ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೌರವ್‌ ಗಂಗೂಲಿ ಹೆಸರಿನಲ್ಲಿ ನಕಲಿ ಪೋಸ್ಟ್‌: ಪೊಲೀಸ್‌ ದೂರು ದಾಖಲಿಸಿದ ದಾದಾ!

ತಮ್ಮ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಫೇಸ್‌ಬುಕ್ ಪುಟ ಮತ್ತು ಮಾಧ್ಯಮ ಸಂಸ್ಥೆಯ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮ ಮನೆ ಮೇಲೆ ಇಡಿ ದಾಳಿ ನಡೆದಿದೆ ಎಂಬ ನಕಲಿ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದ್ದು, ಅದು ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ಪೊಲೀಸ್‌ ದೂರು ದಾಖಲಿಸಿದ ಸೌರವ್‌ ಗಂಗೂಲಿ.

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾನಹಾನಿಕಾರಕ ಮತ್ತು ಸುಳ್ಳು ಮಾಹಿತಿಯ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ (Sourav Ganguly) ಅವರು ಕೋಲ್ಕತ್ತಾದ ಥಾಕೂರ್‌ಪುರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ಅನಧಿಕೃತ ಫೇಸ್‌ಬುಕ್ ಪುಟವಾದ ʻಸೌರವ್‌ ಗಂಗೂಲಿ ಫ್ಯಾನ್ಸ್‌ʼ ಹಾಗೂ ಮಾಧ್ಯಮ ಸ್ಪೋರ್ಟ್ಸ್‌ವಿಕಿ ವಿರುದ್ಧ ದೂರು ನೀಡಿದ್ದಾರೆ. ವರದಿಗಳ ಪ್ರಕಾರ, ಗಂಗೂಲಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ ಎಂದು ಪೋಸ್ಟ್‌ನಲ್ಲಿ ಸುಳ್ಳು ಮಾಹಿತಿ ಪ್ರಕಟಿಸಲಾಗಿತ್ತು. ಈ ಆರೋಪವನ್ನು ಗಂಗೂಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಅದು ಸುಳ್ಳು, ಆಧಾರರಹಿತ ಮತ್ತು ಜನರನ್ನು ತಪ್ಪುದಾರಿಗೆಳೆಯುವ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಕಟ್ಟುಕಥೆಗಳನ್ನು ಹರಡಲಾಗುತ್ತಿದೆ ಎಂದು ಗಂಗೂಲಿ ಆರೋಪ ಮಾಡಿದ್ದಾರೆ. ಜೂನ್ 15ರಂದು ದೂರು ದಾಖಲಾದ ಬಳಿಕ, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾದ ಮಾಹಿತಿಯ ಮೂಲ ಮತ್ತು ಜವಾಬ್ದಾರರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಶ್ರೀಲಂಕಾ ಎ ಆಟಗಾರನನ್ನು ತಳ್ಳಿದ ವೈಭವ್‌ ಸೂರ್ಯವಂಶಿ, ಸೂಪರ್‌ ಓವರ್‌ ಬಳಿಕ ಹೈಡ್ರಾಮಾ!

ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದಲೇ ಇಂತಹ ಕಟ್ಟುಕಥೆಗಳು ಮತ್ತು ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ಮಾಜಿ ನಾಯಕ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಮೂಲ ಹಾಗೂ ಅವುಗಳ ಹಿಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಗಂಗೂಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ಮಾನಹಾನಿಕಾರಕ ಮಾಹಿತಿಗೆ ಗುರಿಯಾಗಿರುವ ಮೊದಲ ಕ್ರಿಕೆಟಿಗರೂ ಅಲ್ಲ. 2023ರಲ್ಲಿ ಭಾರತದ ದಿಗ್ಗಜ ಬ್ಯಾಟರ್ ಸಚಿನ್‌ ತೆಂಡೂಲ್ಕರ್‌ ಅವರ ಹೆಸರನ್ನು, ಚಿತ್ರವನ್ನು ಹಾಗೂ ಧ್ವನಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಜಾಹೀರಾತುಗಳು ಮತ್ತು ಆನ್‌ಲೈನ್ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗಿತ್ತು.



ಈ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಮತ್ತು ಡಿಜಿಟಲ್ ವಂಚನೆಗಳ ಹೆಚ್ಚುತ್ತಿರುವ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದ್ದು, ಸಾರ್ವಜನಿಕ ವ್ಯಕ್ತಿಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿವೆ.

IND vs AFG: ಎರಡನೇ ಏಕದಿನ ಪಂದ್ಯದ ನಿಮಿತ್ತ ಭಾರತಕ್ಕೆ ಒಂದು ಬದಲಾವಣೆ ಸೂಚಿಸಿದ ಆಕಾಶ್‌ ಚೋಪ್ರಾ!

2023ರಲ್ಲಿ ಸಚಿನ್‌ ತೆಂಡೂಲ್ಕರ್ ತಮ್ಮ ಹೆಸರನ್ನು, ಚಿತ್ರವನ್ನು ಮತ್ತು ಧ್ವನಿಯನ್ನು ದುರುಪಯೋಗಪಡಿಸಿಕೊಂಡು ಜನರನ್ನು ತಪ್ಪುದಾರಿಗೆಳೆಯುವ ಹಾಗೂ ಆನ್‌ಲೈನ್‌ನಲ್ಲಿ ವಂಚಿಸುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ, ಮುಂಬೈ ಪೊಲೀಸ್‌ ಅಪರಾಧ ಸಂಸ್ಥಗೆ ದೂರು ಸಲ್ಲಿಸಿದ್ದರು.

ತೆಂಡೂಡೂಲ್ಕರ್ ಅವರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸ್‌ ಸೈಬರ್‌ ಸೆಲ್‌ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 (ವಂಚನೆ), 465 (ನಕಲಿ ದಾಖಲೆ ಸೃಷ್ಟಿ) ಮತ್ತು 500 (ಮಾನಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.

ಸಾರ್ವಜನಿಕ ವ್ಯಕ್ತಿಗಳ ಗುರುತನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಜಾಹೀರಾತುಗಳು, ನಕಲಿ ಸುದ್ದಿಗಳು ಮತ್ತು ವಂಚನಾ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿರುವುದು, ಡಿಜಿಟಲ್ ಭದ್ರತೆ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ವಿರುದ್ಧದ ಹೋರಾಟಕ್ಕೆ ಮಹತ್ವದ ಉದಾಹರಣೆಯಾಗಿದೆ.