Ellyse Perry: 2026ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಸ್ಟಾರ್ ಆಟಗಾರ್ತಿ ಔಟ್, ಆರ್‌ಸಿಬಿಗೆ ಆಘಾತ!
2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರಿ ಅವರು ಮುಂದಿನ ಟೂರ್ನಿಯಿಂದ ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆರ್‌ಸಿಬಿ ಮಹಿಳಾ ತಂಡಕ್ಕೆ ಟೂರ್ನಿಯ ಆರಂಭಕ್ಕೂ ಮುನ್ನ ಭಾರಿ ಹಿನ್ನಡೆಯಾಗಿದೆ.
2026ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಎಲಿಸ್ ಪೆರಿ ಔಟ್. -
ನವದೆಹಲಿ: ಮುಂದಿನ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಿಂದ (WPL 2026) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರಿ (Ellyse Perry) ಅವರು ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಆ ಮೂಲಕ ಡಬ್ಲ್ಯಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಸ್ಮೃತಿ ಮಂಧಾನಾ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. 2024ರ ಚಾಂಪಿಯನ್ಸ್ ತಂಡಕ್ಕೆ ಎಲಿಸ್ ಪೆರಿ ಅವರ ಸ್ಥಾನಕ್ಕೆ ಸಯಾಲಿ ಸಾತ್ಘರೆ ಅವರನ್ನು ಸೇರಿಸಿಕೊಳ್ಳಲಾಗಿದೆ. ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದ ಆವೃತ್ತಿಯಲ್ಲಿ ಎಲಿಸ್ ಪೆರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದರು. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಆರು ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಕೂಡ ಎಲಿಸ್ ಪೆರಿ ಅವರ ಹೆಸರಿನಲ್ಲಿದೆ.
ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆಡಿದ 25 ಪಂದ್ಯಗಳಿಂದ ಅವರು 972 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಎಂಟು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 8.25ರ ಎಕಾನಮಿ ರೇಟ್‌ನಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎಲಿಸ್ ಪೆರಿ ಸ್ಥಾನಕ್ಕೆ ಆರ್‌ಸಿಬಿಗೆ ಸೇರಿರುವ ಸಾತ್ಘರೆ ಅವರು ಈ ಹಿಂದಿನ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಆಡಿದ್ದರು. ಆದರೆ, ಅವರನ್ನು ಮುಂದಿನ ಟೂರ್ನಿಗೆ ಜಿಟಿ ಉಳಿಸಿಕೊಂಡಿರಲಿಲ್ಲ ಹಾಗೂ ಕಳೆದ ತಿಂಗಳು ನಡೆದಿದ್ದ ಮಿನಿ ಹರಾಜಿನಲ್ಲಿ ಸಯಾಲಿ ಸಾತ್ಘರೆ ಅವರು ಅನ್‌ಸೋಲ್ಡ್ ಆಗಿದ್ದರು. ಆದರೆ, ಇದೀಗ ಎಲಿಸ್ ಪೆರಿ ಹೊರ ನಡೆದಿದ್ದರಿಂದ ಅವರ ಸ್ಥಾನದಲ್ಲಿ ಆರ್‌ಸಿಬಿಗೆ ಬಂದಿದ್ದಾರೆ. ಆಸೀಸ್ ಆಲ್‌ರೌಂಡರ್ ನಿರ್ಗಮನದ ಬಳಿಕ ಆರ್‌ಸಿಬಿ ತಂಡದಲ್ಲಿ ದಕ್ಷಿಣ ಆಫ್ರಿಕಾದ ನಡಿನ್ ಡಿ ಕ್ಲಾರ್ಕ್ ಅವರು ಆಲ್‌ರೌಂಡರ್ ರೂಪದಲ್ಲಿ ಇದ್ದಾರೆ.
ICC Women's rankings: ಟಿ20ಐ ಶ್ರೇಯಾಂಕದಲ್ಲಿ ಪ್ರಗತಿ ಕಂಡ ಶಫಾಲಿ ವರ್ಮಾ, ರೇಣುಕಾ ಸಿಂಗ್!
ಜನವರಿ 9 ರಂದು ಎರಡು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಮೊದಲನೇ ಪಂದ್ಯವನ್ನು ಆರ್‌ಸಿಬಿ ಆಡಲಿದೆ. ಈ ಪಂದ್ಯ ನವ ಮುಂಬೈನ ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನೆಡಯಲಿದೆ.
ಸುಥರ್ಲೆಂಡ್, ನಾರಿಸ್ ಔಟ್
ಆಸ್ಟ್ರೇಲಿಯಾ ತಂಡದ ಮತ್ತೊಬ್ಬ ಆಟಗಾರ್ತಿ ಅನ್ನಾಬೆಲ್ ಸುಥರ್ಲೆಂಡ್ ಹಾಗೂ ಯುಎಸ್‌ಎ ತಂಡದ ವೇಗದ ಬೌಲರ್ ತಾರಾ ನಾರಿಸ್ ಅವರು ಕೂಡ ಈ ಟೂರ್ನಿಯಿಂದ ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುಥರ್ಲೆಂಡ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರ ಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ಅಲಾನಾ ಕಿಂಗ್ ಮೂಲ ಬೆಲೆ 30 ಲಕ್ಷ ರು. ಗಳಿಗೆ ಡೆಲ್ಲಿಗೆ ಸೇರ್ಪಡೆಯಾಗಿದ್ದಾರೆ.
🚨 𝐎𝐟𝐟𝐢𝐜𝐢𝐚𝐥 𝐀𝐧𝐧𝐨𝐮𝐧𝐜𝐞𝐦𝐞𝐧𝐭: Ellyse Perry has decided to pull out of Tata WPL 2026 for personal reasons. 🚨
— Royal Challengers Bengaluru (@RCBTweets) December 30, 2025
We’ll be missing you both on and off the field, Pez! 🥺
We know you’ll be rooting for us from back home! ❤️#PlayBold #ನಮ್ಮRCB pic.twitter.com/tvX9FTkXpJ
ಎಡಗೈ ವೇಗಿ ತಾರಾ ನಾರಿಸ್ 2026ರ ಜನವರಿ 18 ರಿಂದ ಫೆಬ್ರವರಿ 1 ರವರೆಗೆ ನೇಪಾಳದಲ್ಲಿ ನಡೆಯಲಿರುವ 2026ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಕ್ಕಾಗಿ ಯುಎಸ್ಎ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪರಿಣಾಮವಾಗಿ, ಅವರು ಡಬ್ಲ್ಯೂಪಿಎಲ್ ಟೂರ್ನಿಯನ್ನು ಕಳೆದುಕೊಳ್ಳಲಿದ್ದಾರೆ. 2023 ರಲ್ಲಿ, ನಾರಿಸ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಆಗಿ ಇತಿಹಾಸ ಬರೆದಿದ್ದರು. ಇವರ ಸ್ಥಾನಕ್ಕೆ ಆಸ್ಟ್ರೇಲಿಯನ್ ಆಲ್‌ರೌಂಡರ್ ಚಾರ್ಲಿ ನಾಟ್ ಇವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.