ಮುಂಬಯಿ, ಡಿ.3: ಭಾರತದ ತಾರಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಅವರ ಮದುವೆ(Smriti Mandhana Wedding) ಸುತ್ತ ಸೃಷ್ಟಿಯಾಗಿರುವ ನಿಗೂಢತೆ ಮುಂದುವರಿದಿದ್ದು, ದಿನಕ್ಕೊಂದು ಹೊಸ ಸುದ್ದಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ನಡುವೆ ಪಲಾಶ್(Palash Muchhal) ಮತ್ತು ಸ್ಮೃತಿ ಇಬ್ಬರು ಕೂಡ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ‘ಎವಿಲ್ ಐ’ (Evil Eye) ಎಮೋಜಿಯನ್ನು ಸೇರಿಸಿದ್ದರು. ಇದರ ಬೆನ್ನಲ್ಲೇ ಈ ಜೋಡಿ ಡಿಸೆಂಬರ್ 7ಕ್ಕೆ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಮೃತಿ ಅವರ ಸಹೋದರ ಸ್ಪಷ್ಟನೆ ನೀಡಿದ್ದು ಇದು ಸುಳ್ಳು ಸುದ್ದಿ ಎಂದಿದ್ದಾರೆ.
"ಈ ವದಂತಿಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಮದುವೆ ಮುಂದೂಡಲ್ಪಟ್ಟಿದೆ" ಎಂದು ಸ್ಮೃತಿಯ ಅಣ್ಣ ಶ್ರವಣ್ ಮಂಧಾನ ಖಚಿತಪಡಿಸಿದ್ದಾರೆ.
ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಛಲ್ ಅವರ ವಿವಾಹ ನವೆಂಬರ್ 23ರಂದು ನಿಗದಿಯಾಗಿತ್ತು. ಆದರೆ, ಮದುವೆಯ ದಿನ ಮಂದಾನ ತಂದೆ ಶ್ರೀನಿವಾಸ್ ಅವರು ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ಇದಾದ ಒಂದು ದಿನದ ಬಳಿಕ ಪಲಾಶ್ ಕೂಡ ಆಸ್ಪತ್ರೆಗೆ ದಾಖಲಾದರು.
ಇದಾದ ಬಳಿಕ ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೊ ಮತ್ತು ಫೋಟೊಗಳನ್ನು ಮಂಧನಾ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ ತೀವ್ರ ಕುತೂಹಲ ಮೂಡಿಸಿದ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಇನ್‌ಸ್ಟಾಗ್ರಾಮ್ ಬಯೋ!
ಮದುವೆ ದಿನ ಸ್ಮೃತಿ ಅವರ ಭಾವಿ ಪತಿ ಎಂದು ಕರೆಸಿಕೊಳ್ಳುತ್ತಿರುವ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್, ಮಹಿಳಾ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬರ ಜೊತೆ ಪ್ರಣಯದಲ್ಲಿದ್ದಾಗ ಸ್ಮೃತಿ ಬಳಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಆಘಾತಕ್ಕೊಳಗಾದ ಸ್ಮೃತಿ ಮದುವೆಯನ್ನು ಸ್ಥಗಿತಗೊಳಿಸಲು ಇದೇ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ. ತಮ್ಮ ವಿರುದ್ಧ ಇಷ್ಟೆಲ್ಲಾ ಗಂಭೀರ ಆರೋಪ ಕೇಳಿಬರುತ್ತಿದ್ದರೂ ಪಲಾಶ್ ಸ್ಪಷ್ಟನೆ ನೀಡಿಲ್ಲ. ಅವರ ಕುಟುಂಬಸ್ಥರೂ ತುಟಿ ಬಿಚ್ಚುತ್ತಿಲ್ಲ. ಇದು ಈ ವಿವಾದಕ್ಕೆ ಪುಷ್ಠಿ ನೀಡುತ್ತಿದೆ.
ಮಂಧಾನ ಮತ್ತು ಪಲಾಶ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ‘ಎವಿಲ್ ಐ’ (Evil Eye) ಎಮೋಜಿಯನ್ನು ಸೇರಿಸಿರುವುದು ಇಬ್ಬರ ಸಂಬಂಧದ ಕುರಿತಾದ ಊಹಾಪೋಹಗಳಿಗೆ ಕಾರಣವಾಗಿದೆ. ಈ ಎಮೋಜಿ ಅವರಿಬ್ಬರ ಸಂಬಂಧದ ಮೇಲೆ ಯಾರ ದೃಷ್ಟಿ ಬೀಳದಿರಲಿ ಎಂಬ ಸಂದೇಶ ನೀಡುತ್ತಿದೆಯೇ? ಅಥವಾ ಇಬ್ಬರೂ ಸಂಬಂಧದಲ್ಲಿ ಮುಂದುವರೆಯುವ ಬಗ್ಗೆ ಯೋಚಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.