IPL 2027: ಜಾಶ್ ಹೇಝಲ್‌ವಡ್ ಔಟ್, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್ ಆಟಗಾರರು ಅಲಭ್ಯ?
ಮುಂದಿನ 12 ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ 20 ಟೆಸ್ಟ್ ಪಂದ್ಯಗಳು ಹಾಗೂ 14 ವೈಟ್-ಬಾಲ್ ಪಂದ್ಯಗಳನ್ನು ಆಡಲಿದೆ. ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡುವಿನ ಅವಧಿಯಲ್ಲಿ 2027ರ ಐಪಿಎಲ್ ವೇಳಾಪಟ್ಟಿ ಎದುರಾಗಲಿದೆ. ಹಾಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಶಸ್ ಸರಣಿಗೆ ಸಜ್ಜಾಗಲಿದೆ.
2027ರ ಐಪಿಎಲ್ ಟೂರ್ನಿಗೆ ಆಸೀಸ್ ಆಟಗಾರರು ಅಲಭ್ಯ? -
ನವದೆಹಲಿ: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ ತಂಡದ (Australia Cricket Team) ಟೆಸ್ಟ್ ಹಾಗೂ ವೈಟ್‌ಬಾಲ್ ಸರಣಿಗಳ ಬಿಡುವಿಲ್ಲದೆ ವೇಳಾಪಟ್ಟಿ ಹಾಗೂ ಆಟಗಾರರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಆಸೀಸ್ ಆಟಗಾರರು ಭಾರತದಲ್ಲಿ ಫ್ರಾಂಚೈಸಿ ಲೀಗ್‌ಗೆ ಲಭ್ಯರಾಗುವುದು ಅನುಮಾನ ಎಂದು ವರದಿಯಾಗಿದೆ. ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಆರಂಭವಾಗುವ ಮೂಲಕ ಆಸ್ಟ್ರೇಲಿಯಾ ತಂಡ 20 ಟೆಸ್ಟ್ ಪಂದ್ಯಗಳು, 14 ವೈಟ್ ಬಾಲ್ ಪಂದ್ಯಗಳನ್ನು ಮುಂದಿನ 12 ತಿಂಗಳುಗಳಲ್ಲಿ ಆಡಲಿದೆ. ಭಾರತ ವಿರುದ್ದದ ಟೆಸ್ಟ್ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿ ನಡುವೆ 2027ರ ಐಪಿಎಲ್ ಟೂರ್ನಿ ನಡೆಯಲಿದೆ. ಇದು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಕಠಿಣವಾಗಲಿದೆ.
“ಐಪಿಎಲ್ ಬಗ್ಗೆ ಜನರು ಮಾತನಾಡಲು ಆರಂಭಿಸುತ್ತಾರೆ. ಆ ಅವಧಿಯನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಅದಕ್ಕಾಗಿ ಯಾವ ರೀತಿಯ ಯೋಜನೆ ರೂಪಿಸಬೇಕು ಎಂಬ ಚರ್ಚೆಯೂ ನಡೆಯುತ್ತದೆ,” ಎಂದು ಆಸ್ಟ್ರೇಲಿಯಾ ಹೆಡ್ ಕೋಚ್ ಮೆಕ್‌ಡೊನಾಲ್ಡ್ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.
“ನಾನು ಈ ಬಗ್ಗೆ ಈ ಹಿಂದೆಯೂ ಹೇಳಿದ್ದೇನೆ. ನಮ್ಮ ಹಲವು ಆಟಗಾರರ ನಿರ್ವಹಣಾ ಯೋಜನೆಯ ಭಾಗವಾಗಿಯೇ ಐಪಿಎಲ್ ಇದೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸ್ಪರ್ಧೆ ಎಂದು ನಾನು ನಂಬಿರುವ ಐಪಿಎಲ್ ಟೂರ್ನಿಯಲ್ಲಿ ನಮ್ಮ ಅತ್ಯುತ್ತಮ ಆಟಗಾರರಿಗೆ ಆಡುವ ಅವಕಾಶ ನೀಡುವುದರಿಂದ ಅವರ ಪ್ರದರ್ಶನದ ದೃಷ್ಟಿಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಎಲ್ಲವನ್ನೂ ಸಮತೋಲನಗೊಳಿಸಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.
ʻಅವರ ಮೇಲೆ ತುಂಬಾ ಕೋಪ ಬಂದಿತ್ತುʼ: ಸಂಜಯ್ ಮಾಂಜ್ರೇಕರ್ ಜತೆ ಮಾತು ಬಿಟ್ಟಿದ್ದೇಕೆಂದು ತಿಳಿಸಿದ ಆರ್ ಅಶ್ವಿನ್!
ಸದ್ಯ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್, ಕ್ಯಾಮೆರಾನ್ ಗ್ರೀನ್ ಮತ್ತು ಟ್ರಾವಿಸ್ ಹೆಡ್ ಅವರು ಐಪಿಎಲ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಇದರ ಜೊತೆಗೆ ಜಾಶ್ ಇಂಗ್ಲಿಸ್ ಕೂಡ ಲಖನೌ ಸೂಪರ್ ಜಯಂಟ್ಸ್ ತಂಡದ ಭಾಗವಾಗಿದ್ದಾರೆ.
