ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್‌ ಔಟ್‌; ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡಕ್ಕೆ ಆಯ್ಕೆಯಾಗಬಲ್ಲ ಆಟಗಾರರ ವಿವರ!

ಮುಂಬರುವ 2026ರ ವಿಶ್ವಕಪ್‌ ಟೂರ್ನಿಗೆ ಆಯ್ಕೆ ಸಮಿತಿ ಡಿಸೆಂಬರ್‌ 20ರಂದು ಭಾರತ ತಂಡವನ್ನು ಪ್ರಕಟಿಸಲಿದ್ದು, ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಶುಭ್‌ಮನ್‌ ಗಿಲ್‌ ಅವರ ಕಳಪೆ ಫಾರ್ಮ್‌ ನಡುವೆಯೂ, ಆಯ್ಕೆ ಸಮಿತಿ ಸಂಜು ಸ್ಯಾಮ್ಸನ್‌ ಅವರಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.

ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆಯಾಗಬಲ್ಲ ಆಟಗಾರರ ವಿವರ!

ಟಿ20ಐ ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆಯಾಗಬಲ್ಲ ಆಟಗಾರರ ವಿವರ. -

Profile
Ramesh Kote Dec 19, 2025 4:08 PM

ಮುಂಬೈ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಟೂರ್ನಿಗೆ (T20 World Cup 2026) ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಡಿಸೆಂಬರ್‌ 26ರ ಶನಿವಾರ ಭಾರತ (India's T20I Squad) ತಂಡವನ್ನು ಪ್ರಕಟಿಸಲಿದೆ. ಇದಕ್ಕೂ ಮುನ್ನ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯ (IND vs SA) ನಡೆಯಲಿದೆ. ಇನ್ನು ಭಾರತ ತಂಡ ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ ಆಡಲಿದೆ. ಈ ಬಾರಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಹಾಲಿ ಚಾಂಪಿಯನ್ಸ್‌ ಟೀಮ್‌ ಇಂಡಿಯಾವನ್ನು ಸೂರ್ಯಕುಮಾರ್‌ ಯಾದವ್‌ ಮುನ್ನಡೆಸುತ್ತಿದ್ದಾರೆ. 2024ರಿಂದ ಇಲ್ಲಿಯವರೆಗೆ ಭಾರತ ತಂಡ 34 ಪಂದ್ಯಗಳನ್ನಾಡಿದ್ದು, 30 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ನಾಲ್ಕು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ.

ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಏಷ್ಯಾ ಕಪ್‌ ಟೂರ್ನಿಯಲ್ಲಿ ಶುಭ್‌ಮನ್‌ ಗಿಲ್‌ ತಂಡಕ್ಕೆ ಮರಳಿದ ಬಳಿಕ ಭಾರತದ ಅಗ್ರ ಕ್ರಮಾಂಕದಿಂದ ನಿರೀಕ್ಷಿತ ಪ್ರದರರ್ಶನ ಮೂಡಿ ಬರುತ್ತಿಲ್ಲ. ಅವರು 15 ಟಿ20 ಪಂದ್ಯಗಳನ್ನಾಡಿದ್ದು, ಕೇವಲ 291 ರನ್‌ ಕಲೆಹಾಕಿರುವ ಅವರ ಕಳಪೆ ಪ್ರದರ್ಶನ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿದೆ. ಆದರೆ, ಅವರ ಕಳಪೆ ಫಾರ್ಮ್‌ ನಡುವೆಯೂ ಅವರಿಗೆ ಆಯ್ಕೆ ಸಮಿತಿ ಮಣೆ ಹಾಕಲಿದೆ ಎನ್ನಲಾಗಿದೆ.

IPL 2026 Auction: 25.20 ಕೋಟಿ ರು ಪಡೆದ ಬೆನ್ನಲ್ಲೆ ಕೆಕೆಆರ್‌ಗೆ ನಿರಾಶೆ ಮೂಡಿಸಿದ ಕ್ಯಾಮೆರಾನ್‌ ಗ್ರೀನ್‌!

ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್‌ ಶರ್ಮಾ?

ಅಭಿಷೇಕ್‌ ಶರ್ಮಾ ಜೊತೆ ಶುಭ್‌ಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಲಿದ್ದು, ಯಶಸ್ವಿ ಜೈಸ್ವಾಲ್‌ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ. ನಾಯಕ ಸೂರ್ಯಕುಮಾರ್‌ ಯಾದವ್‌ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಜಿತೇಶ್‌ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್‌ ಮೀಸಲು ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿರಲಿದ್ದಾರೆ. 2024ರಲ್ಲಿ ಸಂಜು ಸ್ಯಾಮ್ಸನ್‌ ಮೂರು ಟಿ20 ಶತಕಗಳನ್ನು ಬಾರಿಸಿದ್ದಾರೆ. ಆದರೆ ಆಯ್ಕೆ ಸಮಿತಿ ಜಿತೇಶ್‌ ಶರ್ಮಾ ಅವರಿಗೆ ಪದೇ-ಪದೆ ಅವಕಾಶ ನೀಡುತ್ತಿದೆ. ಇನ್ನು ತಿಲಕ್‌ ವರ್ಮಾ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಕಣಕ್ಕಿಳಿದರೆ, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಕ್ರಮವಾಗಿ ಶಿವಂ ದುಬೆ ಮತ್ತು ಅಕ್ಷರ್‌ ಪಟೇಲ್‌ ಆಡಲಿದ್ದಾರೆ. ಬಳಿಕ ವಾಷಿಂಗ್ಟನ್‌ ಸುಂದರ್‌ ಆಡಬಹುದು.

IND vs SA: ಶುಭಮನ್‌ ಗಿಲ್‌ ಔಟ್‌, ಸಂಜು ಸ್ಯಾಮ್ಸನ್‌ ಇನ್‌? 5ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ರಿಂಕು ಸಿಂಗ್‌ ಅವರನ್ನು ಕೈ ಬಿಡಲಾಗಿದೆ. ಏಷ್ಯಾಕಪ್‌ ಆರಂಭವಾದಗಿನಿಂದಲೂ ಅವರು ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದ್ದಾರೆ. ಹೀಗಾಗಿ ಅವರು ಸತತ ಎರಡನೇ ಬಾರಿ ವಿಶ್ವಕಪ್‌ ಟೂರ್ನಿಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಕುಲ್‌ದೀಪ್‌ ಯಾದವ್ ಮತ್ತು ವರುಣ್‌ ಚಕ್ರವರ್ತಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ನಾಲ್ಕನೆಯ ಬೌಲರ್‌ ಆಗಿ ಹರ್ಷಿತ್‌ ರಾಣಾ ಕಣಕ್ಕಿಳಿಯುವ ಸಾಧ್ಯತೆಯಿದೆ.

2026 ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ಆಟಗಾರರ ತಂಡ: ಅಭಿಷೇಕ್‌ ಶರ್ಮಾ, ಶುಭ್‌ಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್)‌, ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಕುಲ್‌ದೀಪ್‌ ಯಾದವ್