ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್‌ ಸರಣಿಯಿಂದ ಭಾರತದ ಬ್ಯಾಟರ್‌ ಸಾಯಿ ಸುದರ್ಶನ್‌ ಗಾಯದ ಕಾರಣ ಹೊರಗುಳಿದಿದ್ದಾರೆ. ಆ ಮೂಲಕ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ಭಾರತ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಸುದರ್ಶನ್‌ ಅನುಪಸ್ಥಿತಿಯಿಂದ ಮೂರನೇ ಕ್ರಮಾಂಕ ಖಾಲಿಯಾಗಿದ್ದು, ಅವರ ಸ್ಥಾನದಲ್ಲಿ ಕನ್ನಡಿಗ ದೇವದತ್‌ ಪಡಿಕ್ಕಲ್‌ ಆಡುವ ಸಾಧ್ಯತೆ ಇದೆ.

ಶ್ರೀಲಂಕಾ ಎದುರು ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌.

ನವದೆಹಲಿ: ಗಾಯಕ್ಕೆ ತುತ್ತಾಗಿರುವ ಕಾರಣ ಭಾರತ ತಂಡದ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ (Sai Sudarshan) ಅವರು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ (IND vs SL) ಹೊರಬಿದ್ದಿದ್ದಾರೆ. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಮುಂದುವರಿಸಲು ಎದುರು ನೋಡುತ್ತಿದ್ದ ಪ್ರವಾಸಿ ಭಾರತ ತಂಡಕ್ಕೆ ಇದೀಗ ಮತ್ತೊಂದು ಆಘಾತವಾಗಿದೆ. ಅದರಂತೆ ಭಾರತ ತಂಡದಲ್ಲಿ ಗಾಯಾಳುಗಳ ಪಟ್ಟಿ ದೊಡ್ಡದಾಗುತ್ತಲೇ ಇದೆ. ಇದಿಗ ಸಾಯಿ ಸುದರ್ಶನ್‌ ಅವರ ಅಲಭ್ಯತೆಯು ಭಾರತ ತಂಡದ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬ ತಲೆ ನೋವು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಉಂಟಾಗಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ನಂ.3 ಸ್ಥಾನಕ್ಕೆ ದೇವದತ್ ಪಡಿಕ್ಕಲ್‌ ಪ್ರಮುಖ ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಎರಡನೇ ದಿನ ಎಡಗೈ ಬ್ಯಾಟರ್‌ ಪಡಿಕ್ಕಲ್‌ ತಮ್ಮ ಅದ್ಭುತ ಬ್ಯಾಟಿಂಗ್‌ ಮೂಲಕ ಶತಕ ಸಿಡಿಸಿದರು. ಆ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಶತಕದ ಮೂಲಕ ಅವರು ಮೂರನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರರ ರೇಸ್‌ನಲ್ಲಿ ಪಡಿಕ್ಕಲ್‌ ಮುಂಚೂಣಿಯಲ್ಲಿದ್ದಾರೆ.

IPL 2027: ಜಾಶ್‌ ಹೇಝಲ್‌ವಡ್‌ ಔಟ್‌, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

ಸಾಯಿ ಸುದರ್ಶನ್‌ಗೂ ಮುನ್ನ ತಂಡದ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕೂಡ ಸರಣಿಗೆ ಅಲಭ್ಯರಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಬುಮ್ರಾ ಗಾಯಗೊಂಡಿದ್ದರು. ಬಳಿಕ ಜುಲೈ 30ರವರೆಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ, ತನ್ನ ಪ್ರಮುಖ ಮ್ಯಾಚ್‌ ವಿನ್ನರ್‌ಗಳಲ್ಲಿ ಒಬ್ಬರ ಸೇವೆಯನ್ನು ಕಳೆದುಕೊಂಡಿದೆ.

