ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ಭರ್ಜರಿ ಶತಕದ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಜೋಸ್‌ ಬಟ್ಲರ್‌!

ಭಾರತ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್‌ ಬಳಿಕ ಕೊಹ್ಲಿ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಶತಕದ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಜೋಸ್‌ ಬಟ್ಲರ್‌!

‌ವಿರಾಟ್‌ ಕೊಹ್ಲಿ ದಾಖಲೆ ಮುರಿದ ಜೋಸ್‌ ಬಟ್ಲರ್. -

Profile
Ramesh Kote Jul 11, 2026 10:59 PM

ಸೌತ್‌ಹ್ಯಾಂಪ್ಟನ್‌: ಭಾರತ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (IND vs ENG) ಸ್ಪೋಟಕ ಶತಕ ಸಿಡಿಸಿದ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ (Jos Buttler) ಅವರು, ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ ಟಿ20ಐ ಕ್ರಿಕೆಟ್‌ನಲ್ಲಿ 4188 ರನ್‌ಗಳನ್ನು ಗಳಿಸಿದ ಬಳಿಕ ನಿವೃತ್ತಿ ಘೋಷಿಸಿದ್ದರು. ಇನ್ನು ಬಟ್ಲರ್‌ ಅವರು 147 ಇನಿಂಗ್ಸ್‌ಗಳಿಂದ 4212 ರನ್‌ಗಳ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದನೇ ಪಂದ್ಯಕ್ಕೂ ಮುನ್ನ ಕೊಹ್ಲಿಯನ್ನು ಹಿಂದಿಕ್ಕಲು 108 ರನ್‌ಗಳ ಅಗತ್ಯವಿತ್ತು. ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ ಜೋಸ್‌ ಬಟ್ಲರ್‌ ಅವರು, 64 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 131 ರನ್‌ಗಳನ್ನು ಚಚ್ಚಿದರು. ಜೋಸ್‌ ಬಟ್ಲರ್‌ ಅವರು ತಮ್ಮ 160ನೇ ಟಿ20ಐ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿಗಿಂತ ಬಟ್ಲರ್‌ 35 ಇನಿಂಗ್ಸ್‌ಗಳನ್ನು ಹೆಚ್ಚು ತೆಗೆದುಕೊಂಡಿದ್ದಾರೆ.

IND vs ENG: ಜೋಫ್ರಾ ಆರ್ಚರ್‌ ಎದುರು ವೈಭವ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಮೊಯೀನ್‌ ಅಲಿ!

233 ರನ್‌ಗಳ ಜೊತೆಯಾಟವನ್ನು ಆಡಿದ ಬ್ರೂಕ್‌-ಬಟ್ಲರ್‌

ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ಭಾರತೀಯ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 102 ಎಸೆತಗಳಲ್ಲಿ 233 ರನ್‌ಗಳ ಅಮೋಘ ಜೊತೆಯಾಟವನ್ನು ಆಡಿತು. ಈ ಭರ್ಜರಿ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ 250 ರನ್‌ಗಳ ಗಡಿ ದಾಟಿತು. ಜೋಸ್ ಬಟ್ಲರ್ 131 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್‌ 204.69ರ ಸ್ಟ್ರೈಕ್‌ರೇಟ್‌ನಲ್ಲಿ ಮೂಡಿ ಬಂದಿದೆ.

ಅತಿ ಹೆಚ್ಚು ಟಿ20ಐ ರನ್‌ ಗಳಿಸಿದ ಬ್ಯಾಟರ್ಸ್‌

ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಮ್‌ ಅಗ್ರಸ್ಥಾನದಲ್ಲಿದ್ದಾರೆ. ಆಝಮ್ 145 ಪಂದ್ಯಗಳಲ್ಲಿ 4,596 ರನ್ ಕಲೆಹಾಕಿದ್ದು, ಅವರ ಹೆಸರಿನಲ್ಲಿ ಮೂರು ಶತಕಗಳು ಮತ್ತು 39 ಅರ್ಧಶತಕಗಳು ದಾಖಲಾಗಿವೆ. 2026ರ ಟಿ20 ವಿಶ್ವಕಪ್ ಬಳಿಕ ಅವರನ್ನು ಪಾಕಿಸ್ತಾನ ಟಿ20 ತಂಡದಿಂದ ಕೈಬಿಡಲಾಗಿತ್ತು.

IND vs ENG: ಐದನೇ ಟಿ20ಐ ಪಂದ್ಯದ ಟಾಸ್‌ ತಡವಾಗಲು ಕಾರಣವೇನು?

ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್, 159 ಟಿ20 ಪಂದ್ಯಗಳಲ್ಲಿ 4,231 ರನ್ ಗಳಿಸಿದ್ದು, ಐದು ಶತಕಗಳು ಹಾಗೂ 32 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಒಂದು ಹಂತದಲ್ಲಿ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯೂ ರೋಹಿತ್ ಹೆಸರಿನಲ್ಲಿತ್ತು.



2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಕೆಲವೇ ನಿಮಿಷಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರೆ, ರೋಹಿತ್ ಶರ್ಮಾ ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ಟಿ20ಐ ಮಾದರಿಗೆ ವಿದಾಯ ಘೋಷಿಸಿದ್ದರು. ಸದ್ಯ ಇಬ್ಬರೂ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಐರ್ಲೆಂಡ್‌ನ ಅನುಭವಿ ಆಟಗಾರ ಪಾಲ್ ಸ್ಟಿರ್ಲಿಂಗ್ 3,895 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್‌ಗಳ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ.