ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ತಂಡಕ್ಕೆ ಡಬಲ್‌ ಆಘಾತ, ಟಿ20ಐ ಸರಣಿಯನ್ನು ಗೆದ್ದು ಅಗ್ರ ಸ್ಥಾನಕ್ಕೇರಿದ ಇಂಗ್ಲೆಂಡ್!

IND vs ENG 5th T20I Highlights: ಜೋಸ್‌ ಬಟ್ಲರ್‌ ಹಾಗೂ ಹ್ಯಾರಿ ಬ್ರೂಕ್‌ ಅವರ ದಾಖಲೆಯ ಜೊತೆಯಾಟದ ಬಲದಿಂದ ಇಂಗ್ಲೆಂಡ್‌ ತಂಡ ಐದನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಒಂದೂ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾದ ಟೀಮ್‌ ಇಂಡಿಯಾ ಟಿ20ಐ ಸರಣಿಯಲ್ಲಿ ವೈಟ್‌ ವಾಷ್‌ ಆಘಾತ ಅನುಭವಿಸಿದೆ.

ಭಾರತದ ವಿರುದ್ಧ ಟಿ20ಐ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಇಂಗ್ಲೆಂಡ್‌.

ಸೌತ್‌ಹ್ಯಾಂಪ್ಟನ್‌: ಜೋಸ್‌ ಬಟ್ಲರ್‌ (Jos Buttler) ಹಾಗೂ ಹ್ಯಾರಿ ಬ್ರೂಕ್‌ (Harry Brook) ಅವರ ದಾಖಲೆಯ ಜೊತೆಯಾಟದ ಬಲದಿಂದ ಇಂಗ್ಲೆಂಡ್ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (IND vs ENG) ಭಾರತದ ಎದುರು 56 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟಿ20ಐ ಸರಣಿಯನ್ನು 4-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು ಹಾಗೂ ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಹ್ಯಾರಿ ಬ್ರೂಕ್‌ ನಾಯಕತ್ವದ ಆಂಗ್ಲರು ಭಾರತವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ನೀಡಿದ್ದ 258 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಭಿಷೇಕ್‌ ಶರ್ಮಾ ಕೇವಲ 3 ರನ್‌ ಗಳಿಸಿದ ಬಳಿಕ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. ವೈಭವ್‌ ಸ್ಥಾನದಲ್ಲಿ ಆಡಿದ ಸಂಜು (27 ರನ್‌, 14 ಎಸೆತಗಳು) ಉತ್ತಮ ಆರಂಭ ಪಡೆದರೂ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ (28) ಹಾಗೂ ಇಶಾನ್‌ ಕಿಶನ್‌ 55 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಉತ್ತಮ ಸ್ಥಿತಿಗೆ ತಂದಿದ್ದರು. ನಾಯಕ ಶ್ರೇಯಸ್‌ ಅಯ್ಯರ್‌ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

IND vs ENG: ಭರ್ಜರಿ ಶತಕದ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಜೋಸ್‌ ಬಟ್ಲರ್‌!

ಕಿಶನ್‌-ತಿಲಕ್‌ ಅರ್ಧಶತಕ

ಭಾರತ ತಂಡದ ಪರ ಇಶಾನ್‌ ಕಿಶನ್‌ ಹಾಗೂ ತಿಲಕ್‌ ವರ್ಮಾ ಕೆಲ ಕಾಲ ಇಂಗ್ಲೆಂಡ್‌ ಬೌಲರ್‌ಗಳನ್ನು ಬೇಟೆಯಾಡಿದ್ದರು.ಕಿಶನ್‌ 35 ಎಸೆತಗಳಲ್ಲಿ 56 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಕೊನೆಯಲ್ಲಿ ಅಬ್ಬರಿಸಿದ ತಿಲಕ್‌ ವರ್ಮಾ ಕೇವಲ 25 ಎಸೆತಗಳಲ್ಲಿ 53 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಭಾರತ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳಿಗೆ ಸೀಮಿತವಾಯಿತು. ಇಂಗ್ಲೆಂಡ್‌ ತಂಡದ ಪರ ಸ್ಯಾಮ್‌ ಕರನ್‌ 36 ರನ್‌ಗೆ 3 ವಿಕಟ್‌ ಕಿತ್ತರೆ, ಆದಿಲ್‌ ರಶೀದ್‌ 2 ವಿಕೆಟ್‌ ಕಿತ್ತರು.