ಇದರ ಜೊತೆಗೆ ಹರ್ಷಿತ್‌ ರಾಣಾ, ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ವಾಷಿಂಗ್ಟನ್‌ ಸುಂದರ್‌ ಕೂಡ ಗಾಯದ ಕಾರಣ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯಾಳುಗಳ ಪಟ್ಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿರುವ ಆಯ್ಕೆ ಸಮಿತಿ ಹಾಗೂ ತಂಡದ ಆಡಳಿತ ಮಂಡಳಿ ಲಭ್ಯವಿರುವ ಆಟಗಾರರ ಆಯ್ಕೆ ಕುರಿತು ಮತ್ತಷ್ಟು ಪರಿಶೀಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.

'ನಾನು ಫಿಟ್‌ ಆಗದಿರಬಹುದು'; ಸರ್ಫರಾಜ್ ಖಾನ್ ನಿಗೂಢ ಪೋಸ್ಟ್ ವೈರಲ್

ಭಾರತ ತಂಡದ ಪ್ರಕಟಣೆಯ ಸಂದರ್ಭದಲ್ಲೇ ಸಾಯಿ ಸುದರ್ಶನ್‌ ಅವರ ಲಭ್ಯತೆಯ ಬಗ್ಗೆ ಬಿಸಿಸಿಐ ಅನುಮಾನ ವ್ಯಕ್ತಪಡಿಸಿತ್ತು. ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸುದರ್ಶನ್‌ಗೆ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಿಂದ ಫಿಟ್ನೆಸ್‌ ಕ್ಲಿಯರೆನ್ಸ್‌ ದೊರೆಯುವುದನ್ನು ಆಧರಿಸಿ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಇದೀಗ ಅವರು ಸರಣಿಯಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ.

ಈ ಪರಿಸ್ಥಿತಿಯಲ್ಲಿ ಮೊದಲ ಟೆಸ್ಟ್‌ಗೂ ಮುನ್ನ ಭಾರತ ತಂಡದ ಮುಂದೆ ಹಲವು ಪ್ರಶ್ನೆಗಳಿವೆ. ವಿಶೇಷವಾಗಿ ಬ್ಯಾಟಿಂಗ್‌ ಕ್ರಮ ಹಾಗೂ ತಂಡದ ಸಮತೋಲನ ಪ್ರಮುಖ ಚರ್ಚೆಯ ವಿಷಯವಾಗಿದೆ. ಇದೇ ವೇಳೆ ಅಭ್ಯಾಸ ಪಂದ್ಯದ ಎರಡನೇ ದಿನ ದೇವದತ್‌ ಪಡಿಕ್ಕಲ್‌ ಶತಕ ಸಿಡಿಸಿರುವುದು ತಂಡದ ಆಡಳಿತ ಮಂಡಳಿಗೆ ಸೂಕ್ತ ಸಮಯದಲ್ಲಿ ಉತ್ತಮ ಆಯ್ಕೆಯೊಂದನ್ನು ಒದಗಿಸಿದೆ. ಹೀಗಾಗಿ ನಂ.3 ಸ್ಥಾನಕ್ಕೆ ಪಡಿಕ್ಕಲ್‌ ಅವರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.

ರಿಷಭ್‌ ಪಂತ್‌ ತಡರಾತ್ರಿಯ ಮನವಿಗೆ ಸ್ಪಂದಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಡಬ್ಲ್ಯುಟಿಸಿ ಫೈನಲ್‌ ನಿಮಿತ್ತ ಭಾರತಕ್ಕೆ ಈ ಸರಣಿ ಅತ್ಯಂತ ಮಹತ್ವ

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಅಂಕಪಟ್ಟಿಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಸದ್ಯ ಭಾರತ ತಂಡ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಆರನೇ ಸ್ಥಾನದಲ್ಲಿದೆ. ಹೀಗಾಗಿ 2027ರ ಡಬ್ಲ್ಯುಟಿಸಿ ಫೈನಲ್‌ ರೇಸ್‌ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಉಭಯ ತಂಡಗಳಿಗೂ ಈ ಸರಣಿ ಮಹತ್ವದ ಅವಕಾಶವಾಗಿದೆ.