ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ವಿಂಡೀಸ್‌ಗೆ ಜಯ ತಂದುಕೊಟ್ಟ ಶೇಯ್‌ ಹೋಪ್‌, 3ನೇ ಪಂದ್ಯ ಸೋತರೂ ಏಕದಿನ ಸರಣಿ ಗೆದ್ದ ಭಾರತ!

IND vs WI 3rd ODI Highlights: ಕೆಎಲ್‌ ರಾಹುಲ್‌ ಶತಕದ ಹೊರತಾಗಿಯೂ ಶೇಯ್‌ ಹೋಪ್‌ ಅವರ ಅಜೇಯ ಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಸೋಲಿನ ಹೊರತಾಗಿಯೂ ಭಾರತ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.

ಮೂರನೇ ಒಡಿಐನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕೆಎಲ್‌ ರಾಹುಲ್‌, ಶೇಯ್‌ ಹೋಪ್‌.

ಮುಲ್ಲಾನ್‌ಪುರ: ಕೆಎಲ್‌ ರಾಹುಲ್‌ (KL Rahul) ಶತಕದ ಹೊರತಾಗಿಯೂ ಶೇಯ್‌ ಹೋಪ್‌ (Shai Hope) ಅವರ ಭರ್ಜರಿ ಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ, ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (IND vs WI) ಭಾರತದ ಎದುರು 5 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ವಿಂಡೀಸ್‌ಗೆ ಕೊನೆಯ ಪಂದ್ಯದ ಗೆಲುವು ಸಮಾಧಾನ ತಂದಿತು. ಆದರೆ, ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದ ಭಾರತ ಅಂತಿಮವಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಆದರೂ ಆರಂಭಿಕ ಎರಡು ಪಂದ್ಯಗಳ ಗೆಲುವಿನ ಆಧಾರ ಮೇಲೆ ಟೀಮ್‌ ಇಂಡಿಯಾ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಗೆದದುಕೊಂಡಿತು.

ಶನಿವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 352 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್‌ ತಂಡ, ನಾಯಕ ಶೇಯ್‌ ಹೋಪ್‌ ಅವರ ಶತಕದ ಬಲದಿಂದ, 48.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 352 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಶೇಯ್‌ ಹೋಪ್‌ ಶತಕದ ಜೊತೆಗೆ ಆಮಿರ್‌ ಜಂಗೋ 67 ರನ್‌ ಹಾಗೂ ಕಿಮೋ ಪಾಲ್‌ 44 ರನ್‌ಗಳ ಕೊಡುಗೆಯನ್ನು ನೀಡಿದರು.

IND vs WI: ಐದನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ಎಂಎಸ್‌ ಧೋನಿ ದಾಖಲೆ ಸರಿಗಟ್ಟಿದ ಕೆಎಲ್‌ ರಾಹುಲ್‌!

ಶೇಯ್‌ ಹೋಪ್‌ ಭರ್ಜರಿ

ಇನಿಂಗ್ಸ್‌ ಆರಂಭಿಸಿದ ಶೇಯ್‌ ಹೋಪ್‌ ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಇನಿಂಗ್ಸ್‌ನ ಉದ್ದಕ್ಕೂ143 ಎಸೆತಗಳಲ್ಲಿಅಜೇಯ 162 ರನ್‌ಗಳನ್ನು ಕಲೆ ಹಾಕಿ, ವಿಂಡೀಸ್‌ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ ಹಾಗೂ 17 ಬೌಂಡರಿಗಳು ಸೇರಿವೆ. ಕಳೆದ ಪಂದ್ಯದಲ್ಲಿಯೂ ಶತಕ ಸಿಡಿಸಿದ್ದ ಹೋಪ್‌, ಇದೀಗ ಈ ಪಂದ್ಯದಲ್ಲಿಯೂ ಶತಕ ಸಿಡಿಸಿ ವಿಂಡೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಭಾರತ ತಂಡದ ಬೌಲರ್‌ಗಳು ಪ್ರಮುಖ ಬ್ಯಾಟ್ಸ್‌ಮನ್‌ ಹಂತ ಹಂತವಾಗಿ ಕಟ್ಟಿ ಹಾಕಿದರೂ ಶೇಯ್‌ ಹೋಪ್‌ ಅವರನ್ನು ಔಟ್‌ ಮಾಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ಹೋಪ್‌ ಅವರನ್ನು ಔಟ್‌ ಮಾಡಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು.



ಆರಂಭಿಕ ಆಘಾತ ಅನುಭವಿಸಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್‌ ಫಾರ್ಮ್‌ ಬ್ಯಾಟರ್‌ ಅಭಿಷೇಕ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರನ್ನು ಜೇಡನ್‌ ಸೀಲ್ಸ್‌ ಅವರು ಮೂರನೇ ಓವರ್‌ನಲ್ಲಿ 3 ಮತ್ತು 4 ನೇ ಎಸೆತಗಳಲ್ಲಿ ಔಟ್‌ ಮಾಡಿದ್ದರು. ಆ ಮೂಲಕ ಭಾರತ ತಂಡಕ್ಕೆ ಸೀಲ್ಸ್‌ ಆರಂಭಿಕ ಆಘಾತವನ್ನು ನೀಡಿದ್ದರು. ಆದರೆ, ರೋಹಿತ್‌ ಶರ್ಮಾ ಹಾಗೂ ಋತುರಾಜ್‌ ಗಾಯಕ್ವಾಡ್‌ ಮೂರನೇ ವಿಕೆಟ್‌ಗೆ 137 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲು ತಲುಪಿದ ಕೆಎಲ್ ರಾಹುಲ್‌!

ರೋಹಿತ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 85 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 92 ರನ್‌ ಗಳಿಸಿದರು. ಆ ಮೂಲಕ ಶತಕದಂಚಿನಲ್ಲಿದ್ದರು. ಅವರು ಶತಕ ಸಿಡಿಸುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ. ಅವರನ್ನು ಕಿಮೋ ಪಾಲ್‌ 25ನೇ ಓವರ್‌ನಲ್ಲಿ ಔಟ್‌ ಮಾಡಿದರು. ಕೇವಲ 8 ರನ್‌ನಿಂದ ಶತಕ ವಂಚಿತರಾಗಿ ರೋಹಿತ್‌ ಪೆವಿಲಿಯನ್‌ಗೆ ಮರಳಿದರು.

IND vs WI: ಐದನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ಎಂಎಸ್‌ ಧೋನಿ ದಾಖಲೆ ಸರಿಗಟ್ಟಿದ ಕೆಎಲ್‌ ರಾಹುಲ್‌!

ಗಾಯಕ್ವಾಡ್‌ ಅರ್ಧಶತಕ

ಮಧ್ಯಮ ಕ್ರಮಾಂಕದಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಋತುರಾಜ್‌ ಗಾಯಕ್ವಾಡ್‌ ಅವರು ಕೂಡ ಅರ್ಧಶತಕವನ್ನು ಗಳಿಸಿದರು. ಅವರು ಆಡಿದ 69 ಎಸೆತಗಳಲ್ಲಿ 57 ರನ್‌ಗಳನ್ನು ಕಲೆ ಹಾಕಿದರು. ಗಾಯಕ್ವಾಡ್‌ ಔಟ್‌ ಆದ ಬಳಿಕ ನಮನ್‌ ಧೀರ್‌ 20 ಎಸೆತಗಳಲ್ಲಿ 30 ರನ್‌ ಗಳಿಸಿ ಔಟ್‌ ಆದರು. ನಿತೀಶ್‌ ರೆಡ್ಡಿ ಕೇವಲ 9 ರನ್‌ಗೆ ವಿಕೆಟ್‌ ಒಪ್ಪಿಸಿದರು.



ಕೆಎಲ್‌ ರಾಹುಲ್‌ 9ನೇ ಶತಕ

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ಗೆ ಅವಕಾಶ ಕಳೆದುಕೊಂಡಿದ್ದ ಕನ್ನಡಿಗ ಕೆಎಲ್‌ ರಾಹುಲ್‌, ಮೂರನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅವರು ಕೊನೆಯವರೆಗೂ ಒಂದು ಕಡೆ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 87 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 129 ರನ್‌ಗಳನ್ನು ಗಳಿಸಿದರು. ಆ ಮೂಲಕ ತನ್ನ ಒಡಿಐ ವೃತ್ತಿ ಜೀವನದ 9ನೇ ಶತಕವನ್ನು ಸಿಡಿಸಿದರು. ಅನ್ಷುಲ್‌ ಕಾಂಬೋಜ್‌ ಕೊನೆಯಲ್ಲಿ 17 ರನ್‌ಗಳ ಕೊಡುಗೆಯನ್ನು ನೀಡಿದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 351 ರನ್‌ಗಳನ್ನು ಕಲೆ ಹಾಕಿತು. ವಿಂಡೀಸ್‌ ಪರ ಜೇಡನ್‌ ಸೀಲ್ಸ್‌ ಮೂರು ವಿಕೆಟ್‌ ಕಿತ್ತರೆ, ಕಿಮೋ ಪಾಲ್‌ ಎರಡು ವಿಕೆಟ್‌ ತೆಗೆದರು.

ಸ್ಕೋರ್‌ ವಿವರ

ಭಾರತ: 50 ಓವರ್‌ಗಳಿಗೆ 351-7 ( ಕೆಎಲ್‌ ರಾಹುಲ್‌ 129*, ರೋಹಿತ್‌ ಶರ್ಮಾ 92, ಋತುರಾಜ್‌ ಗಾಯಕ್ವಾಡ್‌ 57; ಜೇಡನ್‌ ಸೀಲ್ಸ್‌ 62 ಕ್ಕೆ 3, ಕಿಮೋ ಪಾಲ್‌ 71 ಕ್ಕೆ 2)

ವೆಸ್ಟ್‌ ಇಂಡೀಸ್‌: 48.2 ಓವರ್‌ಗಳಿಗೆ 353-5 (ಶೇಯ್‌ ಹೋಪ್‌ 162*, ಆಮಿರ್‌ ಜಂಗೋ 67; ಮೊಹಮ್ಮದ್‌ ಸಿರಾಜ್‌ 53 ಕ್ಕೆ 2, ನಮನ್‌ ಧೀರ್‌ 33 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶೇಯ್‌ ಹೋಪ್‌