ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಂದ ಮೊಹಮ್ಮದ್ ಸಿರಾಜ್ ವಿಶ್ರಾಂತಿ!
ಮೊಹಮ್ಮದ್ ಸಿರಾಜ್ ಅವರನ್ನು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಯೋಜನೆಯ ಭಾಗವಾಗಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಭಾರತದ ಟಿ20 ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಮುಂದಿರುವ ದೀರ್ಘ ಸೀಮಿತ ಓವರ್‌ಗಳ ಕ್ರಿಕೆಟ್ ಋತುವನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ತನ್ನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಸಿರಾಜ್ ಅವರ ಸ್ಥಾನಕ್ಕೆ ಪ್ರಸಿಧ್ ಕೃಷ್ಣ ಅವರನ್ನು ಟಿ20 ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಐರ್ಲೆಂಡ್, ಇಂಗ್ಲೆಂಡ್ ಟಿ20ಐ ಸರಣಿಗಳಿಂದ ಸಿರಾಜ್‌ಗೆ ವಿಶ್ರಾಂತಿ. -
ನವದೆಹಲಿ: ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಯೋಜನೆಯ ನಿಮಿತ್ತ ಭಾರತ ತಂಡದ (Indian Cricket Team) ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಅವರು ಯುಕೆ ಪ್ರವಾಸದ ಟಿ20ಐ ಸರಣಿಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ. ಭಾರತ ತಂಡ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಮುಂಬರುವ ಪ್ರವಾಸದಲ್ಲಿ ವೈಟ್ ಸರಣಿಗಳನ್ನು ಆಡಲಿದೆ. ಆದರೆ, ಮೊಹಮ್ಮದ್ ಸಿರಾಜ್ ಅವರನ್ನು ಒಡಿಐ ಸರಣಿಯಲ್ಲಿ ಆಡಲಿದ್ದು, ಅದಕ್ಕಾಗಿ ಅವರು ಟಿ20ಐ ಸರಣಿಗಳಿಂದ ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಬಿಸಿಸಿಐ ಖಚಿತಪಡಿಸಿದೆ.
"ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಗಾಗಿ ಆಯ್ಕೆಯಾದ ಭಾರತ ತಂಡಗಳಿಂದ ಹಿಂಪಡೆಯಲಾಗಿದೆ," ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
"ಬಿಸಿಸಿಐ ವೈದ್ಯಕೀಯ ತಂಡ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಚರ್ಚೆಯ ಬಳಿಕ, ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದ ಭಾಗವಾಗಿ ಸಿರಾಜ್ ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ. ದೀರ್ಘ ಅಂತಾರಾಷ್ಟ್ರೀಯ ಋತುವಿಗೂ ಮುನ್ನ ಅವರು ಸಮರ್ಪಕವಾಗಿ ಚೇತರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ," ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಅಫ್ಘಾನಿಸ್ತಾನ ಏಕದಿನ ಸರಣಿಯನ್ನು ಆಡಲು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಗೆ ಗ್ರೀನ್ ಸಿಗ್ನಲ್!
ಮೊಹಮ್ಮದ್ ಸಿರಾಜ್ ಸ್ಥಾನಕ್ಕೆ ಪ್ರಸಿಧ್ ಕೃಷ್ಣ
ಬಿಸಿಸಿಐ, ಪುರುಷರ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರ ಬದಲಿಯಾಗಿ ಪ್ರಸಿಧ್ ಕೃಷ್ಣ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡೂ ಟಿ20 ಸರಣಿಗಳಿಗಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದೆ. ಈ ನಿರ್ಧಾರದ ಮೂಲಕ ಭಾರತ ತಂಡ, ಅನುಭವಿ ವೇಗದ ಬೌಲಿಂಗ್ ಆಯ್ಕೆಯನ್ನು ಉಳಿಸಿಕೊಂಡಿದ್ದು, ಮತ್ತೊಂದೆಡೆ ಸಿರಾಜ್ ಅವರಿಗೆ ಚೇತರಿಸಿಕೊಳ್ಳಲು ಅಗತ್ಯ ಸಮಯವನ್ನು ಒದಗಿಸಿದೆ. ಅವರು ಪ್ರವಾಸದ ಏಕದಿನ (ಒಡಿಐ) ಸರಣಿಗೆ ಮರಳುವ ನಿರೀಕ್ಷೆಯಿದೆ.
ಇತ್ತೀಚೆಗೆ ಸಿರಾಜ್ ಅವರು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ಅವರು ಒಂದು ವಿಕೆಟ್ ಪಡೆದಿದ್ದಲ್ಲದೆ, ಬ್ಯಾಟಿಂಗ್‌ನಲ್ಲಿ 22 ರನ್‌ಗಳ ಕೊಡುಗೆ ನೀಡಿದ್ದರು. ಬೌಲಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದರೂ, ತಮ್ಮ ವಿಶಿಷ್ಟ ಆಕ್ರಮಣಕಾರಿ ಮನೋಭಾವ ಮತ್ತು ತೀವ್ರತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದರು.
🚨 News 🚨
— BCCI (@BCCI) June 9, 2026
Prasidh Krishna replaces Mohd. Siraj in #TeamIndia's T20I squads for Ireland & England.
Siraj has been advised a period of rest as part of his workload management programme.
More Details 🔽 | #IREvIND | #ENGvINDhttps://t.co/LNPOVVVHq5
ಇದೇ ಪಂದ್ಯದಲ್ಲಿ ಪ್ರಸಿಧ್ ಕೃಷ್ಣ ಕೂಡ ಕಣಕ್ಕಿಳಿದು 43 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಭಾರತದ ಪರ ಅವರ ಕೊನೆಯ ಟಿ20ಐ ಪಂದ್ಯವು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗುವಾಹಟಿಯಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಅವರು ವಿಕೆಟ್ ಪಡೆಯಲು ವಿಫಲರಾಗಿ 68 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
ಐರ್ಲೆಂಡ್, ಇಂಗ್ಲೆಂಡ್ ಟಿ20ಐ ಸರಣಿಗಳಿಗೆ ಪರಿಷ್ಕೃತ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವೈಭವ ಸೂರ್ಯವಂಶಿ, ಪ್ರಸಿಧ್ ಕೃಷ್ಣ