ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ(IND vs AFG) 81 ರನ್ ಗಳಿಸಿದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಗುಣಗಾನ ಮಾಡಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರಾಗಿಯೂ ಅವರು ಭಾರತ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಆದರೆ, ಶತಕದಂಚಿನಲ್ಲಿ ಬಂದು ವಿಕೆಟ್ ಒಪ್ಪಿಸಿದ ಹಿನ್ನೆಲೆಯಲ್ಲಿ ಪಂತ್ ಅವರನ್ನು ಅಶ್ವಿನ್ ಟೀಕಿಸಿದ್ದಾರೆ. ನೀವು ಟೆಸ್ಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದು, ಇಂಥಾ ಅವಕಾಶಗಳಲ್ಲಿ ಶತಕವನ್ನು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.
"ನೀವು ತುಂಬಾ ಸಲ 80 ಹಾಗೂ 90ರ ಸನಿಹದಲ್ಲಿ ಔಟ್ ಆಗಿದ್ದೀರಿ. ಇಂತಹ ದರ್ಜೆಯ ಶ್ರೇಷ್ಠ ಟೆಸ್ಟ್ ಬ್ಯಾಟರ್‌ರನ್ನು ಹುಡುಕುವುದು ಅಥವಾ ಕಂಡುಹಿಡಿಯುವುದು ಅತ್ಯಂತ ಕಷ್ಟಕರ. 80 ರನ್‌ಗಳಲ್ಲಿರುವಾಗ ಇಂತಹ ಶಾಟ್ ಆಡುವುದು ನಿಜಕ್ಕೂ ಅಚ್ಚರಿಯ ವಿಷಯ. 80 ರನ್ ಗಳಿಸಿದ ಬಳಿಕ ಇನ್ನೂ 20 ರನ್‌ಗಳನ್ನು ಸೇರಿಸಿ ಆಟ ಮುಂದುವರಿಸಲು ಸಾಧ್ಯವಿಲ್ಲವೇ? ತಪ್ಪಾದ ಸಮಯದಲ್ಲಿ ಆಡುವ ಅರ್ಥಗರ್ಭಿತವಲ್ಲದ ಶಾಟ್‌ಗಳ ಮೂಲಕ ಅವರು ಭಾರತಕ್ಕೆ ಹಲವು ಬಾರಿ ನಷ್ಟ ಉಂಟುಮಾಡಿದ್ದಾರೆ. ಬ್ಯಾಟರ್ ಆಗಿ ಅವರು ಇನ್ನಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಅವರು ಹಲವು ಬಾರಿ ಪಡೆದಿರುವ 80 ರನ್‌ಗಳ ಇನಿಂಗ್ಸ್‌ಗಳನ್ನು ಶತಕಗಳಾಗಿ ಪರಿವರ್ತಿಸಿದ್ದರೆ, ಅವರ ಅಂಕಿಅಂಶಗಳು ನಂಬಲಸಾಧ್ಯವಾಗಿರುತ್ತಿತ್ತು," ಎಂದು ಅವರು ಹೇಳಿದರು.
ʻಆರ್‌ಸಿಬಿಗೆ ಸೇರ್ಪಡೆಯಾಗಲು ನನಗೆ ಇಷ್ಟವಿರಲಿಲ್ಲʼ: ಹಳೆಯ ದಿನಗಳನ್ನು ಮೆಲುಕು ಹಾಕಿದ ರಜತ್ ಪಾಟಿದಾರ್!
