ಅಹಮದಾಬಾದ್: ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ನಾಲ್ಕನೇ ಟಿ20ಐ ಪಂದ್ಯ ದಟ್ಟ ಮಂಜಿನ ಕಾರಣ ಟಾಸ್ ಕಾಣದೆ ರದ್ದಾಗಿತ್ತು. ಆ ಮೂಲಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ (IND vs SA) ಆಟಗಾರರು ಹಾಗೂ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿತ್ತು. ಇದೀಗ ಡಿಸೆಂಬರ್ 19 ರಂದು ಅಹಮಾದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲು ಉಭಯ ತಂಡಗಳು ಸಜ್ಜಾಗುತ್ತಿವೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ 2-1 ಅಂತರದಲ್ಲಿ ಟಿ20ಐ ಸರಣಿಯಲ್ಲಿ ಮುನ್ನಡೆಯನ್ನು ಪಡೆದಿದೆ. ಇದೀಗ ಐದನೇ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ 3-1 ಅಂತರದಲ್ಲಿ ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ಗೆದ್ದರೆ, ಸರಣಿ 2-2 ಅಂತರದಲ್ಲಿ ಡ್ರಾ ಮಾಡಿಕೊಳ್ಳಲಿದೆ.
ನಾಲ್ಕನೇ ಟಿ20ಐ ಪಂದ್ಯದ ನಿಮಿತ್ತ ಅಭ್ಯಾಸ ನಡೆಸುತ್ತಿದ್ದ ವೇಳೆ ಶುಭಮನ್ ಗಿಲ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಐದನೇ ಪಂದ್ಯಕ್ಕೂ ಅವರು ಲಭ್ಯರಾಗುವುದು ಬಹುತೇಕ ಅನುಮಾನ. ಹಾಗಾಗಿ ಸಂಜು ಸ್ಯಾಮ್ಸನ್ ಅವರು, ಅಭಿಷೇಕ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಬಹುದು. ಮತ್ತೊಂದು ಕಡೆ ಜಸ್‌ಪ್ರೀತ್ ಬುಮ್ರಾ ಕೂಡ ಲಭ್ಯರಾಗುವುದು ಅನುಮಾನ. ಹಾಗಾಗಿ ನಾಯಕ ಸೂರ್ಯಕುಮಾರ್ ಯಾದವ್ ಬೆಂಚ್ ಕಾಯುತ್ತಿರುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
IND vs SA 4th T20I: ಏಕನಾ ಕ್ರೀಡಾಂಗಣದಲ್ಲಿ ದಟ್ಟ ಮಂಜು, ನಾಲ್ಕನೇ ಪಂದ್ಯ ರದ್ದು!
ಏಷ್ಯಾ ಕಪ್ ಟೂರ್ನಿಯ ವೇಳೆ ಶುಭಮನ್ ಗಿಲ್ ಭಾರತ ಟಿ20 ತಂಡಕ್ಕೆ ಮರಳಿದ್ದರು ಹಾಗೂ ಅವರು ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅಲ್ಲದೆ ಸಂಜು ಸ್ಯಾಮ್ಸನ್ ಬದಲು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಾನವನ್ನು ಪಡೆದಿದ್ದರು. ಅಂದಿನಿಂದ ಇಲ್ಲಿಯವರೆಗೂ ಸಂಜು ಸ್ಯಾಮ್ಸನ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ XIನಲ್ಲಿ ನಿಯಮಿತವಾಗಿ ಅವಕಾಶ ಸಿಗುತ್ತಿಲ್ಲ. ಇದೀಗ ಗಿಲ್ ಕಾರಣ ಸಂಜುಗೆ ಅಗ್ರ ಕ್ರಮಾಂಕದಲ್ಲಿ ಆಡಲು ಅವಕಾಶ ಸಿಗುತ್ತಿದೆ. ಈ ಅವಕಾಶದಲ್ಲಿ ಅವರು ದೊಡ್ಡ ಇನಿಂಗ್ಸ್ ಆಡಿದರೆ, ಅವರ ಸ್ಥಾನ ಗಟ್ಟಿಯಾಗಬಹುದು. ಏಕೆಂದರೆ ಗಿಲ್ ಅವರು ಟಿ20ಐ ತಂಡದಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.
IND vs SA: ವಿರಾಟ್ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿರುವ ಅಭಿಷೇಕ್ ಶರ್ಮಾ!
ಐದನೇ ಟಿ20ಐ ಪಂದ್ಯಕ್ಕೆ ಜಸ್‌ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಅವರು ವೈಯಕ್ತಿಕ ಕಾರಣಗಳಿಂದ ಮೂರನೇ ಟಿ20ಐ ಪಂದ್ಯಕ್ಕೆ ಅಲಭ್ಯರಾಗಿದ್ದರು. ನಾಲ್ಕನೇ ಟಿ20ಐ ಪಂದ್ಯದಲ್ಲಿ ಆಡುವ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಇವರಿಗೆ ಆಲ್‌ರೌಂಡರ್‌ಗಳಾದ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದರು. ಭಾರತ ತಂಡ ಅದೇ ಪ್ಲೇಯಿಂಗ್ XIನಲ್ಲಿ ಅದೇ ವೇಗದ ಬೌಲಿಂಗ್ ವಿಭಾಗವನ್ನು ಉಳಿಸಿಕೊಂಡರೂ ಯಾವುದೇ ಅಚ್ಚರಿ ಇಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ ಐದನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಅಭಿಷೇಕ್ ಶರ್ಮಾ (ಓಪನರ್)
2.ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್, ಓಪನರ್)
3.ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
4.ಸೂರ್ಯಕುಮಾರ್ ಯಾದವ್ (ನಾಯಕ, ಬ್ಯಾಟ್ಸ್‌ಮನ್)
5.ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
6.ಶಿವಂ ದುಬೆ (ಆಲ್‌ರೌಂಡರ್)
7.ಜಿತೇಶ್ ಶರ್ಮಾ (ವಿಕೆಟ್ ಕೀಪರ್/ಬ್ಯಾಟ್ಸ್‌ಮನ್)
8.ಹರ್ಷಿತ್ ರಾಣಾ (ವೇಗದ ಬೌಲರ್)
9.ಅರ್ಷದೀಪ್ ಸಿಂಗ್ (ವೇಗದ ಬೌಲರ್)
10.ಕುಲ್ದೀಪ್ ಯಾದವ್ (ಸ್ಪಿನ್ನರ್)
11.ವರುಣ್ ಚಕ್ರವರ್ತಿ (ಸ್ಪಿನ್ನರ್)