ಹ್ಯಾರಿ ಬ್ರೂಕ್‌-ಜೋಸ್‌ ಬಟ್ಲರ್‌ ದಾಖಲೆಯ ಜೊತೆಯಾಟ

ಇದಕ್ಕೂ ಮುನ್ನ ಟಾಸ್‌ ಗೆದ್ದು ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಶ್ರೇಯಸ್‌ ಅಯ್ಯರ್‌ ಯೋಜನೆಯನ್ನು ಜೋಸ್‌ ಬಟ್ಲರ್‌ ಹಾಗೂ ಹ್ಯಾರಿ ಬ್ರೂಕ್‌ ಮಣ್ಣು ಪಾಲು ಮಾಡಿದರು. ಈ ಇಬ್ಬರೂ ಕ್ರೀಸ್‌ನಲ್ಲಿ ದೀರ್ಘಾವಧಿ ಭಾರತದ ಬೌಲರ್‌ಗಳನ್ನು ಕಾಡಿದರು.ಈ ಜೋಡಿ ಎರಡನೇ ವಿಕೆಟ್‌ಗೆ 103 ಎಸೆತಗಳಲ್ಲಿ 233 ರನ್‌ಗಳ ಜೊತೆಯಾಟವನ್ನು ಆಡಿತು. ಇದು ಇಂಗ್ಲೆಂಡ್‌ ಪರ ದಾಖಲಾದ ದೊಡ್ಡ ಜೊತೆಯಾಟವಾಗಿದೆ. ಈ ಇಬ್ಬರು ಜೊತೆಯಾಟದ ಬಲದಿಂದ ಇಂಗ್ಲೆಂಡ್‌ ತಂಡ 250ರ ಗಡಿ ದಾಟಲು ನೆರವು ನೀಡಿದರು.



ಭರ್ಜರಿ ಶತಕ ಸಿಡಿಸಿದ ಜೋಸ್‌ ಬಟ್ಲರ್‌

ಈ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದ ಜೋಸ್‌ ಬಟ್ಲರ್‌ ಅವರು ಐದನೇ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 64 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ12 ಬೌಂಡರಿಗಳೊಂದಿಗೆ 131 ರನ್‌ಗಳನ್ನು ದಾಖಳಿಸಿದರು. ಆ ಮೂಲಕ ತಮ್ಮ ಶತಕದ ಮೂಲಕ ಇಂಗ್ಲೆಂಡ್‌ಗೆ ನೆರವಾದರು. ಇವರ ಜೊತೆಗೆ ದಾಖಲೆಯ ಜೊತೆಯಾಟವನ್ನು ಆಡಿದ ನಾಯಕ ಹ್ಯಾರಿ ಬ್ರೂಕ್‌ ಅವರು, 45 ಎಸೆತಗಳಲ್ಲಿ ಅಜೇಯ 95 ರನ್‌ಗಳನು ಸಿಡಿಸಿದ್ದರು. ಆದರೆ, ಅವರು ಕೇವಲ 5 ರನ್‌ನಿಂದ ಶತಕ ವಂಚಿತರಾದರು. ಭಾರತದ ಪರ ಅರ್ಷದೀಪ್‌ ಸಿಂಗ್‌ ಸ್ವಲ್ಪ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದರೆ, ಇನ್ನುಳಿದ ಬೌಲರ್‌ಗಳು ದುಬಾರಿಯಾಗಿದ್ದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: 20 ಓವರ್‌ಗಳಿಗೆ 257-3 ( ಜೋಸ್‌ ಬಟ್ಲರ್‌ 131 ರನ್‌, ಹ್ಯಾರಿ ಬ್ರೂಕ್‌ 95* ರನ್‌; ಶಿವಂ ದುಬೇ 22 ಕ್ಕೆ 2)

ಭಾರತ: 20 ಓವರ್‌ಗಳಿಗೆ 201-8 (ಇಶಾನ್‌ ಕಿಶನ್‌ 56 ರನ್‌, ತಿಲಕ್‌ ವರ್ಮಾ 53 ರನ್‌, ಸಂಜು ಸ್ಯಾಮ್ಸನ್‌ 27 ರನ್‌, ಶ್ರೇಯಸ್‌ ಅಯ್ಯರ್‌ 28 ರನ್‌; ಸ್ಯಾಮ್‌ ಕರನ್‌ 36 ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೋಸ್‌ ಬಟ್ಲರ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಹ್ಯಾರಿ ಬ್ರೂಕ್