"ಎಲ್ಲಾ ಬ್ಯಾಟರ್‌ಗಳೂ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅವರು (ಪಂತ್) ಅದನ್ನು ಮಾಡುವ ಪ್ರಮಾಣವೇ ನಿರಾಶೆ ಉಂಟುಮಾಡುತ್ತದೆ. ವಿಶೇಷವಾಗಿ ಅನೇಕರು ಇದು ತಪ್ಪು ಎಂದು ಹೇಳಿದ್ದರೂ, ಅದನ್ನೇ ಮತ್ತೆ ಮತ್ತೆ ಮುಂದುವರಿಸುವುದು ನನಗೆ ಒಪ್ಪಿಗೆಯಲ್ಲ. ಅವರು ಈಗಾಗಲೇ 50ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಹಲವು ಸಂದರ್ಭಗಳಲ್ಲಿ ತಂಡದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಗೆ ತಕ್ಕಂತೆ ಆಟ ಆಡಲು ಅವರು ಆರಂಭಿಸಬೇಕು," ಎಂದು ಅವರು ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ರಿಷಭ್ ಪಂತ್ ಅವರ ದೊಡ್ಡ ಅಭಿಮಾನಿ ಎಂಬ ಅಂಶವನ್ನು ಅನ್ನು ಮರೆ ಮಾಚುವುದಿಲ್ಲ. ಶುಭಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಅವರಿಗಿಂತ ಅಗ್ರ ದರ್ಜೆಯಲ್ಲಿದ್ದಾರೆಂಬ ಅಂಶವನ್ನು ತಮಿಳುನಾಡು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
"ಅವರು (ಪಂತ್) ನಿಜವಾಗಿಯೂ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟರ್. ಅವರು ರಕ್ಷಣಾತ್ಮಕವಾಗಿ ಆಡಿದಾಗ ಅದು ಎಷ್ಟು ಉತ್ತಮವಾಗಿರುತ್ತದೆ ಎಂದರೆ ಸುನೀಲ್ ಗವಾಸ್ಕರ್ ಕೂಡ ಅದರಿಂದ ಪ್ರಭಾವಿತರಾಗುತ್ತಾರೆ. ಅವರು ರಕ್ಷಣಾತ್ಮಕ ಶಾಟ್ ಆಡಿದಾಗ, ಚೆಂಡೇ ಕ್ರೀಸ್‌ನಿಂದ ದೂರ ಹೋಗಬಹುದೇ ಎಂದು ಕೇಳುವಂತೆ ಆಗುತ್ತದೆ. ಚೆಂಡು ಎಷ್ಟು ವೇಗವಾಗಿ ಬಂದರೂ ಅದನ್ನು ಎದುರಿಸಲು ಅವರ ಬಳಿ ಅಪಾರ ಸಮಯ ಇರುತ್ತದೆ," ಎಂದು ಅಶ್ವಿನ್ ಹೇಳಿದ್ದಾರೆ.
ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಂದ ಮೊಹಮ್ಮದ್ ಸಿರಾಜ್ ವಿಶ್ರಾಂತಿ!
"ರಕ್ಷಣಾತ್ಮಕವಾಗಿ ಆಡಲು ನಿಮಗೆ ಸಾಕಷ್ಟು ಸಮಯವಿರುತ್ತದೆ ಹಾಗೂ ನಿಮಗೆ ಇಷ್ಟಬಂದ ರೀತಿ ಶಾಟ್ ಅನ್ನು ಆಡಿ ಎಂದು ನಾನು ಪಂತ್‌ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ನಿಮ್ಮನ್ನು ನೀವೇ ಏಕೆ ಔಟ್ ಮಾಡಿಕೊಳ್ಳುತ್ತೀರಿ? ನಿಮ್ಮದು ಇದು ಸ್ವಾಭವಿಕ ಆಟ ಎಂದು ಹಲವರು ಹೇಳುತ್ತಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಶೇಕಡಾವಾರು ಸ್ವಾಭವಿಕ ಆಟವನ್ನು ಆಡಬೇಕಾಗುತ್ತದೆ. ಒಂದು ಉತ್ತಮ ಪರ್ಸೆಂಟೇಜ್ ಶಾಟ್ ಎಂದರೆ ಅದರ ಯಶಸ್ಸಿನ ಸಾಧ್ಯತೆ ಸುಮಾರು 70% ಇದೆ ಎಂಬುದನ್ನು ತಿಳಿದುಕೊಳ್ಳುವುದೆ. ನೀವು ಫೀಲ್ಡರ್‌ಗಳು ಬೌಂಡರಿಯಲ್ಲಿ ನಿಂತಿರುವಾಗ ಅವರ ಮೇಲೆ ಚೆಂಡನ್ನು ಹೊಡೆಯಲು ಯತ್ನಿಸಿದರೆ, ಅದು ಯಾವುದೇ ರೀತಿಯ ‘ಪರ್ಸೆಂಟೇಜ್ ಶಾಟ್’ ಅಲ್ಲ," ಎಂದು ಅವರು ಹೇಳಿದರು.