟಿ20ಐ ಪಂದ್ಯದಲ್ಲಿ 46 ಎಸೆತಗಳಲ್ಲಿ 79 ರನನ್‌ಗಳನ್ನು ಸಿಡಿಸಿದ್ದರು.

ಶಫಾಲಿ ವರ್ಮಾ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 221 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ 30 ರನ್‌ಗಳಿಂದ ಗೆದ್ದು ಬೀಗಿತ್ತು. ಬಲಗೈ ಬ್ಯಾಟ್ಸ್‌ವುಮೆನ್‌ ಸದ್ಯ 60 ಪಾಯಿಂಟ್ಸ್‌ ರೇಟಿಂಗ್‌ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೆತ್‌ ಮೂನಿ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ಉಪ ನಾಯಕಿ ಸ್ಮೃತಿ ಮಂಧಾನಾ ಅವರು ಮೂರನೇ ಸ್ಥಾನದಲ್ಲಿದ್ದರೆ, ಹರ್ಮನ್‌ಪ್ರೀತ್‌ ಕೌರ್‌ 15ನೇ ಶ್ರೇಯಾಂಕದಲ್ಲಿದ್ದಾರೆ.

IND vs NZ: ಸಚಿನ್‌ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

7ನೇ ಶ್ರೇಯಾಂಕಕ್ಕೆ ರೇಣುಕಾ ಸಿಂಗ್‌

ಇನ್ನು ಭಾರತ ತಂಡದ ವೇಗದ ಬೌಲರ್‌ ರೇಣುಕಾ ಸಿಂಗ್‌ ಅವರು ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ 7ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದಾರೆ. ಮೂರನೇ ಟಿ20ಐ ಪಂದ್ಯದಲ್ಲಿ ಅರುಂಧತಿ ರೆಡ್ಡಿ ಅವರ ಸ್ಥಾನದಲ್ಲಿ ಆಡಿದ್ದ ರೇಣುಕಾ ಸಿಂಗ್‌ ಅವರು 21 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ಮಹಿಳಾ ತಂಡದ 8 ವಿಕಟ್‌ಗಳ ಗೆಲುವಿಗೆ ನೆರವು ನೀಡಿದ್ದರು.

236 ರನ್‌ಗಳನ್ನು ಗಳಿಸಿರುವ ಶಫಾಲಿ ವರ್ಮಾ

ಶಫಾಲಿ ವರ್ಮಾ ಅವರು ಶ್ರೀಲಂಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಆಡಿದ ನಾಲ್ಕು ಇನಿಂಗ್ಸ್‌ಗಳಿಂದ 118ರ ಸರಾಸರಿ ಹಾಗೂ 185.82ರ ಸ್ಟ್ರೈಕ್‌ ರೇಟ್‌ನಲ್ಲಿ 236 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಇಂಗ್ಲೆಂಡ್‌ ತಂಡ ಪ್ರಕಟ, ಜೋಫ್ರಾ ಆರ್ಚರ್‌ಗೆ ಸ್ಥಾನ!

ನಾಲ್ಕನೇ ಟಿ20ಐನಲ್ಲಿ ಅಜೇಯ 40 ರನ್ ಗಳಿಸಿದ ಬಳಿಕ ರಿಚಾ ಘೋಷ್ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತನ್ನ ಏರಿಕೆಯನ್ನು ಮುಂದುವರಿಸಿದ್ದಾರೆ, ಏಳು ಸ್ಥಾನಗಳ ಜಿಗಿತವನ್ನು ಸಾಧಿಸಿ 20ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದರ ನಡುವೆ ಈ ಸರಣಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಂತರ ಎಡಗೈ ಸ್ಪಿನ್ನರ್ ಶ್ರೀ ಚರಣಿ ಬೌಲರ್‌ಗಳ ಶ್ರೇಯಾಂಕದಲ್ಲಿ 17 ಸ್ಥಾನಗಳ ಏರಿಕೆಯಾಗಿ 52ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಟಿ20ಐ ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದರೆ, ವೆಸ್ಟ್ ಇಂಡೀಸ್‌ನ ತಾರೆ ಹೇಲಿ ಮ್ಯಾಥ್ಯೂಸ್ ಟಿ20ಐ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಆರಾಮವಾಗಿ ಮುಂದಿದ್ದಾರೆ. ಟಿ20ಐ ಸರಣಿಯಲ್ಲಿ 4-0 ಮುನ್ನಡೆಯೊಂದಿಗೆ, ಡಿಸೆಂಬರ್ 30ರಂದು ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20ಐನಲ್ಲಿ ಮತ್ತೊಂದು ಗೆಲುವಿನೊಂದಿಗೆ ಭಾರತ ತಂಡ, 2025 ಅನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿದೆ.