ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲು ತಲುಪಿದ ಕೆಎಲ್ ರಾಹುಲ್!
KL Rahul 10,000 Runs: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಶನಿವಾರ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು. ಈ ಪಂದ್ಯದಲ್ಲಿ ಅವರು ಶತಕವನ್ನು ಬಾರಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ10,000 ರನ್ ಪೂರೈಸಿದ ಕೆಎಲ್ ರಾಹುಲ್. -
ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ನವ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ (IND vs WI) ಅವರು ಈ ಸಾಧನೆ ಮಾಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಕನ್ನಡಿಗ ಸೇರ್ಪಡೆಯಾದರು.
1992ರ ಏಪ್ರಿಲ್ 18ರಂದು ಜನಿಸಿದ ಕೆಎಲ್ ರಾಹುಲ್ ಅವರ 10,000 ಅಂತಾರಾಷ್ಟ್ರೀಯ ರನ್‌ಗಳ ಸಾಧನೆಯ ಪಯಣವು ಹೊಂದಿಕೊಳ್ಳುವಿಕೆ ಮತ್ತು ಸವಾಲುಗಳನ್ನು ಮೆಟ್ಟಿ ನಿಲ್ಲುವ ಗುಣದಿಂದ ಕೂಡಿದೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್, ಟೆಸ್ಟ್, ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
IND vs WI: 92 ರನ್‌ಗೆ ವಿಕೆಟ್ ಒಪ್ಪಿಸಿ ಸತತ ಎರಡನೇ ಶತಕ ಕಳೆದುಕೊಂಡ ರೋಹಿತ್ ಶರ್ಮಾ!
ವಿವಿಧ ಬ್ಯಾಟಿಂಗ್ ಕ್ರಮಾಂಕಗಳಲ್ಲಿ ಆಡುವುದರ ಜೊತೆಗೆ, ಅಗತ್ಯವಿದ್ದಾಗ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಒಡಿಐ ಪಂದ್ಯಕ್ಕೂ ಮುನ್ನ ರಾಹುಲ್ 241 ಅಂತಾರಾಷ್ಟ್ರೀಯ ಪಂದ್ಯಗಳ 280 ಇನಿಂಗ್ಸ್‌ಗಳಲ್ಲಿ ಒಟ್ಟು 9,965 ರನ್ ಗಳಿಸಿದ್ದರು. 10,000 ರನ್‌ಗಳ ಮೈಲುಗಲ್ಲು ತಲುಪಲು ಅವರಿಗೆ ಕೇವಲ 35 ರನ್‌ಗಳ ಅಗತ್ಯವಿತ್ತು. ಅದರಂತೆ ವಿಂಡೀಸ್ ಎದುರಿನ ಪಂದ್ಯದಲ್ಲಿ ಅವರು ಭರ್ಜರಿ ಶತಕದ ಇನಿಂಗ್ಸ್ ಆಡಿ ಆ ಗಡಿಯನ್ನು ದಾಟಿದ ರಾಹುಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲು ತಲುಪಿದ 15ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1️⃣0️⃣,0️⃣0️⃣0️⃣ of the most 𝗞𝗟𝗮𝘀𝘀𝘆 𝗿𝘂𝗻𝘀🫡#TeamIndia vice-captain KL Rahul reaches a magnificent milestone in international cricket 👏👉
— BCCI (@BCCI) October 3, 2026
Updates ▶️ https://t.co/PhSJSbvW7C#INDvWI | @mflone_ | @klrahul pic.twitter.com/YfGWdgCXBj
ಕೆಎಲ್ ರಾಹುಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಕಿಅಂಶಗಳು
ಟೆಸ್ಟ್ ಕ್ರಿಕೆಟ್: 70 ಪಂದ್ಯಗಳಲ್ಲಿ 4,288 ರನ್‌ಗಳು. ಇದರಲ್ಲಿ 12 ಶತಕಗಳು ಮತ್ತು 21 ಅರ್ಧಶತಕಗಳು ಸೇರಿವೆ.
ಏಕದಿನ ಕ್ರಿಕೆಟ್: 99 ಪಂದ್ಯಗಳಲ್ಲಿ 3,412 ರನ್‌ಗಳು. ಇದರಲ್ಲಿ 8 ಶತಕಗಳು ಮತ್ತು 20 ಅರ್ಧಶತಕಗಳು ದಾಖಲಾಗಿವೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್: 72 ಪಂದ್ಯಗಳಲ್ಲಿ 2,265 ರನ್‌ಗಳು. ಇದರಲ್ಲಿ 2 ಶತಕಗಳು ಮತ್ತು 22 ಅರ್ಧಶತಕಗಳು ಸೇರಿವೆ.
IND vs WI 3rd ODI: 7 ವರ್ಷಗಳ ಗೋಲ್ಡನ್ ಡಕ್‌ಔಟ್ ಆದ ಕಿಂಗ್ ವಿರಾಟ್ ಕೊಹ್ಲಿ!
ವಿವಿಧ ಮಾದರಿಗಳಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯ ಕೆಎಲ್ ರಾಹುಲ್ ಅವರ ಪ್ರಮುಖ ಬಲವಾಗಿದೆ. ಆರಂಭಿಕ ಆಟಗಾರನಾಗಿ ಇನಿಂಗ್ಸ್ ಆರಂಭಿಸುವುದರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವುದು ಹಾಗೂ ಅಗತ್ಯ ಸಂದರ್ಭದಲ್ಲಿ ವೇಗವಾಗಿ ರನ್ ಗಳಿಸುವವರೆಗೆ ಅವರು ವಿವಿಧ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಭಾರತೀಯ ತಂಡದ ಪ್ರಮುಖ ಆಟಗಾರನಾಗಿ ರಾಹುಲ್ ಅವರ ಕೊಡುಗೆ ಮಹತ್ವದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲು ತಲುಪಿರುವುದು ಅವರ ಸತತ ಪರಿಶ್ರಮ, ಸ್ಥಿರ ಪ್ರದರ್ಶನ ಮತ್ತು ಬ್ಯಾಟಿಂಗ್ ಕೌಶಲಕ್ಕೆ ಮತ್ತೊಂದು ಸಾಕ್ಷಿಯಾಗಿದೆ.