2023ರಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಐಪಿಎಲ್ ಟೂರ್ನಿಯಿಂದ ದೂರ ಉಳಿದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಹಾಗೂ ಆ್ಯಶಸ್ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅನುಭವ ಈ ಬಾರಿ ಆಟಗಾರರ ಆಯ್ಕೆ ಮತ್ತು ನಿರ್ವಹಣೆಯ ನಿರ್ಧಾರಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ. ಸತತವಾಗಿ ನಡೆಯಲಿರುವ ಕಠಿಣ ಟೆಸ್ಟ್ ಪಂದ್ಯಗಳ ನಡುವೆ ವೇಗದ ಬೌಲರ್‌ಗಳ ಫಿಟ್ನೆಸ್ ಕಾಪಾಡಿಕೊಳ್ಳುವುದು ತಂಡದ ಪ್ರಮುಖ ಗುರಿಯಾಗಿದೆ.
ಅಲಾನ್ ಬಾರ್ಡರ್ ಪದಕ ಗೆದ್ದ ಟ್ರಾವಿಸ್ ಹೆಡ್, ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಶಸ್ತಿ ವಿಜೇತರ ವಿವರ!
“ದೇಶಕ್ಕಾಗಿ ಆಡುವುದೋ ಅಥವಾ ಫ್ರಾಂಚೈಸಿಗಾಗಿ ಆಡುವುದೋ ಎಂಬ ವಿಚಾರದ ಬಗ್ಗೆ ಜನರು ಮಾತನಾಡುತ್ತಾರೆ ಎಂಬುದು ನನಗೆ ಗೊತ್ತು. ಆದರೆ ಈ ಅವಧಿಯಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಮ್ಮ ವೇಗದ ಬೌಲರ್‌ಗಳಿಗೆ ದೇಹವನ್ನು ವಿಶ್ರಾಂತಿಗೊಳಿಸಲು ಮತ್ತು ಸಂಪೂರ್ಣವಾಗಿ ಸಜ್ಜುಗೊಳಿಸಲು ಅವಕಾಶ ನೀಡುವುದು. ಇದರಿಂದ ಎಲ್ಲರೂ ಮಾತನಾಡುತ್ತಿರುವ 20 ಅಥವಾ 21 ಪಂದ್ಯಗಳ ಅವಧಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಅವರಿಗೆ ಸಾಧ್ಯವಾಗುತ್ತದೆ,” ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
“ನಮ್ಮ ಆಟಗಾರರು ತಮ್ಮ ಕ್ರಿಕೆಟ್ ಪಯಣದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಹೇಳುತ್ತೇನೆ. ಈ ನಿರ್ಧಾರಗಳಿಗೆ ವೈದ್ಯಕೀಯ ತಂಡ ಮತ್ತು ಕೋಚ್‌ಗಳೊಂದಿಗೆ ನಡೆಯುವ ಚರ್ಚೆಗಳು ಕೂಡ ಆಧಾರವಾಗಿರುತ್ತವೆ. ಅವರು ಆಸ್ಟ್ರೇಲಿಯಾ ಪರ ಆಡಲು ಬಯಸುತ್ತಾರೆ. ಅದರ ಬೆನ್ನಲ್ಲೇ ಆ್ಯಶಸ್ ಸರಣಿಯೂ ಇದೆ. ಇದಾದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ವಿಶ್ವಕಪ್ ಕೂಡ ಎದುರಾಗುವ ಸಾಧ್ಯತೆಯಿದೆ. ಆ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹಲವು ಪ್ರಮುಖ ಪಂದ್ಯಗಳು ಮತ್ತು ಸರಣಿಗಳಿವೆ. ಹೀಗಾಗಿ ನಾವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ʻಸಿಎಸ್‌ಕೆ ತಂಡದಲ್ಲಿದ್ದಾಗ ಈ ವೇಗಿ ನನಗೆ ಬೌಲ್ ಮಾಡಲು ನಿರಾಕರಿಸಿದ್ದರುʼ: ಚೇತೇಶ್ವರ್ ಪೂಜಾರ!
ಮೆಕ್‌ಡೊನಾಲ್ಡ್ ಅವರ ಪ್ರಕಾರ, ಐಪಿಎಲ್ ಆಟಗಾರರಿಗೆ ಕಡ್ಡಾಯವಾಗಿರುವ ಬದ್ಧತೆಯಲ್ಲ; ಅದು ಒಂದು ಆಯ್ಕೆಯಾಗಿದೆ. ಪ್ರತಿಯೊಬ್ಬ ಆಟಗಾರನ ಕೆಲಸದ ಹೊರೆ, ಫಿಟ್ನೆಸ್ ಮತ್ತು ಪ್ರಸ್ತುತ ಫಾರ್ಮ್ ಅನ್ನು ಪರಿಶೀಲಿಸಿದ ಬಳಿಕವೇ ಐಪಿಎಲ್‌ನಲ್ಲಿ ಭಾಗವಹಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. “ಎಲ್ಲವನ್ನೂ ಮಾಡಬಹುದು ಎಂಬ ನಿಲುವಿನಿಂದಲೇ ನಾವು ಆರಂಭಿಸಬೇಕು. ಆ ರೀತಿಯಲ್ಲಿ ಯೋಚಿಸಿದರೆ, ನಂತರ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು,” ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.